ನಾನು ಮತ್ತು ಯಡಿಯುರಪ್ಪ ಒಂದೇ ಆಸ್ಪತ್ರೆಯಲ್ಲಿದ್ದಾಗ ಯಾರು ಏನು ಮಾತನಾಡಿದ್ದಾರೆ ಗೊತ್ತಿದೆ!: ಸಿದ್ದು
ನ್ಯೂಸ್ ಕನ್ನಡ ವರದಿ: ಮುಖ್ಯಮಂತ್ರಿ ಯಡಿಯುರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಇಂದು ಪತ್ರಿಕಾಗೋಷ್ಠಿ ಮೂಲಕ, ಟ್ವಿಟರ್ ಮೂಲಕ ತೀವ್ರ ವಾಗ್ದಾಳಿ ನಡೆಸಿ ಸರ್ಕಾರದ ಭೃಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿಯೂ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಧಾನಸೌಧದಲ್ಲಿ ಇಂದು ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿ ‘ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದಿಂದ ಎಳ್ಳಷ್ಟೂ ಲೋಪ ಆಗಿಲ್ಲ. ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ. ಈ ಕುರಿತು ತನಿಖೆ ನಡೆಯಬೇಕಾದ ಅಗತ್ಯವಿಲ್ಲ ಎಂದು ಸುದೀರ್ಘವಾದ ಸ್ಪಷ್ಟನೆ ನೀಡಿದ ನಂತರ ಎದ್ದು ನಿಂತು ತನ್ನದೇ ವಿಶಿಷ್ಟ ಮಾತಿನ ಶೈಲಿಯ ಮೂಲಕ ಟಾಂಗ್ ನೀಡಲು ಮುಂದಾದ ಸಿದ್ದರಾಮಯ್ಯನವರು ಆರಂಭದಲ್ಲಿ ನಗೆ ಚಟಾಕಿ ಹಾರಿಸಿದರು.
ನಾನೂ ಯಡಿಯುರಪ್ಪನವರೂ ವೈಯಕ್ತಿಕವಾಗಿ ಸ್ನೇಹಿತರು, ನನಗೂ ಅವರಿಗೂ ವೈಯಕ್ತಿಕವಾಗಿ ಬಾಂಧವ್ಯವಿದೆ, ಅದು ಬೇರೆ. ನನಗೆ ಗೊತ್ತಿದೆ ನಾವಿಬ್ಬರೂ ಒಂದೇ ಆಸ್ಪತ್ರೆಯಲ್ಲಿ ಕೊರೋನ ಸಂಬಂಧಿಸಿದಂತೆ ದಾಖಲಾಗಿದ್ದಾಗ ಏನೇನು ಮಾತನಾಡಿದ್ದಾರೆ ರಾಜ್ಯದ ಜನ, ಬಿಜೆಪಿ ಪಕ್ಷದವರು ಯಾರ್ಯಾರು ಏನೇನು ಮಾತನಾಡಿದ್ದಾರೆ ಎಲ್ಲಾ ಗೊತ್ತಿದೆ, ವೈಯಕ್ತಿಕ ಸಂಬಂಧ ಮತ್ತು ರಾಜಕೀಯ ಸಂಬಂಧ ಬೇರೆಬೇರೆ ಎಂದು ತಮ್ಮ ಸಿದ್ದರಾಮಯ್ಯನವರು ತೀವ್ರ ವಾಗ್ದಾಳಿ ಮುಂದುವರೆಸಿದರು.