ಮೂರೇ ತಿಂಗಳಿಗೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ-ನಿಕ್ ಜೋಡಿ ?

ನ್ಯೂಸ್ ಕನ್ನಡ ವರದಿ : ಕಳೆದ ಡಿಸೆಂಬರ್‌ನಲ್ಲಷ್ಟೇ ಮದುವೆಯಾದ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್, ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ, ಮನಸ್ತಾಪ ನಡೆಯುತ್ತಿದೆಯಂತೆ. ಕೆಲಸದ ವಿಚಾರವಾಗಿ ಜಗಳ, ಇಬ್ಬರೂ ಜತೆಯಾಗಿ ಕಳೆಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಭಿನ್ನಾಭಿಪ್ರಾಯಗಳ ಕಾರಣ ಇವರ ಸಾಂಸಾರಿಕ ಜೀವನ ಕೊನೆಯ ಹಂತದಲ್ಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವರದಿ ಪ್ರಕಾರ ಈಗಾಗಲೆ ಈ ಜೋಡಿ ಡಿವೋರ್ಸ್‌ಗೆ ಮುಂದಾಗಿದೆಯಂತೆ.

ನಿಕ್ ಜೋನಾಸ್ ಕುಟುಂಬದಲ್ಲೂ ಪ್ರಿಯಾಂಕಾ ಜತೆಗಿನ ಬಾಂಧವ್ಯ ಹದಗೆಟ್ಟಿದೆಯಂತೆ. ಈ ಸಂಬಂಧವನ್ನು ಇಲ್ಲಿಗೆ ಮುರಿದುಕೊಳ್ಳಲು ನಿಕ್‌ಗೆ ಸೂಚಿಸಲಾಗಿದೆ ಎಂದಿವೆ ಮೂಲಗಳು. ಪ್ರಿಯಾಂಕಾಗೆ 36 ವಯಸ್ಸಾಗಿದ್ದರೂ ಇನ್ನೂ 21ರ ಯುವತಿ ತರಹ ಆಡುತ್ತಿರುವುದು ನಿಕ್ ಕುಟುಂಬಿಕರು ವಿಚ್ಛೇದನದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರಂತೆ. ಈಗ ವಿಚ್ಛೇದನಕ್ಕೆ ಮುಂದಾದರೆ ಮುಖ್ಯವಾಗಿ ಹಣಕಾಸು ವಿಚಾರಕ್ಕಾಗಿ ತಿಕ್ಕಾಟ ಶುರುವಾಗಲಿದೆ. ಇನ್ನೊಂದು ಮದುವೆ ಎಂದರೆ ನಿಕ್‍ಗೂ ಕಷ್ಟ. ಹಾಗಾಗಿ ಸ್ವಲ್ಪ ಸಮಯ ಕಾಯಲು ಚಿಂತನೆ ನಡೆದಿದೆ ಎನ್ನಲಾಗಿದೆ. ಒಟ್ಟಾರೆ ಪ್ರಿಯಾಂಕಾ ಚೋಪ್ರಾ ಸಾಂಸಾರಿಕ ಜೀವನ ಶೀಘ್ರದಲ್ಲೇ ಮತ್ತೊಂದು ಗಮನಾರ್ಹ ರೂಪ ತಾಳುವುದೇ ಎಂದು ನೋಡಬೇಕಾಗಿದೆ.

Leave a Reply

Your email address will not be published. Required fields are marked *