ಟ್ವಿಟರ್, ಟೀವಿಯಲ್ಲಿ ಸುಶಾಂತ್ ಚರ್ಚೆ ಬಿಟ್ಟು ಬೀದಿಗಳಿದು ಬಡವರಿಗೆ ಸಹಾಯಮಾಡಿ!: ಸೋನು ಸೂದ್

ನ್ಯೂಸ್ ಕನ್ನಡ ವರದಿ: ಸುಶಾಂತ್ ಸಿಂಗ್ ಅಸಹಜ ಸಾವಿನ ನಂತರ ಸಾವಿನ ಕುರಿತು ತನಿಖೆ ನಡೆಯುತ್ತಿದ್ದರೂ ಹಲವಾರು ನ್ಯೂಸ್ ಚಾನೆಲ್ ಮತ್ತು ನಟಿ ಕಂಗನಾ ರಣಾವತ್ ಪ್ರತಿದಿನ ಹೊಸ ಹೊಸ ಹೇಳಿಕೆ, ವಿವಾದಾತ್ಮಕ ದೋಷಾರೋಪಣೆ ಮೂಲಕ ಸತತವಾಗಿ ಸುದ್ದಿಯಲ್ಲಿದ್ದು ಇದೀಗ ಸುಶಾಂತ್ ವಿಷಯವನ್ನು ಸಂಪೂರ್ಣವಾಗಿ ಬದಿಗಿಟ್ಟು ಟಿಆರ್ಪಿಗಾಗಿ ಬೇರೆ ವಿಷಯಗಳ ಮೋರೆ ಹೋಗಿರುವುದು ನಿಮಗೆ ತಿಳಿದಿದೆ. ಈ ಬಗ್ಗೆ ಲಾಕ್ಡೌನ್ ನಲ್ಲಿ ತಮ್ಮ ಜನಸೇವೆಯ ಮೂಲಕ ಮನೆಮಾತಾದ ನಟ ಸೋನು ಸೂದ್ ಮಾತನಾಡಿದ್ದಾರೆ.

‘ಟಿವಿ ಚಾನೆಲ್ ಮತ್ತು ಟ್ವಿಟರ್ ಮೂಲಕ ಸುಶಾಂತ್ ಸಿಂಗ್ ರನ್ನು ಒಮ್ಮೆಯೂ ಭೇಟಿಯಾಗದ, ಅವರೊಂದಿಗೆ ಕೆಲಸ ಮಾಡಲು ಇಚ್ಚಿಸದ, ಅವರ ಬಗ್ಗೆ ಕಿಂಚಿತ್ತೂ ತಿಳಿದಿರದ ಜನರು ಸುಶಾಂತ್ ಅವರನ್ನು ದತ್ತು ಪಡೆದ ರೀತಿಯಲ್ಲಿ ಅವರ ಪರ ಮಾತನಾಡುತ್ತಾ ಪ್ರಚಾರ ಪಡೆಯುತ್ತಾ ಸುದ್ದಿಯಲ್ಲಿರಲು ಬಯಸುವ ಜನರಿಗೆ ನಾನು ಹೇಳಬಯಸುತ್ತೇನೆ, ನೀವು ಟಿವಿ ಮತ್ತು ಟ್ವಿಟರ್ ಬಿಟ್ಟು ಬನ್ನಿ ಬಿಹಾರ್ ಉತ್ತರಾಖಂಡ್, ಜಾರ್ಖಂಡ್ ಜನರ ಬಳಿಗೆ, ಅವರಿಗೆ ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲ, ಉದ್ಯೋಗವಿಲ್ಲ, ಅವರಿಗೆ ಸಹಾಯ ಮಾಡಿ, ಅವರ ನೋವಿನಲ್ಲಿ ಭಾಗಿಯಾಗಿ ಅದು ಬಿಟ್ಟು ನಿಮ್ಮ ಅಂಜೆಡಾ ಚಲಾಯಿಸಲು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ’ ಎಂದು ನಟ ಸೋನು ಸೂದ್ ತರಾಟೆಗೆ ತೆಗೆದುಕೊಂಡರು.

ಸುಶಾಂತ್ ವಿಷಯದಲ್ಲಿ ಇವರು ಮೂಗುತೂರಿಸಲು ಪ್ರಯತ್ನಿಸಿದಾಗಲೇ ನಮಗೆ ತಿಳಿದಿತ್ತು ಇವರಿಗೆ ಕೇವಲ ತಮ್ಮ ಪ್ರಚಾರದ ಚಿಂತೆ ಮಾತ್ರವೇ ಉದ್ದೇಶ ಎಂದು. ಅದು ಈಗ ನಿಜವೂ ಆಗಿದೆ, ಈಗ ಸುಶಾಂತ್ ವಿಷಯ ಕಾವು ಕಮ್ಮಿಯಾಗಿ ಸಂಪೂರ್ಣವಾಗಿ ಮಾಯವಾಗಿದೆ, ಬೇರೆ ವಿಷಯಗಳು ಆವರಿಸಿಕೊಂಡಿದೆ. ಇದು ನಿರೀಕ್ಷಿತವಾದದ್ದು ಎಂದರು.

Leave a Reply

Your email address will not be published. Required fields are marked *