ಪದೇ ಪದೇ ಹಿಂದಿ ಹೇರಿಕೆ ಇಲ್ಲ, ಇಲ್ಲ, ಎಲ್ಲಿದೆ ತೋರ್ಸಿ ಅನ್ನೋರಿಗೆ ಸರಳವಾಗಿ ಹೇಳ್ತಿನಿ ಕೇಳಿ: ಪೂರ್ಣಚಂದ್ರ ತೇಜಸ್ವಿ
ನ್ಯೂಸ್ ಕನ್ನಡ ವರದಿ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿಂದಲೂ ವರ್ಷಕ್ಕೆ ಒಮ್ಮೆ ಹಿಂದಿ ರಾಷ್ಟ್ರ ಭಾಷೆ ಅದನ್ನು ಕಂಪಲ್ಸರಿ ಕಲಿಯಲೇ ಬೇಕು ಅನ್ನೊತರಹದ ಹೇರಿಕೆಯನ್ನು ಪ್ರಸ್ತಾಪಿಸಿ ಕನ್ನಡ ನಾಡ ಜನರನ್ನು ಕೆಣುಕುತ್ತಲೇ ಬಂದಿದೆ. ಈ ಕುರಿತು ಅನೇಕರು ಹಿಂದಿ ವಿರೋಧಿಸಿ ಕನ್ನಡ ಪರವಾಗಿ ಮಾತಾಡಿದರೆ, ಇನ್ನೊಂದಷ್ಟು ಜನ ಹಿಂದಿ ಏಕೆ ಬೇಡ ಅನ್ನೊದನ್ನು ಸೂಕ್ಷ್ಮವಾಗಿ ಸಾಮಾಜಿಕ ಜಾಲರತಾಣದಲ್ಲಿ ಜನರ ಮುಂದಿಟ್ಟಿದ್ದಾರೆ. ಇದರ ನಡುವೇ ಲೂಸಿಯಾ ಖ್ಯಾತಿಯ ಮ್ಯೂಸಿಕ್ ಡೈರೆಕ್ಟರ್ ಪೂರ್ಣಚಂದ್ರ ತೇಜಸ್ವಿಯವರ ಹಿಂದಿ ಹೇರಿಕೆ ಹೇಗೆ ನಡೆಯುತ್ತಿದೆ. ಭಾಷೆಯ ಕುರಿತು ನೀವು ಹೇಳ್ತಿರೊದು ಹೇಗಿದೆ, ನಾವು ಹೇಳ್ತಿರೊದು ಹೇಗಿದೆ ಅನ್ನುವುದನ್ನು ಸುಲಭ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ.
ಪೂರ್ಣಚಂದ್ರ ಅವರು ಬರೆದಿರುವುದು ಹೀಗಿದೆ, ಪದೇ ಪದೇ ಹಿಂದಿ ಹೇರಿಕೆ ಇಲ್ಲ, ಇಲ್ಲ, ಎಲ್ಲಿದೆ ತೋರ್ಸಿ ಅನ್ನೋರಿಗೆ. ಸರಳವಾಗಿ ಹೇಳ್ತೀನಿ ಕೇಳಿ
ನೀವು ಹೇಳ್ತಿರೋದು…
ಹಿಂದಿ ಭಾಷಿಗರು : ಹಿಂದಿ+ಇಂಗ್ಲಿಷ್ (ಬರಿ 2 ಭಾಷೆ ಕಲಿಯಲಿ)
ಕನ್ನಡಿಗರು : ಕನ್ನಡ+ಇಂಗ್ಲಿಷ್+ಹಿಂದಿ (3 ಭಾಷೆ ಕಲಿಯಲಿ)
ತಮಿಳರು : ತಮಿಳ್+ಇಂಗ್ಲಿಷ್+ಹಿಂದಿ (3 ಭಾಷೆ ಕಲಿಯಲಿ)
ತೆಲುಗಿನವರು : ತೆಲುಗು+ಇಂಗ್ಲಿಷ್+ ಹಿಂದಿ (3 ಭಾಷೆ ಕಲಿಯಲಿ) ಇದು ಹೇರಿಕೆ..
ನಾವು ಹೇಳೋದು..
ಹಿಂದಿ ಭಾಷಿಗರು : ಹಿಂದಿ+ಇಂಗ್ಲಿಷ್ (2ಭಾಷೆ ಕಲಿಯಲಿ)
ಕನ್ನಡಿಗರು : ಕನ್ನಡ+ಇಂಗ್ಲಿಷ್ (2ಭಾಷೆ ಕಲಿಯಲಿ)
ತಮಿಳರು : ತಮಿಳ್+ಇಂಗ್ಲಿಷ್ (2 ಭಾಷೆ ಕಲಿಯಲಿ)
ತೆಲುಗಿನವರು: ತೆಲುಗು+ಇಂಗ್ಲಿಷ್ (2 ಭಾಷೆ ಕಲಿಯಲಿ)
ಇದು ಸರಳ ಪರಿಹಾರ, ಇದರ ಮೇಲೆ ಯಾರಿಗೆ ಯಾವ ಭಾಷೆ ಇಷ್ಟವೋ ಅದನ್ನ ಕಲಿಯಲಿ. ಇದೂ ಕೂಡ ಅರ್ಥ ಆಗಲಿಲ್ಲ ಅಥವಾ ಅರ್ಥ ಆದರೂ ಬೇರೇನೋ ವಾದ ಮಾಡ್ತಾ ಇದೀರಾ ಅಂದ್ರೆ ನಿಮ್ಮ ಒಳ ಉದ್ದೇಶ ಏನು ಅನ್ನೋದು ನೇರವಾಗಿ ಹೇಳಿ, ನಮಗೂ ಅರ್ಥ ಆಗಲಿ ಎಂದು ತೇಜಸ್ವಿ ಅವರು ಪ್ರಶ್ನಿಸಿದ್ದಾರೆ.
https://m.facebook.com/story.php?story_fbid=10223667873266125&id=1270793603