ಅತೃಪ್ತ ಶಾಸಕರನ್ನು ಮುಂಬೈನಲ್ಲಿ ಭೇಟಿಯಾದ ಜೆಡಿಎಸ್ ನಾಯಕ ಶಾಹಿದ್! ನಡೆದಿದೆ ಯಶಸ್ವಿ ಸಂಧಾನ?

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅಗ್ನಿ ಪರೀಕ್ಷೆ ವಿಧಾನಸಭೆಯಲ್ಲಿ ನಡೆಯುತ್ತಿದ್ದು, ಕಾಂಗ್ರೆಸ್ ಜೆಡಿಎಸ್ ನಾಯಕರು ಅಂತಿಮ ಕ್ಷಣದವರೆಗೂ ಸರಕಾರ ಉಳಿಸುವ ಶತಾಯ ಗತಾಯ ಪ್ರಯತ್ನದಲ್ಲಿ ತೊಡಗಿದ್ದು, ವಿಶ್ವಾಸಮತಯಾಚನೆ ಮುಂದೂಡಿ ಇನ್ನಷ್ಟು ಸಮಯವಕಾಶ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಒಂದು ಸ್ಪೋಟಕ ಮಾಹಿತಿ ಹೊರಬಿದ್ದಿದ್ದು, ಕಳೆದ ಕೆಲವು ದಿನಗಳಿಂದ ಮಾಧ್ಯಮಗಳ ಸುದ್ದಿಯ ಕೇಂದ್ರ ಬಿಂದುವಾಗಿದ್ದ, ಅತೃಪ್ತ ಶಾಸಕರು ವಾಸವಾಗಿರುವ ಮುಂಬೈನ ಪಂಚತಾರ ಐಷಾರಾಮಿ ಹೋಟೇಲ್, ಈ ಹೋಟೆಲ್ ಪ್ರವೇಶಿಸಿ ಅತೃಪ್ತರೊಂದಿಗೆ ಸಂಧಾನ ಮಾಡಲು ಟ್ರಬಲ್ ಶೂಟರ್ ಡಿಕೆಶಿ, ಜಿ ಟಿ ದೇವೇಗೌಡರು ಪ್ರಯತ್ನ ಪಟ್ಟರೂ ಸಫಲರಾಗಲಿಲ್ಲ, ಹಾಗೂ ಅತೃಪ್ತರು ಯಾವುದೇ ಕಾರಣಕ್ಕೂ ಮಾತುಕತೆಗೆ ಸಿಕ್ಕಿರಲಿಲ್ಲ.

ಆದರೆ ಸಂಧಾನ ನಡೆಸಿ ಅತೃಪ್ತರ ಮನವೊಲಿಸಿಕೊಳ್ಳುವ ಕಾರ್ಯವನ್ನು ಕೈಬಿಡದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ನಾಯಕರು ಕೊನೆಗೂ ತಮ್ಮ ಚಾಣಾಕ್ಷ ನಡೆಯಿಂದಾಗಿ ಯಶಸ್ವಿಯಾಗಿದ್ದಾರೆ.

ವಿಧಾನಪರಿಷತ್ ಸದಸ್ಯರಾದ ಬಿ.ಎಂ ಫಾರೂಕ್ ಆಪ್ತ, ಯುವ ಜಾತ್ಯಾತೀತ ಜನತಾದಳದ ರಾಜ್ಯ ಉಪಾಧ್ಯಕ್ಷರಾದ, ಸೈಯದ್ ಶಾಹಿದ್ ಮುಂಬೈನ ಅತೃಪ್ತ ಶಾಸಕರು ತಂಗಿರುವ ಹೋಟೇಲ್ ಪ್ರವೇಶಿಸಿ ಅತೃಪ್ತರನ್ನು ಭೇಟಿಯಾಗಿದ್ದು ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನಮೂಡಿಸಿದೆ.

ಜೆಡಿಎಸ್ ವರಿಷ್ಠ ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿಯವರಿಂದ ನಿರ್ದಿಷ್ಟ ಸಂಧಾನ ಸೂತ್ರ ಆಫರ್ ಗಳೊಂದಿಗೆ ಜೆಡಿಎಸ್ ನಾಯಕ ಶಾಹಿದ್ ಮುಂಬೈಗೆ ಆಗಮಿಸಿ ಅತೃಪ್ತರೊಂದಿಗೆ ಮಾತುಕತೆ ನಡೆಸಿದ್ದಾರೆ, ಇನ್ನೂ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಬಿಜೆಪಿಯ ಭದ್ರಕೊಟೆಯನ್ನು ಛಿದ್ರಮಾಡಿ ಸಂಧಾನಕ್ಕೆ ಯತ್ನಿಸಿದ ಶಾಹಿದ್ ಪ್ರಯತ್ನ ಇದೀಗ ರಾಷ್ಟ್ರೀಯ ಮಾಧ್ಯಮಗಳಲ್ಲೂ ಭರ್ಜರಿಯಾಗಿ ಪ್ರಚಾರಪಡೆಯುತ್ತಿದ್ದು, ಬಿಜೆಪಿಯವರ ನಿದ್ದೆಗೆಡಿಸಿದೆ.

Leave a Reply

Your email address will not be published. Required fields are marked *