ಐಪಿಎಲ್ ಗೆ ರಾಜಕೀಯ ವಿವಾದಗಳನ್ನು ಎಳೆದು ತರಬೇಡಿ: ರಾಜೀವ್ ಶುಕ್ಲಾ

ನ್ಯೂಸ್ ಕನ್ನಡ ವರದಿ(10-04-2018): ದಯವಿಟ್ಟು ಐಪಿಎಲ್ ಪಂದ್ಯಾಟಗಳಿಗೆ ರಾಜಕೀಯ ವಿವಾದಗಳನ್ನು ಎಳೆದು ತರಬೇಡಿ ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಮನವಿ ಮಾಡಿದ್ದಾರೆ. ಮಾತ್ರವಲ್ಲ ಯಾವುದೇ ಕಾರಣಕ್ಕೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಲಿರುವ ಐಪಿಎಸೃಲ್ ಮ್ಯಾಚ್ ಇಂದು ನಿಗದಿತ ಸಮಯ ಹಾಗೂ ಸ್ಥಳದಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಾದ್ಯಂತ ಹಲವು ಪ್ರತಿಭಟನೆಗಳು ನಡೆಯುತ್ತಿದ್ದು, ಈ ಬಾರಿ ಚೆನ್ನ್ನೈನಲ್ಲಿ ನಡೆಯಲಿರುವ ಐಪಿಎಲ್ ಮ್ಯಾಚ್’ನ್ನು ಕೇರಳ ರಾಜ್ಯದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ರಾಜೀವ್ ಶುಕ್ಲಾ ಅವರು, ಸಂಬಂಧಪಟ್ಟಂತಹ ಅಧಿಕಾರಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಚೆನ್ನೈನಲ್ಲಿ ಐಪಿಎಲ್ ಕ್ರಿಕೆಟ್ ಮ್ಯಾಚ್ ನಡೆಯುವ ಸಂದರ್ಭದಲ್ಲಿ ಸೂಕ್ತ ರೀತಿಯ ಭದ್ರತೆಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆಂದು ಹೇಳಿದ್ದಾರೆ.

ಚೆನ್ನೈನಲ್ಲಿ ನಡೆಯುವ ಐಪಿಎಲ್ ಮ್ಯಾಚ್ ಸ್ಥಳಾಂತರಗೊಂಡಿಲ್ಲ. ಏ.10 ರಂದು ಚೆನ್ನೈನಲ್ಲಿಯೇ ಮ್ಯಾಚ್ ನಡೆಯುತ್ತದೆ. ಬೆರೆಲ್ಲಿಯೂ ಸ್ಥಳಾಂತರ ಮಾಡುವ ಯೋಜನೆಗಳಿಲ್ಲ. ಪ್ರತಿಯೊಬ್ಬರಲ್ಲೂ ನಾನು ಮನವಿ ಮಾಡಿಕೊಳ್ಳುತ್ತೇನೆ ಐಪಿಎಲ್ ನಲ್ಲಿ ರಾಜಕೀಯ ವಿವಾದಗಳನ್ನು ಹುಟ್ಟುಹಾಕಬೇಡಿ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *