ಉತ್ತರಪ್ರದೇಶ: ಅಂಬೇಡ್ಕರ್ ಪ್ರತಿಮೆಯನ್ನು ಕೇಸರೀಕರಣಗೊಳಿಸಿದ ಜಿಲ್ಲಾಡಳಿತ!

ನ್ಯೂಸ್ ಕನ್ನಡ ವರದಿ(10-04-2018): ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಬದೌನ್ ಗ್ರಾಮದಲ್ಲಿ ದುಷ್ಕರ್ಮಿಗಳಿಂದ ಹಾನಿಗೀಡಾಗಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಳೀಯ ಜಿಲ್ಲಡಳಿತ ಪುನರ್ಸ್ಥಾಪಿಸಿದ್ದು, ಪ್ರತಿಮೆಯ ಬಣ್ಣ ಕೇಸರಿಮಯವಾಗಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.

ಅಧಿಕಾರಕ್ಕೆ ಬಂದ ತಕ್ಷಣದಿಂದ ಸರಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವಂತೆ ಸುತ್ತೋಲೆ ಹೊರಡಿಸಿದ್ದ ಯೋಗಿ ಆದಿತ್ಯನಾಥ್ ಸರಕಾರವು ಸಂವಿಧಾನ ಶಿಲ್ಪಿಯ ಪ್ರತಿಮೆಯನ್ನು ಕೇಸರೀಕರಣ ಮಾಡುವುದರೊಂದಿಗೆ ಹೊಸ ವಿವಾದವನ್ನು ಸೃಷ್ಟಿಸಿದೆ.ಸದಾರಣವಾಗಿ ನೀಲಿ ಬಣ್ಣದ ಕೋಟು ಧರಿಸುವ ಅಂಬೇಡ್ಕರ್ ಪ್ರತಿಮೆಗೆ ಕೇಸರಿ ಬಣ್ಣದ ಕೋಟು ಧರಿಸಿರುವ ಪುತ್ಥಳಿಯನ್ನು ಬದೌನ್ ಜಿಲ್ಲಾಡಳಿತ ಪ್ರತಿಷ್ಠಾಪಿಸಿದೆ.

ಈ ಹೊಸ ಬಣ್ಣದ ಕೋಟು ಧರಿಸಿದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಸಮಾಜವಾದಿ ಪಕ್ಷದ ಶಾಸಕ ಮತ್ತು ವಕ್ತಾರ ಸುನಿಲ್ ಸಿಂಗ್, ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಎಲ್ಲವನ್ನೂ ಕೇಸರೀಕರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ‘ಸರ್ಕಾರ ಬಣ್ಣದ ರಾಜಕೀಯ ಮಾಡುತ್ತಿದೆ. ಕಟ್ಟಡಗಳು, ಗಡಿಗಳು, ಉದ್ಯಾನ ಮತ್ತು ಎಲ್ಲದ್ದಕ್ಕೂ ಕೇಸರಿ ಬಣ್ಣ ಬಳಿಯುವುದರಲ್ಲಿ ಬಿಜಿಯಾಗಿದ್ದಾರೆ. ಈಗ ಅಂಬೇಡ್ಕರ್ ಅವರ ಪುತ್ಥಳಿಯ ಬಣ್ಣವನ್ನು ಕೇಸರಿಮಯ ಮಾಡುವುದರ ಮೂಲಕ ತಮ್ಮನ್ನು ಬೆತ್ತಲೆಗೊಳಿಸಿಕೊಂಡಿದ್ದಾರೆ. ಇದು ಅವರಿಗೆ ಯಾವುದೇ ಸಹಾಯ ಮಾಡುವುದಿಲ್ಲ. ಬದಲಾಗಿ ಜನರು ಅವರ ಉದ್ದೇಶವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *