ಸುಮಲತಾ ಅಂಬರೀಷ್‌ ವಿರುದ್ಧ ಮತ್ತೊಂದು ತಂತ್ರ : ಮತ ಕಸಿಯಲು ಗೊಂದಲ ಮೂಡಿಸುವ ಪ್ರಯತ್ನ !

ನ್ಯೂಸ್ ಕನ್ನಡ ವರದಿ : ಈಗಾಗಲೇ ಮಂಡ್ಯ ಜಿಲ್ಲೆಯ ರಾಜಕೀಯ ರಂಗದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಅಂಬರೀಷ್ ಸುಮಲತಾ ನಡುವೆ ಭಾರೀ ಪೈಪೋಟಿ ನಡೆದಿದ್ದು, ಲೋಕಸಭಾ ಚುನಾವಣಾ ಪ್ರಚಾರ ಕಣದಲ್ಲಿ ಪರಸ್ಪರ ಟೀಕಾಸ್ತ್ರಗಳ ಪ್ರಯೋಗದ ನಡುವೆ ಸುಮಲತಾ ವಿರುದ್ಧ ಗೊಂದಲ ಮೂಡಿಸುವ ಪ್ರಯತ್ನವೂ ನಡೆಯುತ್ತಿದೆ. ಅದೇನೆಂದರೆ ಚುನಾವಣಾ ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿ, ಚಿತ್ರನಟಿ ಸುಮಲತಾ ಅಂಬರೀಷ್ ಅವರಂತೆಯೇ ಇನ್ನೊಬ್ಬ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರೂ ಕನ್ನಡಕ, ಸೀರೆ, ಕುಪ್ಪಸ ಧರಿಸಿಕೊಂಡು ತೆಗೆಸಿಕೊಂಡ ಭಾವಚಿತ್ರವನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.

ಇವರು ಸುಮಲತಾ ಅಂಬರೀಷ್ ಅವರಂತೆಯೇ ತೆಗೆದುಕೊಂಡ ಭಾವಚಿತ್ರ ವಿದ್ಯುನ್ಮಾನ ಮತಯಂತ್ರಗಳಲ್ಲಿ ಪ್ರದರ್ಶನವಾಗುವ ಅಭ್ಯರ್ಥಿಗಳ ಭಾವಚಿತ್ರದ ಸ್ಥಳದಲ್ಲಿ ಇದೇ ಫೋಟೋವನ್ನು ಹಾಕಬೇಕೆಂದು ಕೋರಿದ್ದಾರೆ. ಅದಕ್ಕೆ ಜಿಲ್ಲಾ ಚುನಾವಣಾಕಾರಿಯೂ ಸ್ಪಂದಿಸಿ ಅದೇ ಫೋಟೋವನ್ನು ಹಾಕಲು ಸಮ್ಮಿತಿಸಿದ್ದಾರೆ. ಇನ್ನು ಸುಮಲತಾ ಅಂಬರೀಷ್ ಅವರು 20ನೇ ಕ್ರಮಸಂಖ್ಯೆ ಹೊಂದಿದ್ದರೆ, ಅವರಂತೆಯೇ ವೇಷ ಮಾಡಿಕೊಂಡು ಭಾವಚಿತ್ರ ತೆಗೆಸಿರುವ ಸುಮಲತಾ ಅವರಿಗೆ 19ನೇ ಕ್ರಮಸಂಖ್ಯೆ ದೊರೆತಿದೆ. ಈ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಸುಮಲತಾ ಅಂಬರೀಷ್, ನನ್ನದೇ ಹೆಸರಿನ ಮತ್ತೊಬ್ಬ ಹೆಸರಿಗೆ ಅಭ್ಯರ್ಥಿಗೆ ನನ್ನದೇ ರೀತಿಯಲ್ಲಿ ಡ್ರೆಸ್ ಹಾಗೂ ಕನ್ನಡಕ ಹಾಕಿಸಿ ಕೀಳು ಮಟ್ಟದ ರಾಜಕಾರಣ ಮಾಡಲಾಗುತ್ತಿದೆ. ಎಲ್ಲರೂ ಗೆಲ್ಲಬೇಕು ಅಂತಾನೇ ಫೈಟ್ ಮಾಡುತ್ತಾರೆ. ಅವರೇನು ಸೋಲಲು ಚುನಾವಣೆಗೆ ನಿಲ್ಲಿಸಿದ್ದಾರಾ ಎಂದು ಪ್ರಶ್ನಿಸಿ, ಎದುರೇಟು ನೀಡಿದ್ದಾರೆ.

Leave a Reply

Your email address will not be published. Required fields are marked *