ಒಂದೇ ವಾರದೊಳಗೆ ಬಹುಮತ ಸಾಬೀತುಪಡಿಸಿ!: ರಾಜ್ಯಪಾಲರ ಆದೇಶಕ್ಕೆ ಯಡ್ಡೀ ಚಿಂತೆ

ನ್ಯೂಸ್ ಕನ್ನಡ ವರದಿ: ಆಪರೇಷನ್ ಕಮಲ ನಡೆಸಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಉರುಳಿಸಿದ ನಂತರ  ಹೊಸ ಸರಕಾರ ರಚನೆಗೆ ಹಕ್ಕು ಮಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಒಂದು ವಾರದೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ವಜೂಬಾಯಿ ವಾಲಾ ಸೂಚನೆ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 104 ಸೀಟು ಗೆದ್ದು ಯಡಿಯೂರಪ್ಪ ಸರಕಾರ ರಚನೆಗೆ ಹಕ್ಕು ಮಂಡಿಸಿದ ಸಂದರ್ಭದಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ 15 ದಿನಗಳ ಕಾಲಾವಕಾಶ ನೀಡಿದ್ದರು. ಈ ಬಗ್ಗೆ ಕಾಂಗ್ರೆಸ್-ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದ್ದವು. ವಿಧಾನಸಭೆಯಲ್ಲಿ ಸದ್ಯದ ಒಟ್ಟು ಸದಸ್ಯ ಬಲ ಸ್ಪೀಕರ್ ಸೇರಿ 222. ಓರ್ವ ಪಕ್ಷೇತರ ಸದಸ್ಯನ ಬೆಂಬಲ ಸೇರಿ ಬಿಜೆಪಿಯ ಬಲ 106. ಬಹುಮತ ಸಾಬೀತಿಗೆ 112 ಸದಸ್ಯರ ಅಗತ್ಯ ಬಿಜೆಪಿಗಿದೆ.

ಹೀಗಾಗಿ ಯಡಿಯುರಪ್ಪ ಮತ್ತೊಮ್ಮೆ ಬಹುಮತ ಸಾಬೀತು ಮಾಡುವ ವೇಳೆ ಸೋಲು ಉಂಟಾಗಬಾರದು ಎಂದು ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ

Leave a Reply

Your email address will not be published. Required fields are marked *