ದೆಹಲಿ: ಇಸ್ರೇಲ್ ರಾಯಭಾರಿ ಕಚೇರಿ ಬಳಿ ಬಾಂಬ್ ಸ್ಪೋಟ

ನ್ಯೂಸ್ ಕನ್ನಡ ವರದಿ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಶುಕ್ರವಾರ ಸಂಜೆ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಹಲವಾರು ಕಾರುಗಳ ವಿಂಡ್‌ಸ್ಕ್ರೀನ್‌ಗಳು ಹಾನಿಗೊಳಗಾದವು. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ವರದಿಗಳು ತಿಳಿಸಿವೆ.

ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಫೋಟದ ಸ್ಥಳದಲ್ಲಿದ್ದು, ಪ್ರದೇಶವನ್ನು ಸುತ್ತುವರಿಯಲಾಗಿದೆ. ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ, ಸಂಜೆ 5.45 ರ ಸುಮಾರಿಗೆ ಸ್ಫೋಟದ ಬಗ್ಗೆ ಕರೆ ಬಂದಿದೆ. “ಮೂರು ಕಾರುಗಳು ಹಾನಿಗೊಳಗಾದವು (ಘಟನೆಯಲ್ಲಿ). ಯಾರೂ ಗಾಯಗೊಂಡಿಲ್ಲ” ಎಂದು ಅಧಿಕಾರಿ ಹೇಳಿದರು.

Leave a Reply

Your email address will not be published. Required fields are marked *