ಡಿಎಂಕೆ ಖಜಾಂಚಿ ದುರೈ ಮುರುಗನ್ ನಿವಾಸದ ಮೇಲೆ ಐಟಿ ಲಗ್ಗೆ !

ನ್ಯೂಸ್ ಕನ್ನಡ ವರದಿ : ಈಗಾಗಲೇ ರಾಜ್ಯದ ಮೈತ್ರಿ ನಾಯಕರ ಮೇಲೆ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು, ಇದಕ್ಕಾಗಿ ಕೇಂದ್ರದ ವಿರುದ್ಧ ಸಮರ ಸಾರಲು ಸಿದ್ಧವಾಗಿರುವ ನಾಯಕರ ಬೆನ್ನಲ್ಲೇ ಈಗ ಡಿಎಂಕೆ ಖಜಾಂಚಿ ದುರೈ ಮುರುಗನ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಜತೆಗೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ, ಇದು ರಾಜಕೀಯ ಪ್ರೇರಿತ ದಾಳಿ ಎಂದು ಡಿಎಂಕೆ ನಾಯಕರು ರಾಜ್ಯ ಮೈತ್ರಿ ನಾಯಕರ ರೀತಿಯಲ್ಲಿಯೇ ಆರೋಪಿಸುತ್ತಿದ್ದಾರೆ.

ತಮಿಳುನಾಡಿನ ವೆಲ್ಲೂರು ಬಳಿ ಇರುವ ಮುರುಗನ್ ನಿವಾಸದಲ್ಲಿ ಅಕ್ರಮ ಹಣದ ವಹಿವಾಟು ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಚುನಾವಣಾ ಆಯೋಗ, ಐಟಿ ಅಧಿಕಾರಿಗಳ ಜತೆ ಸೇರಿ ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಶೋಧ ಕಾರ್ಯಕ್ಕೆ ಆಗಮಿಸಿದ ಅಧಿಕಾರಿಗಳನ್ನು ತಡೆದ ಮುರಗನ್ ಅವರು ಕಾನೂನು ಸಲಹೆಗಾರರು, ಸರ್ಚ್ ವಾರೆಂಟ್ ಹಾಗೂ ಸೂಕ್ತ ದಾಖಲೆಗಳನ್ನು ತರುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಒಟ್ಟಿನಲ್ಲಿ ಹೇಳುವುದಾದರೆ ಕೇಂದ್ರ ಐಟಿ ದಾಳಿಯಿಂದಾಗಿ ಎದುರಾಳಿಗಳ ಕಾಲೆಳೆಯುವುದು ಸಾಮಾನ್ಯವಾಗಿದೆ.

Leave a Reply

Your email address will not be published. Required fields are marked *