ಅಲ್ಜೀರಿಯನ್ ಸೇನಾ ವಿಮಾನ ಪತನ: 100ಕ್ಕೂ ಹೆಚ್ಚು ಮಂದಿ ಮೃತ್ಯು ಶಂಕೆ!

ನ್ಯೂಸ್ ಕನ್ನಡ ವರದಿ-(11.04.18): ನೂರಕ್ಕೂ ಹೆಚ್ಚು ಸೈನಿಕರನ್ನೊಳಗೊಂಡಿದ್ದ ಅಲ್ಜೀರಿಯಾದ ಸೇನಾ ವಿಮಾನ ಬುಧವಾರ ಪತನಗೊಂಡಿದ್ದು, ಅನೇಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿಮಾನದಲ್ಲಿ 100ಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿಗಳಿದ್ದರು. ಬೌಫಾರಿಕ್ ವಿಮಾನ ನಿಲ್ದಾಣದ ಹೊರಗೆ ದುರಂತಕ್ಕೀಡಾಯಿತು ಎಂದು ಸ್ಥಳೀಯ ಟಿವಿ ಎನ್ನಾಹರ್ ಟಿವಿ ವರದಿ ಮಾಡಿದೆ.

ಈ ಕುರಿತು ಅಲ್ಲಿನ ಅಧಿಕಾರಿಗಳು ಇನ್ನೂ ಹೇಳಿಕೆ ನೀಡಿಲ್ಲ. ವಿಮಾನ ಪತನಗೊಂಡ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿರುವ ದೃಶ್ಯವನ್ನು ಸ್ಥಳೀಯ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ ಎಂದು ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Leave a Reply

Your email address will not be published. Required fields are marked *