ಮೋದಿ ಬಳಸುವ ಹೆಲಿಕಾಪ್ಟರ್ ಎಲ್ಲಾ ಋತುಮಾನಗಳಲ್ಲೂ ಹಾರಲು ಯೋಗ್ಯವಾದು: ಮೋದಿ ಭದ್ರತಾ ಲೋಪ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್

ನವದೆಹಲಿ: ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪವು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ಬಿಜೆಪಿ ಏನೆ ಆರೋಪ ಮಾಡಿದರೂ ಪಂಜಾಬ್ ಕಾಂಗ್ರೆಸ್ ಸರ್ಕಾರ ಎಲ್ಲಾ ಆರೋಪಗಳನ್ನು ತಳ್ಳಿಹಾಕುತ್ತಲೇ ಇದೆ.

ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಚಾಪರ್ ಎಲ್ಲಾ ಋತುಮಾನಗಳಲ್ಲೂ ಹಾರಲು ಯೋಗ್ಯವಾದುದಾಗಿದೆ ಎಂದು ಹೇಳಿದೆ.

ಸರ್ವಋತುಮಾನಗಳಿಗೂ ಒಗ್ಗಿಕೊಳ್ಳುವ, ಹಾರುವ ಹೆಲಿಕಾಪ್ಟರ್ ಬಿಟ್ಟು ಪ್ರಧಾನಿ ಮೋದಿ ಫಿರೋಜ್‍ಪುರ ಕಾರ್ಯಕ್ರಮಕ್ಕೆ ತಲುಪಲು ರಸ್ತೆ ಮಾರ್ಗ ಅನುಸರಿಸಿದ್ದಾರೆ. ಹೆಲಿಕಾಪ್ಟರ್ ಬಳಸದಂತೆ ಅವರೇ ನಿರ್ಧರಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಪಂಜಾಬ್ ಪ್ರದೇಶವು ಗುಡ್ಡಗಾಡು ಪ್ರದೇಶವೂ ಅಲ್ಲ ಎಂದು ಸಮರ್ಥನೆ ನೀಡಿದೆ.

ಭದ್ರತಾ ಲೋಪ ಸಂಬಂಧ ಪ್ರಧಾನಿ ಮೋದಿ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ದಾಳಿಗಳು ಮುಂದುವರಿದಿವೆ.

Leave a Reply

Your email address will not be published. Required fields are marked *