ಯಡ್ಡಿ ತೊಡಿದ ಖೆಡ್ಡಕ್ಕೆ 17 ಶಾಸಕರು ಬಲಿ!: ಅತೃಪ್ತರ ಮುಂದಿನ ನಡಿಗೆಯಾದರು ಏನು?

ನ್ಯೂಸ್ ಕನ್ನಡ ವರದಿ: ಹದಿನಾಲ್ಕು ತಿಂಗಳು ಹೊಂಚು ಹಾಕಿ ಸರ್ಕಾರವನ್ನು ಬೀಳಿಸುವಲ್ಲಿ ಯಶಸ್ವಿಯಾದ ಯಡಿಯೂರಪ್ಪ. ಆಪರೇಷನ್ ಕಮಲದ ಕೆಡ್ಡಕ್ಕೆ ಬಿದ್ದ 17 ಶಾಸಕರ ರಾಜಕೀಯ ಜೀವನ ಅತಂತ್ರ.

ರಾಜ್ಯ ವಿಧಾನಸಭೆಯಿಂದ ಶಾಸಕರಾಗಿ ಅನರ್ಹರಾಗಿದ್ದನ್ನು ಪ್ರಶ್ನಿಸಿ ಕರ್ನಾಟಕದ 14 ಅನರ್ಹ ಕಾಂಗ್ರೆಸ್ ಮತ್ತು ಬೆಡಿಎಸ್ ಶಾಸಕರು ಗುರುವಾರ ಸುಪ್ರೀಂ ಕೋರ್ಟ್‌ಗೆ ತೆರಳಿ, ಜುಲೈ 25 ರಂದು ಅನರ್ಹತೆ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಸರ್ಕಾರದ ವಿರುದ್ಧ ದಂಗೆ ಎದ್ದ ಮೂರು ಕರ್ನಾಟಕ ಶಾಸಕರಾದ ರಮೇಶ್ ಜರ್ಕಿಹೋಲಿ, ಮಹೇಶ್ ಕುಮತಳ್ಳಿ ಮತ್ತು ಶಂಕರ್ ಅವರನ್ನು ಜುಲೈ 25 ರಂದು ಹೊರಹಾಕಲಾಯಿತು, ಉಳಿದವರು – ಪ್ರತಾಪ್ ಗೌಡ ಪಾಟೀಲ್, ಬಿ.ಸಿ. ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಟಿ.ಶಮಶೇಕರ್, ಬೈರಾಟಿ ಬಸವರಾಜ್ , ಆನಂದ್ ಸಿಂಗ್, ರೋಶನ್ ಬೇಗ್, ಮುನಿರತ್ನ, ಕೆ ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ಮತ್ತು ಶ್ರೀಮಂತ್ ಪಾಟೀಲ್ ಅವರನ್ನು ಜುಲೈ 28 ರಂದು ಅನರ್ಹಗೊಳಿಸಲಾಗಿತ್ತು.

ಪಕ್ಷದ ಸಮ್ಮಿಶ್ರ ಸರ್ಕಾರವನ್ನು ರಾಜ್ಯದಲ್ಲಿ ಉರುಳಿಸುವ ಹೊಣೆ ಹೊತ್ತಿದ್ದ 14 ಬಂಡಾಯ ಶಾಸಕರನ್ನು ಕರ್ನಾಟಕದಿಂದ ಕಾಂಗ್ರೆಸ್ ಉಚ್ಚಾಟಿಸಿದರು. ಇದಾದ ಎರಡು ದಿನಗಳ ನಂತರ ಅತೃಪ್ತ ಶಾಸಕರು ತಮ್ಮ ಅನರ್ಹತೆಯ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದರು. ರಾಜ್ಯ ವಿಧಾನಸಭೆಗೆ ರಾಜೀನಾಮೆ ನೀಡಿದ ಎಲ್ಲ ಶಾಸಕರು ವಿಶ್ವಾಸಮತಯಾಚನೆಯಿಂದ ದೂರ ಉಳಿದ ಕಾರಣ ಮೈತ್ರಿ ಸರ್ಕಾರವನ್ನು ವಿಶ್ವಾಸಾರ್ಹ ಮತದಾನದಲ್ಲಿ ಸೋಲಿಸಲು ಕಾರಣವಾಯಿತು.

ರಮೇಶ್ ಕುಮಾರ್ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ತೆಗೆದುಕೊಂಡ ನಿರ್ಧಾರವು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ಅನರ್ಹ ಶಾಸಕರು ಆರೋಪಿಸಿದ್ದಾರೆ. ತಮ್ಮ ರಾಜೀನಾಮೆಯನ್ನು ತಿರಸ್ಕರಿಸಿರುವ ಮಾಜಿ ಸ್ಪೀಕರ್ ನಿರ್ಧಾರವು “ಸ್ವಯಂಪ್ರೇರಿತವಲ್ಲ ಮತ್ತು ನಿಜವಾದದ್ದಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.

ಅತ್ತ ಮೈತ್ರಿಪಕ್ಷವೂ ಇಲ್ಲ, ಇತ್ತ ಬಿಜೆಪಿಯೂ ಇಲ್ಲ, ಇನ್ನೇನಿದ್ದರೂ ಸರ್ವೋಚ್ಚ ನ್ಯಾಯಾಲಯ ಕೊಡುವ ತೀರ್ಪೇ ಅತೃಪ್ತ ಶಾಸಕರಿಗೆ ಸದ್ಯದ ಮಟ್ಟಿಗೆ ಆಶಾಕಿರಣ.

ಸರ್ವೋಚ್ಚ ನ್ಯಾಯಾಲಯದಲ್ಲಿ ಅನರ್ಹ ಶಾಸಕರ ಮನವಿ:

ಅನರ್ಹತೆಯನ್ನು ರದ್ದು ಮಾಡುವುದು, ಮುಂದಿನ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವುದು, ವಿಫ್ ಉಲ್ಲಂಘನೆ ಮತ್ತು ಸ್ಪೀಕರ್ ಅವರ ವರದಿಯನ್ನು ನೋಡಿ ತೀರ್ಮಾನಿಸುವುದು.

ಅತೃಪ್ತ ಶಾಸಕರು ಸುಪ್ರೀಂಕೋರ್ಟ್ನಲ್ಲಿ ಗೆದ್ದರು ಚುನಾವಣೆ ರಣರಂಗದಲ್ಲಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಗಳಾಗಿ ಬರಬೇಕಾಗುತ್ತದೆ ಅತೃಪ್ತರು ಗೆಲ್ಲುವುದು ಬಹುತೇಕ ಕಷ್ಟ ಎಂದು ಮೂಲಗಳು ತಿಳಿಸಿವೆ.

ಸರ್ವೋಚ್ಚ ನ್ಯಾಯಾಲಯ ಸ್ಪೀಕರ್ ರಮೇಶ್ ಕುಮಾರ್ ತೀರ್ಪನ್ನು ಎತ್ತಿಹಿಡಿದರೆ, ಇನ್ನು ಹಾಲೀ ವಿಧಾನಸಭೆ ಮುಗಿಯುವ ಅವಧಿಯಾದ ಸುಮಾರು 46 ತಿಂಗಳು (ಅದಕ್ಕೂ ಮೊದಲು ಅಸೆಂಬ್ಲಿ ವಿಸರ್ಜನೆ ಆಗದಿದ್ದಲ್ಲಿ), ಇವರಿಗೆಲ್ಲಾ ರಾಜಕೀಯ ಸನ್ಯಾಸ. ತಾಲೂಕು ಪಂಚಾಯತಿ ಚುನಾವಣೆಯನ್ನೂ ಎದುರಿಸುವಂತಿಲ್ಲ.

ಮೂಲಗಳ ಪ್ರಕಾರ ಸುಪ್ರೀಂಕೋರ್ಟ್ ತೀರ್ಪು ಅತೃಪ್ತರ ವಿರೋಧವೆ ಬರಲಿದೆ ಎಂದು ತಿಳಿದುಬಂದಿದೆ ಕಾರಣ ಪಕ್ಷ ವಿರೋಧಿ ಚಟುವಟಿಕೆ ಮತ್ತು ವಿಫ್ ಉಲ್ಲಂಘನೆ ದಾಖಲೆಗಳನ್ನು ಕಾಂಗ್ರೆಸ್ ನಾಯಕರು ಆಗಿನ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನೀಡಿತ್ತು ಅದನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸುತ್ತಾರೆ ಎಂದು ತಿಳಿದುಬಂದಿದೆ. ಇಲ್ಲಿಗೆ ಬಿಜೆಪಿ ತೊಡಿದ ಕೆಡ್ಡಕ್ಕೆ 17 ಶಾಸಕರು ರಾಜಕೀಯವಾಗಿ ಮೊಖಾಡೆ ಮಲಗಿದ್ದಾರೆ.

Leave a Reply

Your email address will not be published. Required fields are marked *