ಕಳೆದ ಮೋದಿ ಸರ್ಕಾರದ ಅವಧಿಯಲ್ಲಿ ಅತೀ ಹೆಚ್ಚು ಲಾಭ ಮಾಡಿಕೊಂಡ 3 ಉದ್ಯಮಿಗಳು ಯಾರು? ಗಳಿಸಿದ ಲಾಭವೆಷ್ಟು ಗೊತ್ತೇ?

1. ಮುಖೇಶ್ ಅಂಬಾನಿಯ ಉದ್ಯಮ ಸಾಮ್ರಾಜ್ಯ 2014 ರಿಂದ 2018 ರೊಳಗೆ $23 ಬಿಲಿಯನ್ ನಿಂದ $55 ಬಿಲಿಯನ್ಗೆ ದ್ವಿಗುಣಗೊಂಡಿದೆ. ಇದರ ಅರ್ಥ ಬಿಜೆಪಿ ಸರ್ಕಾರ ಈ ಐದು ವರ್ಷಗಳ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಆಸ್ತಿ ಮುಖೇಶ್ ಅಂಬಾನಿಯ ಕೈವಶವಾಗಿದೆ ಮತ್ತು ಇದು ಮೋದಿ ಪ್ರಧಾನಮಂತ್ರಿಯಾಗುವ ಮುನ್ನ 58 ವರ್ಷಗಳ ಅವಧಿಯ ಜೀವನದಲ್ಲಿ ಅಂಬಾನಿಅನುವಂಶಿಕವಾಗಿ ಕೂಡಿಟ್ಟ ಆಸ್ತಿಯ ಒಟ್ಟು ಮೊತ್ತದಷ್ಟಿದೆ…

2. ನರೇಂದ್ರ ಮೋದಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಗೌತಮ್ ಅದಾನಿಯ ಅದಾನಿ ಎಂಟರ್‌ಪ್ರೈಸಸ್ (ಉದ್ಯಮಗಳು) ಮೌಲ್ಯಮಾಪನ ಶೇಕಡಾ 5,000 ರಷ್ಟು ಹೆಚ್ಚಳ ಕಂಡುಬಂದಿತ್ತು. 2014 ರಿಂದ 2018ರ ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅದಾನಿಯ ದುಡಿಮೆಯ ನಿವ್ವಳ ಮೌಲ್ಯ $ 2.6 ಬಿಲಿಯನ್ ನಿಂದ $ 11.9 ಬಿಲಿಯನ್‌ಗೆ ನಾಲ್ಕು ಪಟ್ಟು ಹೆಚ್ಚಳಗೊಂಡಿದೆ…

3. ಇದೇ ಸಮಯದಲ್ಲಿ ಬಾಬಾ ರಾಮ್ ದೇವ್ ನ ಪತಂಜಲಿ ಉತ್ಪನ್ನಗಳ ಉತ್ಪಾದನೆ ಹೆಚ್ಚಾಗಿ, ಸಣ್ಣಮಟ್ಟದಲ್ಲಿದ್ದ ಉದ್ಯಮ ದೊಡ್ಡಮಟ್ಟಕ್ಕೆ ಬೆಳೆದು 2018 ರಲ್ಲಿ ಕಂಪನಿಯ ನಿವ್ವಳ ಮೌಲ್ಯ (ಆದಾಯ) 6 ಬಿಲಿಯನ್‌ ಡಾಲರ್‌ಗಿಂತ ಹೆಚ್ಚಾಗಿತ್ತು. ಈಗ ರಾಮ್ ದೇವ್ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ 20ನೇ ಸ್ಥಾನ ಪಡೆದುಕೊಂಡಿದ್ದಾರೆ

CK

Leave a Reply

Your email address will not be published. Required fields are marked *