ರಾಜ್ಯಪಾಲ ಆದೇಶಕ್ಕೆ ಡೋಂಟ್ ಕೇರ್ ಎಂದ ಸಿಎಂ ಕುಮಾರಸ್ವಾಮಿ!: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನ್ಯೂಸ್ ಕನ್ನಡ ವರದಿ: ಶುಕ್ರವಾರ ಮಧ್ಯಾಹ್ನ 1-30 ರೊಳಗೆ ಸದನದಲ್ಲಿ ವಿಶ್ವಾಸಮತ ಯಾಚಿಸುವಂತೆ ರಾಜ್ಯಪಾಲ ವಜುಭಾಯ್ ವಾಲಾ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸೂಚಿಸಿದ್ದರು, ಆದರೂ ಇದಕ್ಕೆ ಮಣಿಯದ ಸಭೆ ಕಲಾಪ ಮುಂದುವರೆದಿದೆ.

ಇಂದು ಸದನ ಆರಂಭವಾಗುತ್ತಿದ್ದಂತೆ ರಾಜ್ಯಪಾಲರು ತಮಗೆ ಕಳುಹಿಸಿರುವ ಪತ್ರದ ಕುರಿತು ಮುಖ್ಯಮಂತ್ರಿಗಳು ಹೇಳಿದರು, ಆದರೆ ಇದು ಕೇವಲ ಒಂದು ದಿನದಲ್ಲಿ ಮುಗಿಯುವ ವಿಚಾರವಲ್ಲ ಎಂದು ಹೇಳುವ ಮೂಲಕ ವಿಶ್ವಾಸ ಮತ ಇಂದು ಮಂಡನೆಯಾಗುವುದಿಲ್ಲ ಎಂದು ಸೆಭೆಹೆ ಸೂಚ್ಯವಾಗಿ ಹೇಳಿದ್ದರು.

ಸಚಿವ ಕೃಷ್ಣಬೈರೇಗೌಡ ಸುದೀರ್ಘವಾಗಿ ಮಾತನಾಡಿ, ಮುಖ್ಯಮಂತ್ರಿಗಳೇ ಸ್ವತಃ ವಿಶ್ವಾಸ ಮತ ಯಾಚಿಸುವುದಾಗಿ ಹೇಳಿರುವ ಕಾರಣ ಅದು ಈಗ ಸದನದ ಸ್ವತ್ತು. ರಾಜ್ಯಪಾಲರು ಇದರಲ್ಲಿ ಮಧ್ಯ ಪ್ರವೇಶಿಸುವ ಮೂಲಕ ಸದನದ ಹಕ್ಕನ್ನು ಚಿವುಟಲು ಮುಂದಾಗಿದ್ದಾರೆ ಎಂದು ಹೇಳಿದರು.

1-30 ಗಂಟೆ ಕಾಲಾವಧಿ ಮುಗಿದರು ವಿಶ್ವಾಸ ಮತಯಾಚನೆ ಮಂಡನೆಯಾಗದೆ ಇರವ ಕಾರಣ ಬಿಜೆಪಿ ಸದಸ್ಯರು ವಾಗ್ವಾದಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರುಗಳು ಬಿಜೆಪಿಯ ಏಜೆಂಟ್ ಆಗಿರುವ ಗವರ್ನರ್ ಗೋ ಬ್ಯಾಕ್ ಎಂಬ ಘೋಷಣೆಗಳನ್ನು ಕೂಗಿದರು. ಅಂತಿಮವಾಗಿ ರಾಜ್ಯಪಾಲರು ಸೂಚಿಸಿದ್ದ 1-30 ಗಂಟೆ ಪೂರ್ಣಗೊಂಡರೂ ವಿಶ್ವಾಸಮತ ಮಂಡನೆಯಾಗಲಿಲ್ಲ. ಹಿನ್ನೆಲೆಯಲ್ಲಿ ರಾಜ್ಯಪಾಲರು ಈಗ ಯಾವ ಕ್ರಮ ಕೈಗೊಳ್ಳುತ್ತಾರೆಂಬ ಕುತೂಹಲ ಮೂಡಿದೆ.

ಮೈತ್ರಿ ಪಕ್ಷ ಈ ಕುರಿತು ಸುಪ್ರೀಂಕೋರ್ಟ್ ಮೆಟ್ಟಲೇರುವ ಎಲ್ಲಾ ಸಾದ್ಯತೆಗಳಿವೆ ಎಂದು ತಿಳಿದುಬಂದಿದೆ…. ಮತಯಾಚನೆ ಮಾಡುತ್ತಾರೊ ಅಥವಾ ರದ್ದು ಪಡಿಸುತ್ತಾರೊ ಕಾದು ನೋಡಬೇಕಿದೆ….

Leave a Reply

Your email address will not be published. Required fields are marked *