ಕನ್ನಡಿಗರಿಗೇ ಕುಡಿಯಲು ನೀರಿಲ್ಲ, ಇನ್ನು ನಮಗೆ ಕೊಡಲು ಹೇಗೆ ಸಾಧ್ಯ: ತಮಿಳು ನಟ ಸಿಂಬು ಮಾತು

ನ್ಯೂಸ್ ಕನ್ನಡ ವರದಿ-(09.04.18): ಕಾವೇರಿ ನದಿ ನೀರಿನ ಬಳಕೆಯ ಕುರಿತಾದಂತೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಹಲವು ವರ್ಷಗಳಿಂದ ಕಾದಾಟ ನಡೆಯುತ್ತಲೇ ಬಂದಿದೆ. ಮೊನ್ನೆ ತಾನೇ ಈ ಪ್ರಕರಣದ ಕುರಿತಾದಂತೆ ಸುಪ್ರೀಮ್ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿ ಕರ್ನಾಟಕಕ್ಕೆ ಸ್ವಲ್ಪ ಮಟ್ಟಿನ ಜಯ ಸಿಕ್ಕಿತ್ತು. ಕನ್ನಡಿಗರು ನಿರಾಳರಾದರೂ ತಮಿಳುನಾಡಿನ ಜನರು ಈಗಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತಾದಂತೆ ತಮಿಳು ನಾಡು ಮತ್ತು ಕನ್ನಡ ಚಿತ್ರರಂಗದವರೂ ಕೂಡಾ ಪ್ರತಿಭಟನೆ ನಡೆಸಿದ್ದಾರೆ. ಇದೀಗ ಈ ಕುರಿತು ಮಾತನಾಡಿಸ ತಮಿಳು ನಟ ಸಿಂಬು ಪ್ರತಿಯೊಬ್ಬರ ಹೃದಯ ಗೆಲ್ಲುವ ಮಾತುಗಳನ್ನಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಂಬು, ನಾನು ಇಲ್ಲಿ ಪ್ರತಿಭಟನೆ ಮಾಡಲೋ, ಇನ್ನೊಬ್ಬರನ್ನು ದೂಷಿಸಲೋ ಅಥವಾ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಲು ಒತ್ತಾಯಿಸಿಯೋ ಬಂದವನಲ್ಲ. ನಾನು ಇಲ್ಲಿ ನಿಂತು ವಿನಮ್ರತೆಯಿಂದ ಪ್ರತಿಯೋರ್ವ ಕನ್ನಡ ತಾಯಂದಿರಲ್ಲಿ ಬೇಡುತ್ತಿದ್ದೇನೆ, ನೀವು ಕುಡಿದು ದಣಿವಾರಿಸಿಕೊಂಡು ಉಳಿದ ಸ್ವಲ್ಪ ನೀರನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದೇನೆ. ಇದು ಅಹಿಂಸೆಯನ್ನು ಕಲಿಸಿಕೊಟ್ಟ ಗಾಂಧೀಜಿ ಹುಟ್ಟಿದ ನಾಡು. ನಾವು ಪರಸ್ಪರ ಸ್ನೇಹದಿಂದಿರಬೇಕಾಗಿದೆ. ನಿಜಸ್ಥಿತಿಯನ್ನು ನೋಡುವುದಾದರೆ, ಕನ್ನಡಿಗರಿಗೆ ಕುಡಿಯಲು ಸಮರ್ಪಕ ನೀರಿಲ್ಲ, ಇನ್ನು ಅವರು ನಮಗೆ ಕೊಡಲು ಹೇಗೆ ಸಾಧ್ಯ ಎಂದು ಸಿಂಬು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *