ಆಟೋ ರಾಜಾಕನ್ಮಾರ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಜಂಟಿ ಸಹಭಾಗಿತ್ವದೊಂದಿಗೆ ಮುಡಿಪುವಿನಲ್ಲಿ ಯಶಸ್ವಿಯಾಗಿ ನಡೆದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ 246 ನೇ ರಕ್ತದಾನ ಶಿಬಿರ..!
ನ್ಯೂಸ್ ಕನ್ನಡ ವರದಿ ಸೆ.13:- ಆಟೋ ರಾಜಾಕನ್ಮಾರ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಜಂಟಿ ಸಹಭಾಗಿತ್ವದಲ್ಲಿ ಫಾದರ್ ಮುಲ್ಲರ್ಸ್ ಕಂಕನಾಡಿ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಸೌಹಾರ್ದ ರಕ್ತದಾನ ಶಿಬಿರವು ಸಾಂಬಾರ್ತೋಟ ಮದ್ರಸ ಹಾಲ್ ನಲ್ಲಿ ನಡೆಯಿತು.

ಅಸ್ಸಯ್ಯದ್ ಶಿಬಾಬುದ್ದೀನ್ ತಂಙಳ್ ಮದಕ ಇವರು ದುವಾದೊಂದಿಗೆ ರಕ್ತದಾನ ಶಿಬಿರದ ಸಭಾ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾಂಬಾರ್ತೋಟ ಮಸೀದಿಯ ಖತೀಬರಾದ ಅಬ್ದುಲ್ ರಝಾಕ್ ಅಹ್ಸನಿ ಅವರು ಮಾತನಾಡಿ ಜೀವಕ್ಕೆ ಜೀವ ನೀಡುವ ಯಾವುದೇ ವೈಜ್ಞಾನಿಕ ಸಂಶೋಧನೆಗಳಿಗೂ ಸರಿಸಾಟಿಯಾಗದ ರಕ್ತದಾನ ಪ್ರಕ್ರಿಯೆಯಲ್ಲಿ ರಕ್ತಕ್ಕೆ ಪರ್ಯಾಯವೊಂದಿದ್ದರೆ ಅದು ರಕ್ತ ಮಾತ್ರವಾಗಿದೆ ಎಂದರು.
ವೇದಿಕೆಯಲ್ಲಿ ಬ್ರೈಟ್ ಸಂಸ್ಥೆಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ,ಹಸನ್ ಹಾಜಿ ಸಾಂಬಾರ್ತೋಟ ,ಬ್ಲಡ್ ಡೋನರ್ಸ್ ಮಂಗಳೂರು (ರಿ) ಅಧ್ಯಕ್ಷರಾದ ಜನಾಬ್ ಸಿದ್ದೀಕ್ ಮಂಜೇಶ್ವರ ,ಸಾಮಾಜಿಕ ಕಾರ್ಯಕರ್ತ ಜಲೀಲ್ ಆಲಂಪಾಡಿ ,ಶಾಹುಲ್ ಹಮೀದ್ ಹೆಚ್.ಬಿ.ಟಿ ಉಪಸ್ಥಿತರಿದ್ದರು.
ಸನ್ಮಾನ :- ಸಾಮಾಜಿಕ ರಂಗದಲ್ಲಿ ನಿಸ್ವಾರ್ಥವಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರಕ್ಕೆ ಭಾಜೀನರಾದ ಎಂ.ಎನ್.ಜಿ ಫೌಂಡೇಶನ್ ಸಂಸ್ಥಾಪಕರಾದ ಜನಾಬ್ ಇಲ್ಯಾಸ್ ಮಂಗಳೂರು ,ಮೈಮೂನ ಫೌಂಡೇಶನ್ ಸಂಸ್ಥಾಪಕರಾದ ಜನಾಬ್ ಆಸಿಫ್ ಆಪತ್ಬಾಂಧವ ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ ಎಸ್.ಎಚ್ ಸಾಂಬಾರ್ತೋಟ ಇವರನ್ನು ಗಣ್ಯ ಅತಿಥಿಗಳ ಸಮಕ್ಷಮದಲ್ಲಿ ಶಾಲು ಹೊದಿಸಿ ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಬ್ಲಡ್ ಡೋನರ್ಸ್ ಮಂಗಳೂರು (ರಿ) ಮಹಿಳಾ ಘಟಕದ ಅಧ್ಯಕ್ಷೆ ಉಪನ್ಯಾಸಕಿ ಶ್ರೀಮತಿ ಆಯಿಷ್ ಯು.ಕೆ ಉಳ್ಳಾಲ ಇವರ ಚೊಚ್ಚಲ ಕವನ ಸಂಕಲನ ಗೋಡೆ ಕಟ್ಟುವವರು ಪುಸ್ತಕವನ್ನು ಬ್ಲಡ್ ಡೋನರ್ಸ್ ಮಂಗಳೂರು (ರಿ) ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಜನಾಬ್ ಸಿದ್ದೀಕ್ ಮಂಜೇಶ್ವರ ಅವರ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬಿಡಿಎಂ ಕಾರ್ಯ ನಿರ್ವಾಹಕರುಗಳಾದ ಫಯಾಝ್ ಮಾಡೂರು ,ಹಮೀದ್ ಪಜೀರ್ ,ಹನೀಫ್ ಮುಡಿಪು ,ಸಿರಾಜ್ ಪಜೀರ್ ಅದೇ ರೀತಿಯಾಗಿ ಸದಸ್ಯರುಗಳಾದ ಮನ್ಸೂರ್ ಕೋಡಿಜಾಲ್ ,ಇಸಾಕ್ ಬೋಳಿಯಾರ್ ಉಪಸ್ಥಿತರಿದ್ದರು.
ಬ್ಲಡ್ ಡೋನರ್ಸ್ ಮಂಗಳೂರು (ರಿ) ಕಾರ್ಯ ನಿರ್ವಾಹಕರಾದ ರಝಾಕ್ ಸಾಲ್ಮರ ಅವರು ಕಾರ್ಯಕ್ರಮ ನಿರೂಪಿಸಿದರು.ಅಬ್ದುಲ್ ಜಲೀಲ್ ಮುಡಿಪು ಸ್ವಾಗತಿಸಿ ವಂದಿಸಿದರು .