ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಕೌನ್ಸಿಲ್ ವತಿಯಿಂದ ‘ಸಬಲ ಜಮಾಅತ್ ಗಾಗಿ ಮಾದರಿ ಮಸೀದಿ’ ಕಾರ್ಯಕ್ರಮ

ನ್ಯೂಸ್ ಕನ್ನಡ ವರದಿ: ಆಲ್ ಇಂಡಿಯಾ ಮುಸ್ಲಿಂ ಡೆವಲಪ್‍ಮೆಂಟ್ ಕೌನ್ಸಿಲ್ ದ.ಕ ಜಿಲ್ಲೆ ಇದರ ವತಿಯಿಂದ “ಮಸ್ಜಿದ್ ಒನ್ ಮೂವ್‍ಮೆಂಟ್”ನ ಅಂಗವಾಗಿ ದಿನಾಂಕ 05-07-2019 ರ ಮಧ್ಯಾಹ್ನ 2.15ಕ್ಕೆ ಸರಿಯಾಗಿ “ಸಬಲ ಜಮಾಅತ್‍ಗಾಗಿ ಮಾದರಿ ಮಸೀದಿ” ಕಾರ್ಯಕ್ರಮವು ಬದ್ರುಲ್ ಹುದಾ ಜುಮಾ ಮಸೀದಿ ಕಾಂಜಿಳಕೋಡಿ (ಅಡ್ಡೂರು) ಮದ್ರಸಾ ಸಭಾಂಗಣದಲ್ಲಿ ನಡೆಯಿತು. ಮಸೀದಿಯ ಖತೀಬರಾದ ಅಬ್ದುಲ್ ರಝಾಕ್ ದಾರಿಮಿಯವರು ದುವಾ ಆಶೀರ್ವಚನದ ಮೂಲಕ ಕಾರ್ಯಕ್ರಮವನ್ನು ಉದ್ಗಾಟಿಸಿದರು.

ತದನಂತರ ಮಸೀದಿಯ ಅಧ್ಯಕ್ಷರಾದ ಎಮ್.ಎ.ಅಹ್ಮದ್ ಬಾವ ಕಾರ್ಯಗಾರವನ್ನ ಉದ್ದೀಶಿಸಿ ಮಾತನಾಡುತ್ತಾ ಮುಸ್ಲಿಮರ ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ವಿವರಿಸುತ್ತಾ “ಭಾರತದಲ್ಲಿ ಮುಸ್ಲಿಮರ ಪರಿಸ್ಥಿತಿಯು ಬಹಳ ಚಿಂತಾಜನಕವಾಗಿದ್ದು, ಅವರು ಎಲ್ಲಾ ಸ್ತರಗಳಲ್ಲಿಯೂ ಹಿಂದುಳಿದಿದ್ದಾರೆ, ಹಾಗಾಗಿ ನಮ್ಮ ಜಮಾಅತನ್ನು ಸಂಪೂರ್ಣ ಸಬಲ ಜಮಾಅತನ್ನಾಗಿ ರೂಪಿಸುವುದೇ ಈ ಕಾರ್ಯಕ್ರಮದ ಗುರಿಯಾಗಿದೆ . ನಮ್ಮ ಜಮಾಅತ್ ನ ಸರ್ವೆಯು ಬಹುತೇಕ ಮುಗಿದಿದ್ದು,ಇದರಲ್ಲಿ ನಮಗೆ ಹಲವು ಸಮಸ್ಯೆಗಳನ್ನು ಕಾಣಲು ಸಾಧ್ಯವಾಯಿತು. ಈ ಎಲ್ಲಾ ಸಮಸ್ಯೆಗಳನ್ನು ಮಸ್ಜಿದ್ ಒನ್ ಮೂವ್ಮೆಂಟ್ ನ ಯೋಜನೆಯನ್ನು ಕಾರ್ಯಗತಗೊಳಿಸುವ ಮೂಲಕ ಪರಿಹರಿಸೋಣ ಎಂದರು. ಆದುದರಿಂದ ನಾವೆಲ್ಲರೂ ಸೇರಿ ನಮ್ಮ ಜಮಾಅತ್ನ ಮಹತ್ತರ ಬದಲಾವಣೆಗೋಸ್ಕರ ಈ ಕೆಳಕಂಡ ಘೋಷಣೆಯನ್ನು ಮಾಡುತ್ತಿದ್ದೇವೆ.

1.ಮುಂದಿನ ಹತ್ತು ವರುಷಗಳಲ್ಲಿಸುಮಾರು 5000 ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.
2.ಜಮಾಅತಿನ ವಿದ್ಯಾರ್ಥಿಗಳನ್ನ ಐ.ಪಿ.ಎಸ್. ಐ.ಎ.ಎಸ್ ಮುಂತಾದ ಸ್ಪರ್ಧಾತ್ಮಕ ಮರೀಕ್ಷೆಗಳಿಗೆ ತಯಾರು ಗೊಳಿಸುವುದು.
3.100% ಸಾಕ್ಷರತೆ ಜಮಾಅತ್‍ಗಾಗಿ ಸರ್ವ ಪ್ರಯತ್ನ ಮಾಡುವುದು.
4.ಸ್ವಚ್ಚತಾ ಕಾರ್ಯಕ್ರಮವನ್ನ ಕೈಗೊಳ್ಳುವುದು.
5.ಮುಂದಿನ ಹತ್ತು ವರ್ಷಗಳಲ್ಲಿ ಸುಮಾರು 100 ವೃತ್ತಿನಿರತ ವ್ಯಕ್ತಿಗಳನ್ನ ತಯಾರು ಮಾಡುವುದು.

ಮುಂದುವರೆದು, ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಮಸ್ಜಿದ್ ಒನ್ ಮೂವ್‍ಮೆಂಟ್‍ನ ತುಪೈಲ್ ಮಹಮ್ಮದ್.ಕೆ ರವರು, “ದೇಶದಲ್ಲಿರುವ ಎಲ್ಲಾ ಮಸೀದಿಗಳನ್ನು ಸಾಪ್ಟ್‍ವೇರ್ ಟೆಕ್ನಾಲಜಿ ಮೂಲಕ ಒಂದೇ ವೇದಿಕೆಯಡಿ ತಂದು ಮಸೀದಿಯನ್ನು ಮುಸ್ಲಿಮರ ಅಭಿವೃದ್ಧಿಯ ಕೇಂದ್ರವನ್ನಾಗಿಸುವುದೇ ಆಲ್ ಇಂಡಿಯಾ ಮುಸ್ಲಿಂ ಡೆವಲಪ್‍ಮೆಂಟ್ ಕೌನ್ಸಿಲ್- ಮಸ್ಜಿದ್ ಒನ್ ಮೂವ್‍ಮೆಂಟ್ ಇದರ ಉದ್ದೇಶವಾಗಿದೆ ಎಂದರು. ಸದ್ರಿ ಕಾರ್ಯಕ್ರಮಗಳನ್ನು ಮಸೀದಿಗಳಲ್ಲಿ ಯಾವ ರೀತಿಯಾಗಿ ಕಾರ್ಯಗತಗೊಳಿಸುವುದು ಮತ್ತು ಪ್ರಾಯೋಗಿಕವಾಗಿ ಹೇಗೆ ನಡೆಸಬಹುದು ಎಂದು ವಿವರಿಸಿದರು. ಕಾರ್ಯಕ್ರಮದ ಮುಂದುವರಿದ ಭಾಗವಾಗಿ *ಸಸಿ ನೆಡುವ ಮತ್ತು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮಸೀದಿಯ ಗೌರವ ಅಧ್ಯಕ್ಷರಾದ ಎಮ್.ಎಚ್. ಮುಹಿಯುದ್ದೀನ್ ಮತ್ತು ಉಪಾಧ್ಯಕ್ಷರಾದ ಎ.ಕೆ ರಿಯಾಝ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಇಮ್ರಾನ್ ಅಡ್ಡೂರ್‍ರವರು ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *