ಅನರ್ಹ ಶಾಸಕ ಮುನಿರತ್ನಗೆ ಈಗ ಈಮೈಲ್ ಸಂಕಟ! ಈ ಸುದ್ದಿ ಓದಿ..

ನ್ಯೂಸ್ ಕನ್ನಡ ವರದಿ: 15 ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಉಪಯೋಗಿಸಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಆಪರೇಷನ್ ಕಮಲ ನಡೆಸಿ ಉರುಳಿಸಲು ಯಶಸ್ವಿಯಾದ ನಂತರ ಇದೀಗ ಆ ಶಾಸಕರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಬೇಕಾದ ಅನಿವಾರ್ಯತೆಯೂ ಇದೆ.

ಇದೇ ಸಂದರ್ಭದಲ್ಲಿ ಅನರ್ಹ ಶಾಸಕ ಮುನಿರತ್ನ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಹೊರಟಿರುವ ನಾಯಕರ ವಿರುದ್ದ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಕಣ್ಣು ಕೆಂಪಾಗಿಸಿದೆ. ಇಲ್ಲಿವರೆಗೂ ಮುನಿರತ್ನ ಅಕ್ರಮದ ವಿರುದ್ದ ಹೋರಾಟ ಮಾಡಿ ಬಂದಿದ್ದೇವೆ. ಈಗ ಬಿಜೆಪಿ ಮನುಷ್ಯ ಆಗ್ತಾರೆ ಅಂದ್ರೆ ಹೇಗೆ? ನಾವು ಮುನಿರತ್ನ ಜೊತೆ ನಿಲ್ಲಲ್ಲ ಎಂದು ಅಪಸ್ವರ ಎತ್ತಿದ್ದಾರೆ.

ಮುನಿರತ್ನ ಹಿಂದಿನ ಹಗರಣಗಳ ಬಗ್ಗೆ  ಬಿಜೆಪಿ ರಾಷ್ಟ್ರೀಯ ನಾಯಕರಿಗೆ, ಸಂಘದ ಪ್ರಮುಖರಿಗೆ ಸ್ಥಳೀಯ ಕಾರ್ಯಕರ್ತರು ಸಾವಿರಕ್ಕೂ ಹೆಚ್ಚು ಈ ಮೇಲ್ ಮಾಡಿದ್ದಾರೆ. ಈ ಮೂಲಕ ಮುನಿರತ್ನ ಬಿಜೆಪಿಗೆ ಬೇಡ ಎಂದು ಒತ್ತಾಯ ಮಾಡಿರುವುದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *