ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ, ಇದಕ್ಕೆ ಕಾನೂನಿನ ಮೂಲಕ ಉತ್ತರಿಸುತ್ತೇನೆ: ಡಿಕೆಶಿ ಖಡಕ್ ಉತ್ತರ

ನ್ಯೂಸ್ ಕನ್ನಡ ವರದಿ: ಸದಾಶಿವ ನಗರ ನಿವಾಸದ ಸುದ್ದಿ ಗೋಷ್ಠಿಯಲ್ಲಿ ಮಾತಾಡಿದ ಅವರು, ನನ್ನ ಮೇಲೆ ರಾಜಕೀಯ ಷಡ್ಯಂತ್ರ ನೆಡೆದಿದೆ ಇದಕ್ಕೆ ನಾನು ಕಾನೂನಾತ್ಮಕವಾಗೆ ಉತ್ತರ ಕೊಡುತ್ತೇನೆ ನಾನು ಕದ್ದಿಲ್ಲ, ಕೊಲೆ ಮಾಡಿಲ್ಲ, ಲಂಚ ತೆಗೆದುಕೊಂಡಿಲ್ಲ ಮತ್ತು ಯಾವ ತಪ್ಪು ಮಾಡಿಲ್ಲ ನಾನ್ಯಾಕೆ ಹೆದರಬೇಕು, ಸಾಬೀತಾಗುವವರೆಗು ಹೋರಾಟ ಮಾಡುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪಕ್ಷಕೊಟ್ಟ ಜವಾಬ್ದಾರಿಯನ್ನ ನಾನು ಮಾಡಿಕೊಂಡು ಬಂದಿದ್ದೆನೆ ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತನಾಗಿ ಅದು ನನ್ನ ಜವಾಬ್ದಾರಿ.

ನನ್ನ ತಾಯಿಗೆ 88 ವರ್ಷ ಅವರಿಗೆ ಇಬ್ಬರು ಮಕ್ಕಳು ಒಬ್ಬರು ಸಂಸದ ಮತ್ತೊಬ್ಬ ಶಾಸಕ. ನಮ್ಮ ತಾಯಿಯ ಆಸ್ತಿ ಸ್ವ ಆಸ್ತಿಯನ್ನು ಮತ್ತು ದಾಖಲೆ ಇರೊ ಆಸ್ತಿಗು ಬೇನಾಮಿ ಆಸ್ತಿ ಎಂದು ಜಪ್ತಿ ಮಾಡ್ತಿದ್ದಾರೆ. ತಾಯಿ, ಹೆಂಡತಿಯನ್ನು ಕೂಡ ತನಿಖೆ ಮಾಡಿ ಹಿಂಸಿಸಿದ್ದಾರೆ ಎಂದು ತಿಳಿಸಿದ್ದಾರೆ.

ನಾನು ಎಲ್ಲಾ ಹಣಕ್ಕೆ ಟ್ಯಾಕ್ಸ್ ಕಟ್ಟಿದ್ದೇನೆ ಅದಕ್ಕೆ ದಾಖಲೆಯು ನೀಡಿದ್ದೇನೆ ಆದರು ನನ್ನ ಮೇಲೆ ಈ ದಾಳಿ ನಡೆಯುತ್ತಿದೆ. ನೆನ್ನೆ ರಾತ್ರಿ ಮನೆಗೆ ಬಂದಾಗ ಜಾರಿ ನಿರ್ದೇಶನಾಲಯವು (ಇ.ಡಿ) ನಿಮಗೆ ಸಮನ್ಸ್ ನೀಡಿದೆ ಎಂದು ತಿಳಿಸಿದರು, ನಾನು ಸಮನ್ಸ್ ಅನ್ನು ಗೌರವದಿಂದಲೆ ಸ್ವೀಕರಿಸಿದ್ದೆನೆ. ಇದರ ಕುರಿತು ಈ ಹಿಂದೆ ನೀಡಿದಂತೆಯೇ ಮಧ್ಯಂತರ ರಕ್ಷಣೆಯನ್ನು ಮುಂದುವರಿಸಿ ಎಂದು ಮನವಿ ಮಾಡಿದ್ದೇನೆ. ಇಡಿ ನನಗೆ ದೆಹಲಿಗೆ ವಿಚಾರಣೆ ಕರೆದಿದ್ದಾರೆ ತೆರಳಿ ಅವರ ವಿಚಾರಣೆಗೆ ಸಹಕಾರಿಸುತ್ತೇನೆ ಎಂದು ತಿಳಿಸಿದ್ದಾರೆ.

