“ನಾನು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ”: ಡಿಕೆ.ಶಿವಕುಮಾರ್

ನ್ಯೂಸ್ ಕನ್ನಡ ವರದಿ: ತಾವು ತಮ್ಮ 35 ವರ್ಷಗಳ ರಾಜಕಾರಣದಲ್ಲಿ ಎಂದಿಗೂ ತತ್ವ, ಸಿದ್ದಾಂತ ಬಿಟ್ಟು ಹೋಗಿಲ್ಲ. ಹಣದಿಂದ, ಜಾತಿಯಿಂದ ರಾಜಕಾರಣ ಮಾಡಿವನಲ್ಲ. ಒಂದು ವೇಳೆ ಯಾರಾದರೂ ನಾನು ಈ ರೀತಿ ಮಾಡಿದ್ದೇನೆಂದು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇಂದು ರೈಲಿನಲ್ಲಿ ಮೈಸೂರಿಗೆ ಆಗಮಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಕೋರಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಎಲ್ಲರ ಪ್ರಾರ್ಥನೆ ಫಲವಾಗಿ ತಾವು 50 ದಿನಗಳ ಬಳಿಕ ಜನತೆಯ ಸೇವೆ ಮಾಡಲು ವಾಪಾಸ್ ಬಂದಿದ್ದೇನೆ ಎಂದರು. ಅಲ್ಲದೇ, ಜನತೆಯ ಪ್ರೀತಿಯ ಮುಂದೆ ನನ್ನ ಆಸ್ತಿ ಗೌಣ. ಜನತೆ ತೋರಿಸಿರುವ ವಿಶ್ವಾಸ ಅಪಾರ. ಇದಕ್ಕೆ ಬೆಲೆ ಕಟ್ಟಲು ಸಾಧ್ಯಾವಿಲ್ಲ ಎಂದರು.

ನಾನು ನನ್ನ ಮೂರು ದಶಕಗಳ ರಾಜಕೀಯ ಜೀವನದಲ್ಲಿ ಎಂದಿಗೂ ಅವರ ಜೊತೆ ಹೋಗಬೇಡಿ, ಇವರ ಜೊತೆ ಹೋಗಬೇಡಿ ಎಂದು ಯಾವ ಸಂದರ್ಭದಲ್ಲೂ ನಾನು ಹೇಳಿದವನಲ್ಲ. ನಾನು ಎಂದಿಗೂ ಜಾತಿಯ ಆಧಾರದ ಮೇಲೆ ರಾಜಕೀಯ ಮಾಡಿಲ್ಲ. ಆದರೂ ನಮ್ಮ ಪಕ್ಷದಲ್ಲಿ ಈ ಸಮುದಾಯದವರು ಎಂತಲೇ ಮಂತ್ರಿಗಿರಿ ಕೊಟ್ಟಿದ್ದಾರೆಂದು ಹೇಳುವ ಮೂಲಕ ತಾವು ಜಾತಿ ವಿರೋಧಿ ಎಂದರು. ಇನ್ನು ನಾನು ಯಾವತ್ತು ನನ್ನ ಸಿದ್ದಾಂತ, ತತ್ವಗಳನ್ನು ಬಿಟ್ಟು ಹೋಗಿಲ್ಲ. ನಮ್ಮ ಸರ್ಕಾರ ಉತ್ತಮ ಕೆಲಸ ಮಾಡಿದೆ. ಜನತೆ ತಮ್ಮ ಮೇಲೆ ತೋರಿಸಿದ ಪ್ರೀತಿಗೆ ನಾನು ಅಭಾರಿ ಎಂದರು.

Leave a Reply

Your email address will not be published. Required fields are marked *