ಬರಿಗಾಲಿನಿಂದ ನಡೆಯುವುದರಿಂದ ನಿಮಗೆ ಆಗುವ ಆರೋಗ್ಯ ಲಾಭವನ್ನೊಮ್ಮೆ ತಿಳಿದುಕೊಳ್ಳಿ…

ಬರಿಗಾಲಿನಲ್ಲಿ ನಡೆದು ಅಭ್ಯಾಸವಿದೆಯೇ? ಇಲ್ಲವೆಂದರೆ ರೂಢಿಸಿಕೊಳ್ಳಿ. ದಿನದಲ್ಲಿ ಒಂದು ಇಪ್ಪತ್ತು ನಿಮಿಷ ಹುಲ್ಲು ಹಾಸಿನ ಮೇಲೆ ನಡೆದರೆ ಆರೋಗ್ಯಕ್ಕೆ ಹತ್ತಾರು ಲಾಭ. ಬರಿಗಾಲಿನ ನಡುಗೆ ಆರೋಗ್ಯಕ್ಕೆ ಒಳ್ಳೆಯದೆಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಅದರಲ್ಲೂ ಬರಿಗಾಲಿನಿಂದ ನಡೆಯುವುದರಿಂದ ದಿನನಿತ್ಯ ನಮ್ಮನ್ನು ಕಾಡುವ ಈ 7 ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು:

  1. ಸರಿಯಾಗಿ ನಿದ್ದೆ ಬರಲ್ಲವೆಂದು ಹೆಚ್ಚಿನವರು ಹೇಳ್ತಾ ಇರ್ತಾರೆ . ಅಂಥವರು ದಿನಾ ಒಂದು ಅರ್ಧ ಗಂಟೆ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ರೂಢಿಸಿಕೊಂಡರೆ ಬಾಡಿ ರಿಲ್ಯಾಕ್ಸ್‌ಆಗುವುದು, ನಿದ್ದೆಯೂ ಸರಿಯಾಗಿ ಬರುವುದು.
  2. ಮೆದುಳು ಚುರುಕಾಗುವುದು
    ಮೆದುಳಿನ ಸ್ವಾಸ್ಥ್ಯ ಹೆಚ್ಚಿಸಿ , ಚುರುಕಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು.
  3. ಚಪ್ಪಲಿ ನಮ್ಮ ಪಾದಕ್ಕೆ ರಕ್ಷಣೆ ಕೊಡುತ್ತದೆ, ಅದರಲ್ಲೂ ನಾವು ಧರಿಸುವ ಫ್ಯಾನ್ಸಿ ಚಪ್ಪಲಿ ಸೊಂಟ ನೋವು ತರಿಸುತ್ತದೆ. ನಮ್ಮ ದೇಹದ ಶಕ್ತಿಯನ್ನು ವೃದ್ಧಿಸುವಲ್ಲಿ ಬರಿಗಾಲಿನ ನಡುಗೆ ಸಹಾಯ ಮಾಡುತ್ತದೆ.
  4. ವಾಸನೆ ಗ್ರಹಿಕೆಯ ಸಾಮಾರ್ಥ್ಯ ಹೆಚ್ಚಾಗುವುದು
  5. ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುವುದು. ಇದರಿಂದ ಹೃದಯ ಸ್ವಾಸ್ಥ್ಯವೂ ಹೆಚ್ಚುವುದು.
  6. ಮೂಳೆ ಮತ್ತು ಸ್ನಾಯುಗಳನ್ನು ಬಲ ಪಡಿಸುತ್ತದೆ.
  7. ರೋಗ ನಿರೋಧಕ ಶಕ್ತಿ ಹೆಚ್ಚುವುದು.

Leave a Reply

Your email address will not be published. Required fields are marked *