ಮೋದಿಯವರ ಅಚ್ಛೇ ದಿನ್​ ಮುಗಿದು, ಬುರೇ ದಿನ್ ಆರಂಭವಾಗಿದೆ: ಬಿಎಸ್’ಪಿ ನಾಯಕಿ ಮಾಯಾವತಿ

ನ್ಯೂಸ್ ಕನ್ನಡ ವರದಿ (9-5-2019) ಅಜಮ್​ಗಢ: ಚುನಾವಣಾ ರ್ಯಾಲಿಯಲ್ಲಿ ಎಸ್’ಪಿ-ಬಿಎಸ್’ಪಿ ನಾಯಕರಾದ ಮಾಯಾವತಿ ಹಾಗೂ ಅಖಿಲೇಶ್ ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಚ್ಛೇ (ಒಳ್ಳೇ) ದಿನ್​ ಮುಗಿದಿದ್ದು, ಅವರ ಬುರೇ (ಕೆಟ್ಟ) ದಿನಗಳು ಪ್ರಾರಂಭವಾಗಿವೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ಅಧ್ಯಕ್ಷೆ ಮಾಯಾವತಿ ವ್ಯಂಗ್ಯವಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಎಸ್​ಪಿ- ಬಿಎಸ್​ಪಿ-ಆರ್​ಎಲ್​ಡಿ ಮೈತ್ರಿ ಮಾಡಿಕೊಂಡಿರುವುದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಮೊದಲ 5 ಹಂತದ ಮತದಾನ ಮುಗಿದಿದ್ದು, ಮಹಾಘಟಬಂಧನದ ಕಡೆಗೆ ಮತದಾರರ ಒಲವಿರುವುದು ತಿಳಿದು ಬಂದಿದೆ. ಇನ್ನೂ ಎರಡು ಹಂತದ ಮತದಾನ ಬಾಕಿ ಇದ್ದು, ಮತದಾರರು ಮಹಾಘಟಬಂಧನಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಉಭಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಪ್ರಧಾನಿ ವಿರುದ್ಧ ಮಾಯಾವತಿ ಕಿಡಿಕಾರಿದರು. ಈ ಹಿಂದೆ ಮಹಾಮಿಲಾವಟಿ ಎಂದು ಮಾಯಾವತಿ ಹಾಗೂ ಅಖಿಲೇಶ್ ಮೈತ್ರಿಯನ್ನು ಮೋದಿ ಟೀಕಿಸಿದ್ದರು.

Leave a Reply

Your email address will not be published. Required fields are marked *