ಕಾಂಗ್ರೆಸ್ ಪಾಳಯದಲ್ಲಿ ಇದೀಗ ಹೊಸ ಆತಂಕ : ಅತೃಪ್ತರ ಸಂಪರ್ಕದಲ್ಲಿ ಮತ್ತೆ ನಾಲ್ವರು!

ನ್ಯೂಸ್ ಕನ್ನಡ ವರದಿ : ರಾಜ್ಯ ರಾಜಕೀಯದ ಪ್ರಹಸನ ಮುಂದುವರಿದಿದೆ. ದಿನದಿನವೂ ಅತೃಪ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಾಂಗ್ರೆಸ್‌ ಪಾಳೆಯದಲ್ಲಿ ಹೊಸ ಆತಂಕದ ಛಾಯೆ ಮೂಡಿದೆ. ಇದೀಗ ಅತೃಪ್ತರ ಸಾಲಿಗೆ ಕಾಂಗ್ರೆಸ್ ನ ಮತ್ತೆ ನಾಲ್ವರು ಅತೃಪ್ತರು ಜೊತೆ ಸಂಪರ್ಕದಲ್ಲಿ ಇದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು, ಇದರಿಂದ ಆತಂಕ ಇನ್ನೂ ಹೆಚ್ಚಾಗಿದೆ. ಈಗಾಗಲೇ 15 ಜನ ಅತೃಪ್ತ ಶಾಸಕರು ಸರ್ಕಾರ ಬೇಡವೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಈ ಮೈತ್ರಿ ಸರ್ಕಾರ ಉಳಿಯುವುದು ಮೈತ್ರಿ ಶಾಸಕರಿಗೆ ಒಪ್ಪಿಗೆ ಇಲ್ಲ.

ಇಂದೇ ಬಿಜೆಪಿ ವಿಶ್ವಾಸ ಮತಕ್ಕೆ ಪಟ್ಟು ಹಿಡಿದು ಸರ್ಕಾರ ಪತನ‌ ಮಾಡಲಿದೆ ಎನ್ನುವ ಚರ್ಚೆ ಶರುವಾಗಿದೆ. ರಾಜ್ಯದಲ್ಲಿ ಸರ್ಕಾರ ಉಳಿಸಿ ಕೊಳ್ಳಲು ಹಲವು ರೀತಿಯ ಸರ್ಕಸ್ ನಡೆಸುತ್ತಿದ್ದು, ಉಳಿಯುತ್ತಾ, ಪತನವಾಗುತ್ತಾ ಎನ್ನುವ ಚರ್ಚೆ ಆರಂಭವಾಗಿದೆ. ಒಂದು ವೇಳೆ ವಿಶ್ವಾಸ ಮತದಲ್ಲಿ ಸೋತರೆ ಸಿದ್ದರಾಮಯ್ಯ ಹೇಳಿದಂತೆ ವಿರೋಧ ಪಕ್ಷದಲ್ಲಿ ಕುಳಿತರೆ ಮುಂದಿನ‌ ಚುನಾವಣೆಯಲ್ಲಾದರೂ ಅಧಿಕಾರಕ್ಕೆ ಬರಬಹುದಾ ಎನ್ನುವುದು ಪ್ರಶ್ನೆಯಾಗಿದೆ. ಮೈತ್ರಿ ಸರ್ಕಾರ ಇಂದು ಕೊನೆಯಾಗುತ್ತಾ ಅಥವಾ ಉಳಿದುಕೊಳ್ಳುತ್ತಾ ಗೊತ್ತಿಲ್ಲ. ಆದರೆ ಇಂದಿನ ವಿಧಾನಸಭೆ ಕಲಾಪ ಮಾತ್ರ ಭಾರೀ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *