ಮಗು ನಂದು ಎಂದು ಬಿಜೆಪಿ ಶಾಸಕ ರಾಜ್​ಕುಮಾರ್ ಪಾಟೀಲ್ ತೇಲ್ಕೂರು ಒಪ್ಪಿಕೊಂಡಿದ್ದಾರೆ: ನ್ಯಾಯ ಕೊಡಿಸಲು ಮನವಿ ಮಾಡಿದ ಮಹಿಳೆಯ ಆರೋಪವೇನು..?

ಬೆಂಗಳೂರು: ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ರಾಜ್​ಕುಮಾರ್ ಪಾಟೀಲ್ ತೇಲ್ಕೂರು ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಶಾಸಕ ರಾಜ್​ಕುಮಾರ್ ಒಬ್ಬ ದೊಡ್ಡ ಫ್ರಾಡ್. ನನ್ನ ಮಗನಿಗೂ ಸೇಡಂ ಶಾಸಕನಿಗೂ ಸಂಬಂಧವಿದೆ ಎಂದು ಹೇಳಿಕೆ ನೀಡಿದ ಸಂತ್ರಸ್ತ ಮಹಿಳೆ, ನನ್ನ ಮಗನಿಗೆ 14 ವರ್ಷ, ಮಗ ಅಂತ ಶಾಸಕ ರಾಜ್ಕುಮಾರ್ ಒಪ್ಪಿಕೊಳ್ಳಲಿ ಎಂದು ಒತ್ತಾಯಿಸಿದ್ದಾಳೆ.

ಅಲ್ಲದೇ ಶಾಸಕರಿಂದ ನನಗೆ ಅನ್ಯಾಯವಾಗಿದೆ ಎಂದಿರುವ ಮಹಿಳೆ, ವಕೀಲ ಜಗದೀಶ್ ಸಂಪರ್ಕಿಸಿ ನ್ಯಾಯ ಕೊಡಿಸಲು ಮನವಿ ಮಾಡಿದ್ದಾಳೆ.

ಪೊಲೀಸರು ನನ್ನನ್ನ ಠಾಣೆಯಲ್ಲಿ ಕೂಡಿಹಾಕಿದ್ದರು, ಗುಹೆ ರೀತಿ ಇತ್ತು. ವಿಧಾನಸೌದ ಠಾಣೆ ಪೊಲೀಸರು ನನ್ನನ್ನ ಕೂಡಿ ಹಾಕಿದ್ದಾರೆ. ನನ್ನ ಜೀವನವನ್ನೆಲ್ಲಾ ಹಾಳು ಮಾಡಿದ. ನನಗೆ ಜೀವನ ಕೊಡುವಂತೆ ನಾನು ಶಾಸಕರನ್ನ ಕೇಳಿದೆ. ರಾತ್ರಿ 9 ಗಂಟೆ ತನಕ ಪೊಲೀಸ್ ಠಾಣೆಯಲ್ಲೇ ಇದ್ದೆ. 9 ಗಂಟೆಯಾದ ಮೇಲೆ ನನ್ನನ್ನ ಠಾಣೆಯಿಂದ ಬಿಟ್ಟಿದ್ದಾರೆ ಎಂದು ತಿಳಿಸಿದ ಸಂತ್ರಸ್ತ ಮಹಿಳೆ, ಬಿಜೆಪಿ ಶಾಸಕ ರಾಜ್​ಕುಮಾರ್ ಒಬ್ಬ ದೊಡ್ಡ ಫ್ರಾಡ್ ಎಂದು ಹೇಳಿದ್ದಾರೆ.

ಶಾಸಕರು ಚೈಲ್ಡ್‍ವುಡ್‍ನಿಂದಲೂ ಪರಿಚಯ. ಅವರು ಮಗು ನಂದು ಎಂದು ಒಪ್ಪಿಕೊಂಡಿದ್ದಾರೆ. ಖಾಸಗಿ ಹೋಟೆಲ್‍ನಲ್ಲಿ ಆರು ತಿಂಗಳ ಹಿಂದೆ ಭೇಟಿ ಆಗಿದ್ದರು. ಅಲ್ಲಿ ಮಗನಿಗೆ ನ್ಯಾಯಕೊಡಿಸುವ ಭರವಸೆ ಪತ್ನಿ ಮುಂದೆಯೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನನ್ನ ಮಗುವಿಗೆ ನ್ಯಾಯಬೇಕು. ನನ್ನ ಮೇಲೆ ಕೇಸ್ ಹಾಕಲಿ ನನಗೆ ತೊಂದರೆ ಇಲ್ಲ ಎಂದು ಹೇಳಿದರು.

ಸಿಎಂಗೆ ಟ್ವೀಟ್ ಮಾಡಿದ್ದರಿಂದ ನಿನ್ನೆ ಕೆಲವು ಕಾರ್ಯಕರ್ತರು ಬಂದು ಕಾಂಗ್ರೆಸ್‍ನವರು ಮಾಡಿಸಿದ್ದಾರೆ ಅಂತಾ ಹೇಳು ಎಂದು ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ವಿಧಾನಸೌಧ ಪೊಲೀಸರು ನನ್ನನ್ನು ಕರೆದುಕೊಂಡು ಹೋಗಿ ನಿನ್ನೆ ಇಡೀ ದಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದಾರೆ ಎಂದರು.

ಈ ಬಗ್ಗೆ ವಿಚಾರ ಏನು ಕೇಳಿದರೂ, ಪೊಲೀಸರು ಸಮಯಕ್ಕೆ ಸರಿಯಾಗಿ ಊಟ ತಿಂಡಿ ಬರುತ್ತದೆ. ತಿಂದು ಸುಮ್ಮನೆ ಕೂರುವಂತೆ ಹೇಳಿದ್ದಾ ರೆ ಹೊರತು ಯಾವ ವಿಚಾರಕ್ಕಾಗಿ ಕೆರದುಕೊಂಡು ಬಂದಿದ್ದೇವೆ ಎನ್ನುವುದರ ಬಗ್ಗೆ ಹೇಳಲೇ ಇಲ್ಲ ಎಂದು ಕಿಡಿಕಾರಿದರು.

ರಾತ್ರಿ 9 ಗಂಟೆಗೆ ಪೊಲೀಸ್ ಠಾಣೆಯಿಂದ ಹೊರಗೆ ಬಿಟ್ಟಿದ್ದಾರೆ. ಆದರೆ ಈಗಲೂ ಮನೆ ಹತ್ತಿರ ಪೊಲೀಸರು ಇದ್ದಾರೆ. ಈ ಎಲ್ಲಾ ವ್ಯವಸ್ಥೆಯಿಂದ ನಾನು ಬದುಕಿದರೆ ಸಾಕು ಎನಿಸುತ್ತಿದೆ. ನನಗೆ ಮೋಸ ಆಗಿದೆ, ನನಗೆ ನ್ಯಾಯಕೊಡಿಸಿ ಎಂದು ಸಿಎಂಗೆ ಟ್ವೀಟ್ ಮಾಡಿದ್ದರಿಂದ ಇಷ್ಟೆಲ್ಲ ಸಮಸ್ಯೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *