ಶೋಭಾಗೆ ಕೇಂದ್ರ ಮಂತ್ರಿ ಸ್ಥಾನ ನೀಡಲು ಯಡಿಯುರಪ್ಪ ಒತ್ತಾಯ? ನೀಡಿದ ಕಾರಣ ಕೇಳಿ ಬಿಜೆಪಿ ನಾಯಕರೇ ಶಾಕ್?

ನ್ಯೂಸ್ ಕನ್ನಡ ವರದಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತದ ಬಿಜೆಪಿ ಸಂಸದೆಯಾಗಿ ಕಳೆದ ಐದು ವರ್ಷಗಳ ಕಾಲ ಕ್ಷೇತ್ರದ ಜನರ ಸಂಪರ್ಕಕ್ಕೆ ಸಿಗದೆ, ಸ್ವಪಕ್ಷದ ಜನರಿಂದಲೇ ವಿರೋಧ ಎದುರಿಸಿ ಟಿಕೆಟ್ ಪಡೆಯುವುದೇ ಕಷ್ಟ ಎಂಬಂತೆ ಇದ್ದು ಕೊನೆಗೆ ಯಡಿಯುರಪ್ಪ ಹಟ ಸಾಧಿಸಿ ಟಿಕೆಟ್ ತೆಗೆಸಿಕೊಟ್ಟು ಚುನಾವಣೆಗೆ ಸ್ಪರ್ಧಿಸಿದ್ದ ಶೋಭಾ ಕರಂದಾಜ್ಲೆ, ಮೈತ್ರಿ ಧರ್ಮದಂತೆ ಕಾಂಗ್ರೆಸ್ ಅಭ್ಯರ್ಥಿ ಹಾಕದೇ ಇದ್ದ ಕಾರಣ ಮೋದಿಯವರ ಮುಖ ನೋಡಿ ಮನಸ್ಸಿಲ್ಲದ ಮನಸ್ಸಿನೊಂದಿಗೆ ಬಿಜೆಪಿಯವರು ಗೆಲ್ಲಿಸಿಕೊಟ್ಟದ್ದು, ಮೋದಿ ಅಲೆಯಲ್ಲಿ ಗೆದ್ದ ಶೋಭಾ ಕರಂದಾಜ್ಲೆ ಪರವಾಗಿ ಇದೀಗ ಯಡಿಯುರಪ್ಪ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭ ಕರಂದ್ಲಾಜೆ ಮೂರೂವರೆ ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಅವರಿಗೆ ಬಹಳ ಮುಖ್ಯವಾದ ಜವಾಬ್ದಾರಿ ನೀಡಬೇಕು. ಈ ಸಂಬಂಧ ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ, ಇದರೊಂದಿಗೆ ಪಕ್ಷದಲ್ಲಿ ಶೋಭಾ ವಿರುಧ್ಧ ಅಸಮಾಧಾನ ವ್ಯಕ್ತಪಡಿಸಿಸುತ್ತಿರುವ ನಾಯಕರಿಗೂ , ಟಿಕೆಟ್ ಪಡೆಯುವ ಸಂದರ್ಭದಲ್ಲಿ ಅಡ್ಡಗಾಲಿಡಲು ಪ್ರಯತ್ನ ಪಟ್ಟ ಹಿರಿಯ ನಾಯಕರಿಗೂ ಪರೋಕ್ಷವಾಗಿ ಟಾಂಗ್ ನೀಡಲು ನಿರ್ಧರಿಸಿದ್ದಾರೆ.

ಆದರೆ ರಾಜ್ಯದ ಬಿಜೆಪಿ ಗೆಲುವಿನಲ್ಲಿ ಶೋಭಾ ಕರಂದಾಜ್ಲೆ ಮಹತ್ವದ ಪಾತ್ರ ಹೇಗೆ ವಹಿಸಿದ್ದರು? ತಮ್ಮ ಸ್ವಕ್ಷೇತ್ರದ ಜನರಿಗೇ ನ್ಯಾಯ ಒದಗಿಸಲಾಗಲಿಲ್ಲ, ಪಕ್ಷದಲ್ಲಿ ಎಲ್ಲಾ ನಿರ್ದಾರದಲ್ಲೂ ಮೂಗುತೂರಿಸಿ ನಾಯಕರ ನಡುವೆಯೂ ಅಸಮಧಾನ ಹೊಗೆಯಾಡುವಂತೆ ಮಾಡಿದ ಇವರು ಯಾವ ಕೊಡುಗೆ ಕೊಟ್ಟರು ಎಂದು ಬಿಜೆಪಿ ನಾಯಕರೇ ಇದೀಗ ಪ್ರಶ್ನಿಸುತ್ತಿದ್ದಾರೆ.

Leave a Reply

Your email address will not be published. Required fields are marked *