ಅಧಿಕಾರಕ್ಕಾಗಿ ಬಿಜೆಪಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ!: ಮಾಯಾವತಿ

ನ್ಯೂಸ್ ಕನ್ನಡ ವರದಿ : ಲೋಕಸಭೆ ಚುನಾವಣೆಗೆ ಕೆಲವೇ ದಿನಗಳಿರುವ ಬೆನ್ನಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬಹುಜನ ಸಮಾಜ ಪಕ್ಷದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಾಯಾವತಿ, ಈಗಾಗಲೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ಬಿಎಸ್ಪಿ ಖಾತೆ ತೆರೆದಿದ್ದು, ಎನ್.ಮಹೇಶ್ ಸಚಿವರೂ ಆಗಿದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಎಸ್ಪಿ ಅಧಿಕಾರಕ್ಕೆ ಬಂದರೆ ಎನ್.ಮಹೇಶ್ ಅವರನ್ನ ಮುಖ್ಯಮಂತ್ರಿ ಮಾಡುತ್ತೇನೆ. ಗೆಲುವು ಇಲ್ಲಿಂದಲೇ ಆರಂಭವಾಗಲಿ ಎಂದರು. ಇದೇ ವೇಳೆ ಮಾಯಾವತಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಕಾಂಗ್ರೆಸ್ ನ ನಾಟಕಗಳು ಹಾಗೂ ಮೋದಿ ಸರ್ಕಾರದ ಚೌಕಿದಾರ ಆಟಗಳು ಬಹಳ ದಿನ ನಡೆಯುವುದಿಲ್ಲ. ಸದ್ಯದಲ್ಲೇ ಅಂತ್ಯ ಕಾಣಲಿವೆ ಎಂದು ಹೇಳಿದರು.

ಸ್ವಾತಂತ್ರ್ಯ ನಂತರ ಹಲವು ವರ್ಷಗಳ ಕಾಲ ದೇಶದ ಅಧಿಕಾರ ಕಾಂಗ್ರೆಸ್ ಹಾಗೂ ಬಿಜೆಪಿ ಕೈಯಲ್ಲೇ ಇತ್ತು. ಆದರೆ ದೇಶದಲ್ಲಿ ಬಡತನ ನಿರ್ಮೂಲನೆ ಅವರಿಂದ ಸಾಧ್ಯವಾಗಲಿಲ್ಲ. ಈಗ ಬಡವರಿಗೆ ಹಣ ನೀಡುತ್ತಿದ್ದಂತೆ ಬಡತನ ನಿರ್ಮೂಲನೆಯಾಗುವುದೇ ಎಂದು ಪ್ರಶ್ನಿಸಿದ ಮಾಯಾವತಿ, ಜಿಎಸ್​ಟಿ ಮಧ್ಯಮ ವರ್ಗದವರು, ಬಡವರಿಗೆ ಹೊರೆಯಾಗಿ ಮಾರ್ಪಾಡಾಗಿದೆ. ಮೋದಿ ಸರ್ಕಾರದಕ್ಕೆ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದು ಹೆಚ್ಚಾಗಿದೆ. ಐಟಿ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ. ವಿಪಕ್ಷಗಳನ್ನು ಬೆದರಿಸುವ ತಂತ್ರವನ್ನು ಬಿಜೆಪಿ ಮಾಡುತ್ತಿದೆ. ಅಧಿಕಾರಕ್ಕೊಸ್ಕರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ ಎಂದು ಮಾಯಾವತಿ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಪೂರ್ವ ಪ್ರಣಾಳಿಕೆಗಳು ಕೇವಲ ಪ್ರಣಾಳಿಕೆಗಳಷ್ಟೇ. ಹಣ ಕೊಟ್ಟ ತಕ್ಷಣ ಬಡತನ ದೂರವಾಗುವುದಿಲ್ಲ. ಇನ್ನು ಕರ್ನಾಟಕದಲ್ಲೂ ಕಡು ಬಡವರು, ಅಸಹಾಯಕರು ಇದ್ದಾರೆ. ಅವರಿಗೆ ಒಳಿತು ಮಾಡುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಹಾಗಾಗಿ ಬಿಎಸ್​ಪಿ ಬಡವರಿಗೆ ಉದ್ಯೋಗ ಕೊಟ್ಟು ಬಡತನ ನಿರ್ಮೂಲನ ಮಾಡುವ ಪಣ ತೊಟ್ಟಿದೆ ಎಂದು ಮಾಯಾವತಿ ಹೇಳಿದರು.

Leave a Reply

Your email address will not be published. Required fields are marked *