ಹಜಾಜ್ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಗೋಳ್ತಮಜಲಿನಲ್ಲಿ ಹಿಜಾಮ ಕ್ಯಾಂಪ್

Press Release

ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ ಗೋಳ್ತಮಜಲು ಎಂಬಲ್ಲಿ ಕ್ರೀಡಾ ಚಟುವಟಿಕೆಯ ಉದ್ದೇಶವನ್ನಿಟ್ಟುಕೊಂಡು ಅದರಲ್ಲೂ ಕಬಡ್ಡಿ ಆಟಗಾರರನ್ನು ಹುಟ್ಟು ಹಾಕುವ ಉದ್ದೇಶದಿಂದ 1988 ರಲ್ಲಿ ಆರಂಭಗೊಂಡ ಸಂಸ್ಥೆಯೇ ಹಜಾಜ್ ಸ್ಪೋಟ್ರ್ಸ್ ಕ್ಲಬ್ (ರಿ). ಇದರ ಸ್ಥಾಪಕಾಧ್ಯಕ್ಷರಾಗಿ ಹಾಜಿ ಜಿ. ಮುಹಮ್ಮದ್ ಹನೀಫ್ ಆಯ್ಕೆಗೊಂಡು ಸಂಸ್ಥೆಯನ್ನು ಹಲವು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದರು.
ಹಲವಾರು ಕಬಡ್ಡಿ ಕ್ರೀಡಾಪಟುಗಳನ್ನು ತರಬೇತುಗೊಳಿಸಿ ರಾಜ್ಯಕ್ಕೆ ಸಮರ್ಪಿಸಿದ ಹೆಗ್ಗಳಿಕೆಗೆ ಈ ಸಂಸ್ಥೆಯು ಪಾತ್ರವಾಗಿದ್ದಲ್ಲದೆ ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಕಬಡ್ಡಿ ಸಾಮ್ರಾಜ್ಯದ ಸಾಮ್ರಾಟನಾಗಿ ಮೆರೆದಂತಹ ಹೆಗ್ಗಳಿಕೆ ಈ ಸಂಸ್ಥೆಗಿದೆ. ಆರಂಭದಲ್ಲಿ ಕಬಡ್ಡಿಯ ಉದ್ದೇಶ ಇಟ್ಟುಕೊಂಡಿದ್ದರೂ ಕೂಡಾ ಬಳಿಕದ ದಿನಗಳಲ್ಲಿ ವಿವಿಧ ಸಾಮಾಜಿಕ ಕಾರ್ಯಗಳಿಗೂ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಮುನ್ನಡೆದಿದೆ.

ಸಂಸ್ಥೆಯ ವತಿಯಿಂದ ಅಂತರಾಜ್ಯ ಮಟ್ಟದ, ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಹಲವಾರು ಕಬಡ್ಡಿ ಪಂದ್ಯಾಟಗಳು ಮತ್ತು ವಾಲಿಬಾಲ್ ಪಂದ್ಯಾಟಗಳನ್ನು ಹಮ್ಮಿಕೊಂಡಿದೆ. ನೇತ್ರ, ದಂತ ಮೊದಲಾದ ವೈದ್ಯಕೀಯ ಶಿಬಿರಗಳು, ವಿವಿಧ ಮಾಹಿತಿ ಕಾರ್ಯಾಗಾರಗಳು, ವಿವಿಧೆಡೆ ಶ್ರಮದಾನಗಳು, ವನಮಹೋತ್ಸವ ಮೊದಲಾದ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ.

ಇದೀಗ ಸಂಸ್ಥೆಯ ನೂತನ ಸಮಿತಿಯ ನೇತೃತ್ವದಲ್ಲಿ ಮತ್ತೆ ಕಾರ್ಯ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಲು ಸಜ್ಜಾಗಿರುತ್ತದೆ. ಇದರ ಭಾಗವಾಗಿ ಸಂಸ್ಥೆಯ ಆಶ್ರಯದಲ್ಲಿ ಆಯುಷ್ ವಿಭಾಗ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಉಚಿತ ಹಿಜಾಮಾ ಚಿಕಿತ್ಸಾ ಶಿಬಿರವು 2019 ಆಗಸ್ಟ್ 18 ರಂದು ಭಾನುವಾರ ಬೆಳಿಗ್ಗೆ 8 ರಿಂದ ಗೋಳ್ತಮಜಲಿನ ಹಜಾಜ್ ಸ್ಪೋಟ್ರ್ಸ್ ಕ್ಲಬ್ ಕಛೇರಿಯಲ್ಲಿ ನಡೆಯಲಿದೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕರಾದ ಯು. ರಾಜೇಶ್ ನಾಯಕ್ ವಹಿಸಲಿದ್ದು, ಮಂಗಳೂರು ಶಾಸಕ ಯು.ಟಿ. ಖಾದರ್ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್ ಹಿಜಾಮಾ ಚಿಕಿತ್ಸೆಯನ್ನು ಉದ್ಘಾಟಿಸುವರು.

ಮಾಜಿ ಸಚಿವ ಬಿ. ರಮಾನಾಥ ರೈ, ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ, ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಖತೀಬ್ ಶೇಖ್ ಮುಹಮ್ಮದ್ ಇರ್ಫಾನಿ ಅಲ್-ಅಝ್ಹರಿ, ದ.ಕ. ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಡಾ. ರಾಜೇಶ್ವರಿ, ಜಿಲ್ಲಾ ಆಯುಷ್ ವಿಭಾಗದ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್, ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದ ಡಾ. ಸಯ್ಯದ್ ಝಾಹಿದ್ ಹುಸೈನ್, ಹಜಾಜ್ ಸ್ಪೋಟ್ರ್ಸ್ ಕ್ಲಬ್ ಗೌರವಾಧ್ಯಕ್ಷರಾದ ಹಾಜಿ ಜಿ. ಮುಹಮ್ಮದ್ ಹನೀಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ವಿಶೇಷ ಸೂಚನೆ : ಮೊದಲು ಬಂದ 120 ಮಂದಿಗೆ ಮಾತ್ರ ಈ ಕಾರ್ಯಕ್ರಮದಲ್ಲಿ ಹಿಜಾಮಾ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ.

ಇಂತಿಯಾಝ್, ಅಧ್ಯಕ್ಷರು
ಹಜಾಜ್ ಸ್ಪೋಟ್ರ್ಸ್ ಕ್ಲಬ್ (ರಿ)

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ :
ಹಾಜಿ ಜಿ. ಮುಹಮ್ಮದ್ ಹನೀಫ್, ಗೌರವಾಧ್ಯಕ್ಷರು, ಹಜಾಜ್ ಸ್ಪೋಟ್ರ್ಸ್ ಕ್ಲಬ್ (ರಿ) ಸಲೀಂ ಮೊಬೈಲ್ ಕೇರ್, ಕಾರ್ಯಕಾರಿ ಸಮಿತಿ ಸದಸ್ಯರು ಹಾರಿಸ್ ಅಮರ್, ಕಾರ್ಯಕಾರಿ ಸಮಿತಿ ಸದಸ್ಯರು ಜಮಾಲ್, ಕಾರ್ಯಕಾರಿ ಸಮಿತಿ ಸದಸ್ಯರು.

ಹಿಜಾಮ ಚಿಕಿತ್ಸೆಯ ಬಗ್ಗೆ ಒಂದಿಷ್ಟು…..
“ಹಜ್‍ಮ್” ಎಂಬ ಅರಬಿ ಪದದಿಂದ ಉದ್ಭವಿಸಿದ್ದಾಗಿದೆ ‘ಹಿಜಾಮ’. ಹೀರುವುದು ಎಂದಾಗಿದೆ ಹಜ್‍ಮ್ ಎಂಬ ಪದದ ಭಾಷಾರ್ಥ. ಇನ್ನಷ್ಟು ವಿಶಾಲಾರ್ಥದಲ್ಲಿ ಹೇಳುವುದಾದರೆ ಚರ್ಮದಿಂದ ಹೀರುವ ರೂಪದಲ್ಲಿ ರಕ್ತವನ್ನು ಹೊರಗೆಳೆಯವುದಾಗಿದೆ ಹಿಜಾಮ. ಬ್ಲಡ್‍ಲೆಟಿಂಗ್, ಕಪ್ಪಿಂಗ್ ಥೆರಪಿ ಇತ್ಯಾದಿ ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ. ಹಿಜಾಮಾ ಅತ್ಯಂತ ಪುರಾತನವಾದ ಚಿಕಿತ್ಸಾ ಪದ್ದತಿಯಾಗಿದೆ. ರೋಗ ಶಮನಕ್ಕೆ ಹಾಗೂ ಪ್ರತಿರೋಧ ಶಕ್ತಿ ಹೆಚ್ಚಲು ಹಿಜಾಮ ಚಿಕಿತ್ಸೆಯನ್ನು ನಡೆಸಲಾಗುತ್ತದೆ. ಪುರಾತನ ಕಾಲದಲ್ಲಿ ಮೃಗಗಳ ಕೊಂಬು ಉಪಯೋಗಿಸಿ ಈ ಚಿಕಿತ್ಸೆಯನ್ನು ನಡೆಸಲಾಗುತ್ತಿತ್ತು. ಆದ್ದರಿಂದಲೇ ಇದಕ್ಕೆ ಕೊಂಬು ಚಿಕಿತ್ಸೆ ಎಂಬ ಹೆಸರೂ ಇದೆ. ಬಿದಿರಿನಿಂದ ತಯಾರಿಸಿದ ಕಪ್‍ಗಳನ್ನು ಈ ಚಿಕಿತ್ಸೆಗಾಗಿ ಪುರಾತನ ಚೈನಿಗರು ಬಳಸುತ್ತಿದ್ದರು. ಇಂದು ಪ್ಲಾಸ್ಟಿಕ್ ಹಾಗೂ ಗ್ಲಾಸ್‍ನ ಕಪ್‍ಗಳನ್ನು ಬಳಸಲಾಗುತ್ತದೆ.

