ಕಾಂಗ್ರೆಸ್ – ಜೆಡಿಎಸ್ ನಾಯಕರು ಖುಷಿಪಡುವ ಹೇಳಿಕೆ ನೀಡಿದ ಶಾಸಕ ಮಹೇಶ್! ಏನದು?

ನ್ಯೂಸ್ ಕನ್ನಡ ವರದಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಬಹುಮತ ಪಡೆದು ಆಯ್ಕೆಯಾದ ನಂತರ ರಾಜ್ಯ ಸಮ್ಮಿಶ್ರ ಸರಕಾರವನ್ನು ಬೀಳಿಸಲು ಸತತ ಪ್ರಯತ್ನ ಬಿಜೆಪಿ ಕಡೆಯಿಂದ ಶುರುವಾಗಿದ್ದು, ಭಿನ್ನಮತೀಯ ಶಾಸಕರಿಗೆ ಸಚಿವ ಸ್ಥಾನ ನೀಡಿ ಸಮಾಧಾನ ಪಡಿಸಿ ಪಕ್ಷದಲ್ಲೇ ಉಳಿಸುವ ಪ್ರಯತ್ನಕ್ಕೆ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲೇ ಚಾಲನೆ ಸಿಕ್ಕಿದೆ. ಆದರೆ ಭಿನ್ನಮತೀಯರಷ್ಟೇ ಅಲ್ಲದೇ ಹಲವಾರು ಇತರ ಶಾಸಕರೂ ನಮಗೂ ಸಚಿವನಾಗಬೇಕು, ಮಂತ್ರಿಗಿರಿ ಬೇಕೆಂದು ಹಟ ಹಿಡಿಯತೊಡಗಿದ್ದು, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ ಎಂದೆಲ್ಲಾ ಪಟ್ಟು ಹಿಡಿದಿದ್ದರು.

ಇದೆಲ್ಲದರ ನಡುವೆ, ಬಂಡಾಯ ಶಾಸಕರ ನೇತೃತ್ವ ವಹಿಸಿರುವ ರಮೇಶ್ ಜಾರಕಿಹೊಳಿಯವರ ಆಪ್ತರಾಗಿ ಗುರುತಿಸಿಕೊಂಡಿರುವ, ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಎಂದೇ ಪರಿಗಣಿಸಲಾಗಿದ್ದ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ನೀಡಿರುವ ಹೇಳಿಕೆ ಕಾಂಗ್ರೆಸ್ ಜೆಡಿಎಸ್ ನಾಯಕರಿಗೆ ಸ್ವಲ್ಪ ಸಮಾಧಾನ ತಂದಿದೆ, “ನನಗೆ ಸಚಿವ ಸ್ಥಾನವೂ ಬೇಡ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನವೂ ಬೇಡ, ಅಥಣಿ ಕ್ಷೇತ್ರದ ಅಭಿವೃದ್ಧಿ ಅಷ್ಟೇ ಮುಖ್ಯ. ಒಂದು ವೇಳೆ ಅವರಾಗಿಯೇ ಕೊಟ್ಟರೂ ನಾನು ಅಧಿಕಾರವನ್ನು ಸ್ವೀಕರಿಸುವುದಿಲ್ಲ” ಎಂದು ಶಾಸಕ ಮಹೇಶ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರರ್ಸ್‍ನಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿ ಹೊಳಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ಕುಮಟಳ್ಳಿ ಅವರು, ಪದೇ ಪದೇ ಮಾಧ್ಯಮಗಳು ನನ್ನ ಹೆಸರನುಮ್ನ ಪ್ರಸ್ತಾಪಿಸುತ್ತಿವೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಅಧಿಕಾರ ಬೇಕು ಎಂಬ ಯಾವ ಬೇಡಿಕೆಗಳನ್ನೂ ನಾನು ಮುಂದಿಟ್ಟಿಲ್ಲ. ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪಿಸಬೇಡಿ ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *