ಪ್ರತೀ ಗುರುವಾರ ಬಡವರಿಗೆ ಉಚಿತ ಊಟ ನೀಡುತ್ತಿರುವ ಈ ಹೋಟೆಲ್ ಯಾವುದು ಗೊತ್ತೇ?

ನ್ಯೂಸ್ ಕನ್ನಡ ವರದಿ(08-04-2018): ಆರ್ಥಿಕವಾಗಿ ಹಿಂದುಳಿದವರು, ನಿರ್ಗತಿಕರು, ವಯೋವೃದ್ಧರು ಹಾಗೂ ನಿರಾಶ್ರಿತರು ಸೇರಿದಂತೆ ಹಸಿದವರಿಗೆ ಪ್ರತೀ ಗುರುವಾರದಂದು ಫ್ರೀಯಾಗಿ ಅನ್ನವನ್ನು ನೀಡುವ ಹೋಟೆಲ್ ಒಂದು ಲಂಡನ್ ನಲ್ಲಿ ಇದೆ. ಎಲ್ಲಾ ಗುರುವಾರದಂದು ಮದ್ಯಾಹ್ನ 3 ರಿಂದ ಸಂಜೆ 7ರ ವರೆಗೆ ‘ಚಿಕನ್ ಸ್ಪಾಟ್’ ಎಂಬ ಈ ಹೋಟೆಲ್ ನಲ್ಲಿ ಅಗತ್ಯವಿರುವ ಯಾರೂ ಉಚಿತವಾಗಿ ತಿನ್ನಬಹುದು.

“ ನನ್ನ ಧರ್ಮವು ಬಡವನ ಕುರಿತು ಕಾಳಜಿ ವಹಿಸಲು ನನಗೆ ಕಲಿಸಿಕೊಟ್ಟಿದೆ. ಈ ಭಾಗದಲ್ಲಿ ನಾನು ಹಲವು ನಿರ್ಗತಿಕರು ಹಾಗೂ ಬಡವರನ್ನು ನೋಡಿದೆ. ವಾರದಲ್ಲಿ ಒಂದು ದಿನ ಅವರಿಗೆ ಉಚಿತ ಊಟನೀಡಲು ನಾನು ಯೋಚಿಸಿದೆ. ಅದರಂತೆ ನನ್ನ ಮಗನೊಂದಿಗೆ ಸಮಾಲೋಚಿಸಿ ಪ್ರತೀ ಗುರುವಾರ ಹಸಿದವರಿಗೆ ಅನ್ನ ನೀಡಲು ನಿರ್ಧರಿಸಿದೆವು. ಈಗ ಮೂರ್ನಾಲ್ಕು ತಿಂಹಳಿನಿಂದ ಈ ನಮ್ಮ ಸೇವೆಯು ನಡೆಯುತ್ತಿದೆ. ಬಡವರಿಗೆ ಅನ್ನ ನೀಡಲು ಅವಕಾಶ ಮಾಡಿಕೊಟ್ಟ ಅಲ್ಲಾಹನಿಗೆ ನಾನು ಸ್ತುತಿಸುತ್ತೇನೆ” ಎನ್ನುತ್ತಾರೆ ಈ ಹೋಟೆಲ್ ಮಾಲಕ ನಯೀಮ್ ಖುರೇಷಿ.

ಪ್ರತೀ ಗುರುವಾರದಂದು ಕಿಕ್ಕಿರಿದು ತುಂಬುವ ಈ ಹೋಟೆಲ್ ನಲ್ಲಿ ಬಂದು ತಿನ್ನುವವರನ್ನು ಯಾರೂ ಪ್ರಶ್ನಿಸುವುದಿಲ್ಲ ಮಾತ್ರವಲ್ಲ ಅಗತ್ಯವಿರುವವರು ಹೊಟ್ಟೆತುಂಬಾ ಉಂಡು ಹೋಗುತ್ತಾರೆ. ಗುರುವಾರದ ದಿನ ತನಗೆ ಹಣ ಸಿಗದಿದ್ದರು ಬಡವರ ಸೇವೆ ಮಾಡಿದ ತೃಪ್ತಿ ಮಾಲಕ ನಯೀಮ್ ಖುರೇಷಿ ಮುಖದಲ್ಲಿ ಕಾಣಲು ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *