ಮಂಡ್ಯ ಜಿಲ್ಲೆಯ ಎಲ್ಲಾ ಟಿಕೇಟ್ ನಾನು ಹೇಳಿದವರಿಗೆ ಮಾತ್ರ ನೀಡಬೇಕು: ಅಂಬರೀಶ್ ಹೊಸ ವರಸೆ!

ನ್ಯೂಸ್ ಕನ್ನಡ ವರದಿ(08-04-2018): ಮಂಡ್ಯ ಜಿಲ್ಲೆಯ ನಾಲ್ಕು ಕ್ಷೇತ್ರದ ಟಿಕೆಟ್ ನಾನು ಹೇಳಿದ ಅಭ್ಯರ್ಥಿಗಳಿಗೆ ನೀಡಬೇಕು ಎಂಬ ಹೊಸ ಬೇಡಿಕೆಯನ್ನು ಮಾಜಿ ಸಚಿವ ಅಂಬರೀಶ್ ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ಮಂಡ್ಯದ ಟಿಕೆಟ್ ನನಗೆ ನೀಡುವುದರ ಜೊತೆಗೆ ಶ್ರೀರಂಗ ಪಟ್ಟಣ, ಮದ್ದೂರು, ಕೆ.ಆರ್.ಪೇಟೆ ಹಾಗೂ ಮೇಲುಕೊಟೆ ಕ್ಷೇತ್ರಗಳ ಟಿಕೆಟ್ ನಾನು ಹೇಳಿದ ಅಭ್ಯರ್ಥಿಗಳಿಗೆ ನೀಡಬೇಕೆಂದು ಅಂಬರೀಶ್ ಒತ್ತಾಯಿಸಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಪುಟ್ಟೇಗೌಡ, ಮದ್ದೂರಿನಲ್ಲಿ ಕಲ್ಪನಾ ಸಿದ್ದರಾಜು, ಕೆ.ಆರ್.ಪೇಟೆಯಲ್ಲಿ ಕಿಕ್ಕೇರಿ ಸುರೇಶ ಹಾಗೂ ಮೇಲುಕೋಟೆಯಲ್ಲಿ ಎಲ್.ಡಿ.ರವಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟದ್ದಾರೆ.

ಸ್ಕ್ರೀನಿಂಗ್ ಕಮಿಟಿ ಸಭೆಯು ನಾಳೆ ನಡೆಯಲಿದ್ದು, ಮಂಡ್ಯ ಬಿಟ್ಟು ಬೇರೆಲ್ಲಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮ ಗೊಳಿಸಿರುವ ಕಾಂಗ್ರೆಸ್ ಮುಖಂಡರಿಗೆ ಅಂಬರೀಶ್ ಅವರ ಹೊಸ ಬೇಡಿಕೆಯು ತಲೆನೋವಾಗಿ ಪರಿಣಮಿಸಿದೆ. ಇಂದು ಸಂಜೆಯ ಒಳಗೆ ತನ್ನ ನಿರ್ಧಾರವನ್ನು ತಿಳಿಸುವಂತೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅಂಬರೀಶ್ ಗೆ ಡೆಡ್ ಲೈನ್ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Leave a Reply

Your email address will not be published. Required fields are marked *