ಹಿಜಾಮ ಪುರಾತನ ಚಿಕಿತ್ಸೆ
ಪುರಾತನ ಕಾಲದ ಕೆಲವು ಶಿಲೆಗಳಲ್ಲಿ ಹಿಜಾಮಾ ಚಿಕಿತ್ಸೆಯ ಕೆಲವು ಉಪಕರಣಗಳ ಚಿತ್ರವನ್ನು ಕೆತ್ತಿದ್ದಾಗಿ ಕಾಣಬಹುದು. ಸರಿಸುಮಾರು ಕ್ರಿ.ಪೂ 1550ರಲ್ಲಿ ರಚಿಸಲಾದ ಪುರಾತನ ಈಜಿಪ್ತ್‍ನ ವೈದ್ಯ ಗ್ರಂಥದಲ್ಲಿ ರೋಗ ಚಿಕಿತ್ಸಾ ರೀತಿಯಾಗಿ ಹಿಜಾಮವನ್ನು ಉಲ್ಲೇಖ ಮಾಡಲಾಗಿದೆ. ಹಿಪೆÇ್ಪೀಕ್ರಾಟ್ಸ್, ಗ್ಯಾಲನ್ ಮುಂತಾದವರು ಹಿಜಾಮಾ ಚಿಕಿತ್ಸೆಯ ಪ್ರಚಾರಕರಾಗಿದ್ದರು. ಅಂದು ಪ್ರಚಾರದಲ್ಲಿದ್ದ ಯುನಾನಿ ಚಿಕಿತ್ಸಾ ಪದ್ಧತಿಯನ್ನು ಆಧಾರವಾಗಿರಿಸಿ ಗ್ಯಾಲನ್ ಹಿಜಾಮವನ್ನು ಪ್ರಚಾರಪಡಿಸಿದ್ದ.

ಹಿಜಾಮಾಗೆ ಎರಡು ಕಾರಣಗಳನ್ನು ಹೇಳಲಾಗುತ್ತದೆ. ಒಂದನೆಯದಾಗಿ ಶರೀರದಲ್ಲಿ ರಕ್ತ ಸಂಚಲನವು ಕ್ರಮವಾಗಿ ನಡೆಯದಿದ್ದರೆ ಸ್ವಲ್ಪ ರಕ್ತವನ್ನು ತೆಗೆಯದಿದ್ದರೆ ರಕ್ತ ಸಂಚಾರವು ನಿಶ್ಚಲವಾಗುವ ಸಾಧ್ಯತೆಯಿದೆ. ಎರಡನೆಯದಾಗಿ ಪ್ರಕೃತಿ ಸಿದ್ದಾಂತ. (ರಕ್ತ-ವಾತ-ಪಿತ್ತ-ಕಫ ಇವುಗಳು ಪ್ರಕೃತ ಸಿದ್ದಾಂತ) ರೋಗ ಮತ್ತು ಆರೋಗ್ಯದ ಮೂಲ ಇವುಗಳು. ಈ ಪ್ರಕೃತಗಳ ಮಧ್ಯೆ ಸಂತುಲಿತಾವಸ್ಥೆಯನ್ನು ನೆಲೆಗೊಳಿಸಲು ರಕ್ತವನ್ನು ತೆಗೆಯಲಾಗುತ್ತದೆ.

ಹಿಜಾಮದ ಪ್ರಯೋಜನಗಳು
1. ರೋಗಕ್ಕೆ ಶಮನ ನೀಡುತ್ತದೆ.
2. ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಉಷ್ಣ ಪ್ರದೇಶಗಳಲ್ಲಿ ವಾಸಿಸುವವರಿಗೆ ಹಿಜಾಮಾ ಹೆಚ್ಚು ಉಪಯುಕ್ತ.
3. ರಕ್ತದಲ್ಲಿ ಬೆರಕೆಯಾದ ಮಾಲಿನ್ಯವನ್ನು ಬೇರ್ಪಡಿಸಲು ಹಿಜಾಮಾ ಹೆಚ್ಚು ಸಹಾಯಕ. ರಕ್ತದಲ್ಲಿ ಮಾಲಿನ್ಯವು ಬೆರೆತಾಗ ರೋಗಗಳುಂಟಾಗುತ್ತದೆ. ಮಲ-ಮೂತ್ರ, ವಾಂತಿ, ಬೆವರು ಇವೆಲ್ಲವೂ ಶರೀರದ ಒಳಗಿರುವ ಮಾಲಿನ್ಯವನ್ನು ಹೊರ ತಳ್ಳಲಿಕ್ಕಿರುವ ಶರೀರದ ಸ್ವಾಭಾವಿಕ ಕ್ರಿಯೆಗಳು.
4. ರಕ್ತ ಸಂಚಲನ ವರ್ಧನೆ
5. ರಕ್ತ-ವಾತ-ಪಿತ್ತ-ಕಫ ಮುಂತಾದವುಗಳ ಸಂತ್ಪುಲಿತಾವಸ್ಥೆಯನ್ನು ಸರಿದೂಗಿಸುವುದು. (ಯುನಾನಿ ವೈದ್ಯ ಸಿದ್ದಾಂತ ಪ್ರಕಾರ)
6. High Blood Pressure : ಹಿಜಾಮದ ಮೂಲಕ ರಕ್ತದೊತ್ತಡ ನಿಯಂತ್ರಣ.

7. ECG, ECR : ತೂಕ ಜಾಸ್ತಿಯಿರುವವರು ಹಿಜಾಮ ನಡೆಸಿದರೆ ತೂಕದಲ್ಲಿ ವ್ಯತ್ಯಾಸವುಂಟಾಗುವುದು.
8. RBC& HB (Red blood cells & Hemoglobi) : ಕೆಂಪುರಕ್ತ ಕಣಗಳು ಹೆಚ್ಚಿದ್ದರೆ ಕಡಿಮೆ ಮಾಡುವುದು ಮತ್ತು ಕಡಿಮೆ ಇದ್ದರೆ ಹೆಚ್ಚು ಮಾಡುವುದು ಹಾಗೂ ಸಮಾಂತರ ಸ್ಥಿತಿಗೆ ತಲುಪುವುದು ಮುಂತಾದವುಗಳು ಹಿಜಾಮಾ ಚಿಕಿತ್ಸೆಯಿಂದ ಸಾಧ್ಯ.
9. ಆಪತ್ಕಾರಿಯಾದ ಕೊಲೆಸ್ಟ್ರಾಲ್ ಶರೀರದಲ್ಲಿ ಅಧಿಕವಿದ್ದರೆ ಅದನ್ನು ಕಡಿಮೆ ಮಾಡಲು ಹಿಜಾಮಾದಿಂದ ಸಾಧ್ಯ.
10. ಪ್ರಮೇಹ (Diabet) ರೋಗಿಗಳ ರಕ್ತದಲ್ಲಿರುವ ಗ್ಲುಕೋಸ್ ಅಂಶವನ್ನು ಕಡಿಮೆ ಮಾಡಲು ಹಿಜಾಮಾ ಚಿಕಿತ್ಸೆಯು ಸಹಾಯಕ.
11. ಹಿಜಾಮವು ಯೂರಿಕ್‍ಆಸಿಡ್ (Uric Acid) ನ್ನು ಕಡಿಮೆಗೊಳಿಸುತ್ತದೆ.
12. ಕರುಳು ರೋಗಗಳು, ಕಿಡ್ನಿ ರೋಗಗಳಿಗೂ ಹಿಜಾಮಾ ಉಪಯುಕ್ತ.
13. ನರ ಸಂಬಂಧಿತ ರೋಗಗಳಿಗೆ, ಮಿದುಳಿನ ರಕ್ತ ಸಂಚಾರ ಸುಗಮಗೊಳಿಸಲು, ನೆನಪಿನ ಶಕ್ತಿ ಹಾಗೂ ದೃಷ್ಠಿ ಶಕ್ತಿಯನ್ನು ಹೆಚ್ಚಿಸಲು ಹಿಜಾಮಾ ಸಹಕಾರಿ.

Leave a Reply

Your email address will not be published. Required fields are marked *