ಆಗಸ್ಟ್ 2017 ರಿಂದ ನನ್ನ ಬಗ್ಗೆ ಮಾಧ್ಯಮಗಳು ಏನೆಲ್ಲ ಸುದ್ದಿ ಮಾಡಬೇಕೊ ಅದಲ್ಲೆ ಮಾಡಿದ್ದಿರಿ. ಕೆಲವು ಸತ್ಯ ಹೇಳಿದರೆ ಇನ್ನೆಲ್ಲ ತಿರುಚಿ ಸುದ್ದಿ ಮಾಡಿದ್ದಿರಿ, ನೆನ್ನೆ ಹೈಕೋರ್ಟ್ ತೀರ್ಪು ಬಂದ ಮೇಲೆ ಡಿಕೆಶಿ ನಾಪತ್ತೆ, ಗೌಪ್ಯ ಸ್ಥಳಕ್ಕೆ ತೆರೆಳಿದ ಡಿಕೆಶಿ ಎಂದು ಸುಳ್ಳು ಸುದ್ದಿ ಮಾಡಿದ್ದಿರಿ ಇರಲಿ ಇದು ನಿಮ್ಮ ಮಾಧ್ಯಮದ ಹಕ್ಕು ನಿಮ್ಮ ಅನುಕೂಲದಂತೆ ಸುದ್ದಿ ಮಾಡಿಕೊಳ್ಳಿ ಆದರೆ ಪತ್ರಿಕಾ ಧರ್ಮವನ್ನು ಮರೆಯದಿರಿ ಎಂದು ಮಾಧ್ಯಮಗಳ ಕರ್ತವ್ಯದ ಬಗ್ಗೆ ಮಾಧ್ಯಮಗಳಿಗೆ ಬಿಸಿ ಮುಟ್ಟಿಸಿದ ಡಿಕೆಶಿ.

ಆಪರೇಷನ್ ಕಮಲದ ಬಗ್ಗೆ ಯಾರು ಮಾತಾಡಲ್ಲ ನನ್ನ ವಿಷಯವೆ ಸಿಗುತ್ತಾ ಇ.ಡಿ ಮತ್ತು ಮಾಧ್ಯಮಗಳಿಗೆ ಎಂದು ಗುಡುಗಿದ್ದಾರೆ.

ಜಾರಿ ನಿರ್ದೇಶನಾಲಯದ ಬಂಧನದಿಂದ ರಕ್ಷಣೆ ನೀಡುವಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ಮಧ್ಯಾಹ್ನ ವಿಚಾರಣೆಗೆ ಎತ್ತಿಕೊಳ್ಳಲಿದೆ.

ಜಾರಿ ನಿರ್ದೇಶನಾಲಯವು (ಇ.ಡಿ) ಗುರುವಾರ ರಾತ್ರಿ ಹತ್ತು ಗಂಟೆಗೆ ಸಮನ್ಸ್ ನೀಡಿದೆ. ಮಧ್ಯಾಹ್ನ ಒಂದು ಗಂಟೆಗೆ ವಿಚಾರಣೆಗೆ ಬರುವಂತೆ ಸೂಚಿಸಿದೆ. ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಬೇಕು. ಅಲ್ಲಿಯವರೆಗೆ ಬಂಧಿಸದಂತೆ ರಕ್ಷಣೆ ನೀಡಿ ಎಂದು ಡಿಕೆ ಶಿವಕುಮಾರ್ ಅವರ ವಕೀಲರಾದ ಬಿ.ವಿ. ಆಚಾರ್ಯ ಕೋರಿದರು. ಈ ಹಿಂದೆ ನೀಡಿದಂತೆಯೇ ಮಧ್ಯಂತರ ರಕ್ಷಣೆಯನ್ನು ಮುಂದುವರಿಸಿ ಎಂದು ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *