ಮಗುವಿಗೆ ಎದೆ ಹಾಲು ಹೆಚ್ಚಿಸಲು ಇಲ್ಲಿದೆ ಮನೆಮದ್ದು…..

ತಾಯಿಯ ಅನಾರೋಗ್ಯದ ಸಮಸ್ಯೆಯಿಂದ ಹಾಗೂ ಎದೆ ಹಾಲಿನ ಕೊರತೆಯಿಂದಾಗಿ ಸಾಕಷ್ಟು ಮಕ್ಕಳಿಗೆ ಈ ಪೌಷ್ಠಿಕ ಆಹಾರ ಗರಿಷ್ಠವಾಗಿ ದೊರೆಯುತ್ತಿಲ್ಲ. ಇಲ್ಲಿ ನಾವು ಎದೆ ಹಾಲು ಹೆಚ್ಚಿಸುವ ಮನೆಮದ್ದುಗಳ ಬಗ್ಗೆ ಹೇಳಿದ್ದೇವೆ.

ಸೋಂಪು
ಎದೆ ಹಾಲುಣಿಸುವ ತಾಯಿ ಬಿಸಿ ನೀರಿಗೆ ಸೋಂಪು ಹಾಕಿ ಕುಡಿದರೆ ಎದೆ ಹಾಲು ಹೆಚ್ಚುವುದು.

ಬಾದಾಮಿ
ಬಾದಾಮಿಯನ್ನು ತಿನ್ನುವುದರಿಂದ ಎದೆ ಹಾಲಿನ ಉತ್ಪತ್ತಿ ಅಧಿಕವಾಗುವುದು.

ಬೆಳ್ಳುಳ್ಳಿ
ಬೆಳ್ಳುಳ್ಳಿ ರಸ ಎದೆ ಹಾಲು ಉತ್ಪತ್ತಿ ಮಾಡುವಲ್ಲಿ ಅತ್ಯುತ್ತಮವಾದ ಔಷಧಿಯಾಗಿದೆ. ಎದೆತೊಟ್ಟಿನ ಭಾಗಕ್ಕೆ ಹಚ್ಚಿ ಮಗುವಿಗೆ ಅನಾರೋಗ್ಯ ತರುವ ಸೂಕ್ಷ್ಮಾಣು ಬ್ಯಾಕ್ಟೀರಿಯಾಗಳನ್ನು ಕೊಲ್ಲಬಹುದು.

ಈರುಳ್ಳಿ
ಎದೆ ಹಾಲುಣಿಸುವ ತಾಯಿ ಹಸಿ ಈರುಳ್ಳಿ ತಿನ್ನುವುದು ಒಳ್ಳೆಯದು. ಇದರ ರಸವನ್ನು ಮೊಲೆ ತೊಟ್ಟಿಗೆ ಹಚ್ಚಿದರೆ ಮಗುವಿನ ಆರೋಗ್ಯ ಕಾಪಾಡುತ್ತದೆ ಹಾಗೂ ಎದೆಯಲ್ಲಿ ಚಿಕ್ಕ-ಚಿಕ್ಕ ಗುಳ್ಳೆಗಳಾಗುವುದನ್ನು ತಡೆಯುತ್ತದೆ.

ನುಗ್ಗೆಸೊಪ್ಪು
ಎದೆ ಹಾಲು ಕಮ್ಮಿಯಿದ್ದರೆ ನುಗ್ಗೆಸೊಪ್ಪು ತಿನ್ನುವ ಮೂಲಕ ಮಗುವಿಗೆ ಹೊಟ್ಟೆ ತುಂಬುವ ತನಕ ಹಾಲುಣಿಸಬಹುದು.

Leave a Reply

Your email address will not be published. Required fields are marked *