ಕುಚ್ಚಲಕ್ಕಿ -ಬಿಳಿ ಅಕ್ಕಿಗಳಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು ?

ಬಿಳಿ ಅಕ್ಕಿ- ಕುಚ್ಚಲಕ್ಕಿ ನಮ್ಮ ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಒಳ್ಳೆಯದು ಅನ್ನೋದನ್ನ ತಿಳಿದುಕೊಳ್ಳೋಣ.

ಸಂಸ್ಕರಣೆಯ ಮೂಲಕ ಅಕ್ಕಿಯ ಭತ್ತದಿಂದ ಕೇವಲ ಹೊರ ಸಿಪ್ಪೆಯನ್ನು ತೆಗೆದ ನಂತರ ಸಿಗುವ ಅಕ್ಕಿಯನ್ನು ಕುಚ್ಚಲಕ್ಕಿ ಅಥವಾ ಕಂದು ಬಣ್ಣದ ಅಕ್ಕಿ ಅಥವಾ ಸಾಮಾನ್ಯವಾಗಿ ಆಂಗ್ಲದಲ್ಲಿ ಬ್ರೌನ್ ರೈಸ್ ಎಂದು ಕರೆಯುತ್ತಾರೆ. ಇದು ತನ್ನ ನಾರಿನಂಶ ಮತ್ತು ಪೌಷ್ಟಿಕಾಂಶವನ್ನು ಉಳಿಸಿಕೊಂಡಿರುತ್ತದೆ.

ಕುಚ್ಚಲಕ್ಕಿ ಬಿಳಿ ಬಣ್ಣದ ಅಕ್ಕಿಯಿಂದ ಹೇಗೆ ಬೇರೆಯದ್ದಾಗಿದೆ?
ಕುಚ್ಚಲಕ್ಕಿಯನ್ನು ಮತ್ತೆ ಮಿಲ್ನಲ್ಲಿ ಸಂಸ್ಕರಿಸಿದಾಗ ಅದರ ಹೆಚ್ಚಿನ ನಾರಿನಂಶ ಮತ್ತು ಪೌಷ್ಟಿಕಾಂಶಗಳು ನಾಶವಾಗಿ ಕೇವಲ ಬಿಳಿ ಅಕ್ಕಿಯಾಗಿ ಮಾತ್ರ ಉಳಿಯುತ್ತದೆ. ಇದನ್ನು ಸಂಸ್ಕರಣೆಮಾಡುತ್ತ ಉಳಿದ ಪದರವಾದ ಅಲೆಯುರೊನ್(ಇದರಲ್ಲಿಯೂ ಅವಶಕವಾದ ಎಣ್ಣೆಗಳಿರುತ್ತದೆ) ಕೂಡ ತೆಗೆಯಲಾಗುತ್ತದೆ.

ರೋಗ್ಯಕರ ಲಾಭಗಳು
ಇದು ಸೆಲೆನಿಯಮ್ ಸಮೃದ್ಧವಾಗಿದ್ದು ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಉರಿಊತದ ಸಮಸ್ಯೆಗಳು ಮತ್ತು ಸಂಧಿವಾತ ಇತ್ಯಾದಿ ಸಮಸ್ಯೆಗಳು ಬರುವ ಅಪಾಯಗಳನ್ನು ತಡೆಗಟ್ಟುತ್ತದೆ.

ಒಂದು ಕಪ್ ಕುಚ್ಚಲಕ್ಕಿಯಲ್ಲಿ ಒಂದು ದಿನಕ್ಕೆ ಅಗತ್ಯವಿರುವ ಶೇಕಡಾ 80% ಮ್ಯಾಂಗನೀಸ್ ಒಳಗೊಂಡಿರುತ್ತದೆ. ಈ ಖನಿಜವು ಮಾನವ ದೇಹದಲ್ಲಿ ಒಳ್ಳೆಯ ಕೊಬ್ಬನ್ನು ಉತ್ಪತ್ತಿಮಾಡಲು ಅಗತ್ಯಕರ ಕೊಬ್ಬಿನಾಮ್ಲಗಳನ್ನು ರಚಿಸುತ್ತದೆ. ಅಷ್ಟೇ ಅಲ್ಲದೆ ಇದು ನರಮಂಡಲ ಮತ್ತು ಸಂತಾನೋತ್ಪತ್ತಿಯ ಕಾರ್ಯದಲ್ಲೂ ಸಹಾಯಮಾಡುತ್ತದೆ.

ಇದರಲ್ಲಿ ನೈಸರ್ಗಿಕ ಎಣ್ಣೆ ಹೃದಯ ಸ್ನೇಹಿ ಎಣ್ಣೆ ಯಾಗಿದ್ದು ಇದು ದೇಹದಲ್ಲಿ ಕೆಟ್ಟ ಕೊಬ್ಬುಗಳಾದ LDL ಕೊಲೆಸ್ಟರಾಲ್ ಕಡಿಮೆ ಮಾಡುತ್ತದೆ.

ಇದರ ಅಧಿಕ ನಾರಿನಂಶದಿಂದ ಕೂಡ ಇದು ಜೀರ್ಣಕಾರಿ ಗುಣಗಳನ್ನು ಹೊಂದಿದೆ ಮತ್ತು ಇದು ಹೊಟ್ಟೆಯನ್ನು ಸ್ವಚ್ಛ ಮಾಡಲು ಅನುಕೂಲ ಮಾಡುವುದಲ್ಲದೆ, ಇದು ದೇಹದ ತೂಕ ಇಳಿಕೆ ಮತ್ತು ಮೆಟಾಬಾಲಿಕ್ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಕೇವಲ ಒಂದು ಕಪ್ ಕುಚ್ಚಲಕ್ಕಿ ತಿಂದರೂ ಹೊಟ್ಟೆ ತುಂಬುತ್ತದೆ.

ಇದನ್ನು ಸಂಸ್ಕರಣೆ ಮಾಡಿದರೂ ಕೂಡ ಇದು ತನ್ನ ಪೌಷ್ಟಿಕಾಂಶಗಳನ್ನು ಕಳೆದುಕೊಳ್ಳದೆ ಇರುವುದರಿಂದ ಇದನ್ನು ನಾವು ಪರಿಪೂರ್ಣ ಧಾನ್ಯವೆಂದು ಕರೆಯುತ್ತೇವೆ. ಈ ಪರಿಪೂರ್ಣ ಧಾನ್ಯ ರಕ್ತನಾಳಗಳ ಕಾಠಿಣ್ಯವನ್ನು ಕಡಿಮೆ ಮಾಡಿ ಹೃದ್ರೋಗ ಮತ್ತು ರಕ್ತದಲ್ಲಿನ ಅಧಿಕ ಕೊಲೆಸ್ಟರಾಲ್ ಆಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಕುಚ್ಚಲಕ್ಕಿಯ ನಿಗೂಢ ಸತ್ಯ: ನಮಗೆಲ್ಲರಿಗೂ ತಿಳಿದಿರುವಂತೆ ಆಂಟಿ-ಆಕ್ಸಿಡೆಂಟ್ ಗಳು ಹೆಚ್ಚಾಗಿ ಬ್ಲೂ ಬೆರ್ರಿಗಳು, ಸ್ಟ್ರಾಬೆರ್ರಿಗಳು ಮತ್ತು ಇತರೆ ಹಣ್ಣು ಮತ್ತು ತರಕಾರಿಗಳಲ್ಲಿ ಇವೆ ಎಂದು. ಆದರೆ ಕುಚ್ಚಲಕ್ಕಿಯಲ್ಲೂ ನಾವು ಅಷ್ಟೇ ಪ್ರಮಾಣದ ಆಂಟಿ-ಆಕ್ಸಿಡೆಂಟ್ಗಳನ್ನು ಕಾಣಬಹುದು.

ಕೆಲವು ಅಧ್ಯಯನಗಳ ಪ್ರಕಾರ ಕುಚ್ಚಲಕ್ಕಿಯನ್ನು ಹೆಚ್ಚಾಗಿ ಬಳಸುವುದರಿಂದ ಕರುಳು ಕ್ಯಾನ್ಸರ್ಪ್ರಕರಣಗಳು ಕಡಿಮೆಯಾಗಿದೆ. ಇದಕ್ಕೆ ಕಾರಣ ಅದರಲ್ಲಿರುವ ಹೆಚ್ಚು ನಾರಿನಂಶ ಆಗಿದೆ. ಈ ನಾರು ಕ್ಯಾನ್ಸರ್ಕಾರಕ ಕೋಶಗಳೊಂದಿಗೆ ಅಂಟಿಕೊಂಡು ದೇಹದಿಂದ ಹೊರಹಾಕಿ ನಮ್ಮ ಕರುಳುಗಳನ್ನು ಆರೋಗ್ಯವಾಗಿರಿಸುತ್ತದೆ. ಇದರಲ್ಲಿರುವ ಇನ್ನು ಹಲವು ಅಂಶಗಳು ಜೀರ್ಣ ಕ್ರಿಯೆಯಲ್ಲಿ, ಸಹಾಯ ಮಾಡಿ ಮಲಬದ್ಧತೆಆಗದಿರುವಂತೆ ನೋಡಿಕೊಳ್ಳುತ್ತದೆ ಮತ್ತು ನಿಯಮಿತವಾದ ಕರುಳುಗಳ ಚಲನೆಗೆ ಉತ್ತೇಜಿಸುತ್ತದೆ.

ಬಿಳಿ ಅಕ್ಕಿಯಂತೆ, ಕುಚ್ಚಲಕ್ಕಿ ತನ್ನ ಸಕ್ಕರೆ ಅಂಶವನ್ನು ಏಕಾಏಕಿ ಬಿಡದೆ ನಿಧಾನಗತಿಯಲ್ಲಿ ಬಿಡುಗಡೆ ಮಾಡುತ್ತದೆ. ಇದರಿಂದಾಗಿಯೇ ಮಧುಮೇಹದ ರೋಗಿಗಳಿಗೆ ಬಿಳಿ ಅಕ್ಕಿಗಿಂತ ಇದು ಒಳ್ಳೆಯ ಆಯ್ಕೆಯಾಗಿದೆ. ಇನ್ನು ಕೆಲವು ಅಧ್ಯಯನಗಳ ಪ್ರಕಾರ ಏಷ್ಯಾ ಖಂಡದಲ್ಲಿ ಬಿಳಿ ಅಕ್ಕಿಯ ಸೇವನೆ ಮತ್ತು ಎರಡನೇ ವಿಧದ ಮಧುಮೇಹಕ್ಕೆ, ಸಂಬಂಧವಿದೆ ಎಂದು ಹೇಳಲಾಗಿದೆ. ಮತ್ತು ಕೇವಲ ವಾರಕ್ಕೆ ಎರಡು ಬಾರಿ ಕುಚ್ಚಲಕ್ಕಿ ತಿನ್ನುವುದರಿಂದ ಎರಡನೇ ವಿಧದ ಮಧುಮೇಹ ಬರುವ ಸಾಧ್ಯತೆಗಳು ಶೇಖಡಾ 2 ರಿಂದ 11% ರಷ್ಟು ಕಡಿಮೆಯಾಗುತ್ತದೆ. ಅದೇ ಇನ್ನೊಂದು ಕಡೆ ಬಿಳಿ ಅಕ್ಕಿ ತಿನ್ನುವವರಲ್ಲಿ ಮಧುಮೇಹ ಬರುವ ಸಾಧ್ಯತೆಗಳು ತೀರಾ ಅಧಿಕವಾಗಿದೆ.

ಶ್ರೇಷ್ಠ ಶಿಶುವಿನ ಆಹಾರ ಕುಚ್ಚಲಕ್ಕಿಯ ಸರಿ ಮಾಡುವುದು ಅಥವಾ ಕುಚ್ಚಲಕ್ಕಿಯ ಅನ್ನ ಕೂಡ ಶಿಶುವಿಗೆ ತುಂಬಾ ಆರೋಗ್ಯಕರ ಮತ್ತು ಶ್ರೇಷ್ಠ ಆಹಾರವಾಗಿದೆ. ಇದರಲ್ಲಿ ಅತಿ ಹೆಚ್ಚು ಪೌಷ್ಟಿಕಾಂಶಗಳು ಮತ್ತು ನಾರು ಇವೆ. ಇದು ಬಿಳಿ ಅಕ್ಕಿಯಲ್ಲಿ ತಯಾರಿಸಿದ ಸರಿಗಿಂತಲೂ ಅತ್ತ್ಯುತ್ತಮವಾಗಿದ್ದು ಬೆಳೆಯುವ ಮಕ್ಕಳು ಮತ್ತು ಶಿಶುಗಳ ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ.

ಕ್ಯಾಂಡಿಡಾ ಈಸ್ಟ್ ಸೋಂಕುಗಳು:ಕ್ಯಾಂಡಿಡಾ ಈಸ್ಟ್ ಸೋಂಕು ಚಿಕಿತ್ಸೆಗಳಿಗೆ ಕುಚ್ಚಲಕ್ಕಿ ಪರಿಪೂರ್ಣವಾಗಿದ್ದು, ಹೆಚ್ಚಿನ ಗ್ಲೈಸಿಮಿಕ್ ಮತ್ತು ಸಕ್ಕರೆ / ಪಿಷ್ಟ ಆಹಾರಗಳು ನಿಷೇಧಿಸಲಾಗಿರುವ ಕ್ಯಾಂಡಿಡಾ ಚಿಕಿತ್ಸೆಯ ರೀತಿಗಳನ್ನು ಇದು ಸರಿದೂಗಿಸುತ್ತದೆ. ಕುಚ್ಚಲಕ್ಕಿಯ ನೈಸರ್ಗಿಕ ಜೀರ್ಣಕ್ರಿಯೆಯ ಜೊತೆ ಅದರ ಹೆಚ್ಚಿನ ನಾರಿನಂಶ ಸೇರಿ ಕ್ಯಾಂಡಿಡಾ ಜೀವಿಗಳ ಬೆಳವಣಿಗೆಯಿಂದ ಆಗಿರುವ ಸೂಕ್ಷ್ಮ ಜೀರ್ಣಾಂಗದ ಗಾಯವನ್ನು/ಸೋಂಕನ್ನು ಗುಣಮಾಡಲು ಸಹಾಯ ಮಾಡುತ್ತದೆ.

ಸೀಮಿತಾವಧಿ
10 ವರ್ಷಗಳ ತನಕ ಇಡಬಹುದಾದ ಬಿಳಿ ಅಕ್ಕಿಗೆ ಹೋಲಿಸಿದರೆ, ಕುಚ್ಚಲಕ್ಕಿ ಹೆಚ್ಚೆಂದರೆ ಕೇವಲ 6-8 ತಿಂಗಳುಗಳು ಮಾತ್ರ ಇಡಬಹುದು, ಏಕೆಂದರೆ ಇದರಲ್ಲಿರುವ ಎಣ್ಣೆಯು ಅಕ್ಕಿಯನ್ನು ಹಾಳುಮಾಡುತ್ತದೆ. ಇದರ ಸೀಮಿತಾವಧಿಯು ಬಹಳ ಕಡಿಮೆ ಇರುವ ಕಾರಣ ನಿಮಗೆ ಅಗತ್ಯವಿರುವಷ್ಟೇ ಪ್ರಮಾಣದ ಕುಚ್ಚಲಕ್ಕಿಯನ್ನು ಖರೀದಿಸಿರಿ.

ಕೊನೆಯದಾಗಿ ಹೇಳಬೇಕೆಂದರೆ ಕುಚ್ಚಲಕ್ಕಿ ತಿನ್ನಲೂ ಅತಿ ಸ್ವಾದಿಷ್ಟವಾಗಿದ್ದು ಶಾಖಾಹಾರಿ ಮತ್ತು ಸಸ್ಯಾಹಾರಿ ಎರಡು ಅಡುಗೆಯಲ್ಲಿ ಬಳಸಬಹುದು. ಇದು ಬಿಳಿ ಅನ್ನದ ಬದಲಾಗಿ ಉಪಯೋಗಿಸಬಹುದು ಮತ್ತು ಇದರ ಸುವಾಸನೆ ನಿಮ್ಮ ಬಿಳಿ ಅಕ್ಕಿಯಿಂದ ತಯಾರಿಸಿದ ಅನ್ನಕ್ಕಿಂತಲೂ ಚೆನ್ನಾಗಿರುತ್ತದೆ. ಇದರ ಹಿಟ್ಟನಿಂದ ನೀವು ಕೇಕ್ಗಳು, ಬ್ರೆಡ್ ಮತ್ತು ಇತರೆ ಬೇಕರಿ ಪದಾರ್ಥಗಳ ಉಪಯೋಗಕ್ಕೆ ಬಳಸಬಹುದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಆರೋಗ್ಯಕ್ಕಾಗಿ ಕುಚ್ಚಲಕ್ಕಿ ಉತ್ತಮ ಆಯ್ಕೆಯಾಗಿದೆ.

Leave a Reply

Your email address will not be published. Required fields are marked *