ಪೆಟ್ರೋಲ್​, ಡಿಸೇಲ್, ಎಲ್​ಪಿಜಿ ಬೆಲೆ ಏರಿಕೆ ಜೊತೆ ಹಾಲಿನ ದರ ಹೆಚ್ಚಳ: ಇದು ಎಲ್ಲಿ…?

ಜನ ಸಾಮಾನ್ಯರ ಬದುಕು ನಿರ್ವಹಣೆ ನಿಜಕ್ಕೂ ತುಟ್ಟಿಯಾಗಿದೆ. ಬೆಲೆ ಏರಿಕೆಯ ನಡುವೆ ಸಾಮಾನ್ಯ ವರ್ಗದ ಜನರು ಬದುಕು ಸಾಗಿಸುವುದೇ ಸವಾಲ್​ ಆಗಿದೆ. ಈಗಾಗಲೇ ಪೆಟ್ರೋಲ್​, ಡಿಸೇಲ್​ ಬೆಲೆಯಿಂದ ಕಂಗಲಾಗಿದ್ದ ಜನರಿಗೆ ಇಂದು ಎಲ್​ಪಿಜಿ ಸಿಲಿಂಡರ್​ ಬೆಲೆ ಏರಿಕೆ ಮಾಡಿ ಮತ್ತಷ್ಟು ಶಾಕ್​ ನೀಡಲಾಗಿದೆ. ಇದರ ಜೊತೆಗೆ ಬೆಳೆ-ಕಾಳುಗಳ ಬೆಲೆ ಗಗನಮುಖಿಯಾಗಿದೆ. ಈಗ ಗಾಯದ ಮೇಲೆ ಬರೆ ಎಂಬಂತೆ ಹಾಲಿನ ದರ ಏರಿಕೆ ಕೂಡ ಆಗಿದೆ. ಪ್ರತಿ ಲೀಟರ್​ ಹಾಲಿನ ದರದ ಮೇಲೆ 12 ರೂ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.

ಪೆಟ್ರೋಲ್​-ಡಿಸೇಲ್​ ದರ ಹೆಚ್ಚಳದಿಂದ ಹಾಲಿನ ಸಾಗಾಟ ಹಾಗೂ ಜಾನುವಾರುಗಳ ಮೇವು ಸಾಗಾಟಕ್ಕೆ ಹೆಚ್ಚು ಹಣ ವ್ಯಯವಾಗುತ್ತಿದ್ದು, ಇದರಿಂದ ಹಾಲಿನ ದರ ಅನಿವಾರ್ಯವಾಗಿದೆ ಎನ್ನಲಾಗಿದೆ.

ಇದೇ ಮಾರ್ಚ್​ 1 ರಿಂದ ಮಧ್ಯಪ್ರದೇಶದಲ್ಲಿ ಹಾಲಿನ ದರ ಹೆಚ್ಚಳಗೊಳ್ಳಲಿದೆ. ಇಲ್ಲಿನ ಕಾಲಿಕಾ ಮಾತಾ ಕ್ಯಾಂಪಸ್​ನಲ್ಲಿ ನಡೆದ ಹಾಲು ಉತ್ಪಾದಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 25 ಗ್ರಾಮಗಳ ಹಾಲು ಉತ್ಪಾದಕರು ಈ ಸಭೆಯಲ್ಲಿ ಭಾಗಿಯಾಗಿದ್ದು, ಬೆಲೆ ಹೆಚ್ಚಳಕ್ಕೆ ಸಹಮತ ಸೂಚಿಸಿದ್ದಾರೆ. ಇದರಿಂದ ಹಾಲಿನ ಬೆಲೆ ಪ್ರತಿ ಲೀಟರ್​ಗೆ 55 ರೂ ಆಗಲಿದೆ.

ಮಧ್ಯ ಪ್ರದೇಶದ ರತ್ಲಂ ಹಾಲು ಉತ್ಪಾದಕರ ಸಂಘ ಈ ನಿರ್ಧಾರ ಘೋಷಿಸಿದೆ. ಕಳೆದ ವರ್ಷ ಕೊರೋನಾ ಕಾರಣದಿಂದಾಗಿ ಹಾಲಿನ ದರವನ್ನು ಹೆಚ್ಚಿಸಲಿಲ್ಲ, ಆದರೆ, ಈಗ ಪೆಟ್ರೋಲ್​, ಡಿಸೇಲ್​ ದರ ಏರಿಕೆಯಾಗಿದೆ. ಇದರಿಂದ ಮೇವು ಸಾಗಾಟ ನಮಗೆ ದುಬಾರಿಯಾಗಿರುವುದರಿಂದ ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿದೆ. ಈ ಹಿನ್ನಲೆ ಹಾಲಿನ ದರವನ್ನು ಪ್ರತಿ ಲೀಟರ್​ಗೆ 12 ರೂ ಹೆಚ್ಚಿಸಲಿ ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ಪ್ರಸ್ತುತ ಇಲ್ಲಿ ಪ್ರತಿ ಲೀ ಹಾಲಿನ ದರ 43 ರೂ ಇದ್ದು, ಮಾರ್ಚ್​ 1 ರಿಂದ 54 ರೂ ಆಗಲಿದೆ.

ಈಗಾಗಲೇ ಪೆಟ್ರೋಲ್​, ಡಿಸೇಲ್​ ಬೆಲೆ 100ರ ಗಡಿ ಮುಟ್ಟಿದೆ. ಇದರ ಜೊತೆಗೆ ಇಂದಿನಿಂದ ಎಲ್​ಪಿಜಿ ಸಿಲಿಂಡರ್​ ಬೆಲೆ ಕೂಡ ಏರಿಕೆಯಾಗಿದೆ. ದೈನಂದಿನ ಅವಶ್ಯಕತೆ ವಸ್ತುಗಳಾದ ಬೆಳೆ-ಕಾಳು, ತರಕಾರಿ ಬೆಲೆ ಕೂಡ ಹೆಚ್ಚಳ ಕಂಡಿದೆ. ಪೆಟ್ರೋಲ್​ ಡಿಸೇಲ್​ ದರ ಹೆಚ್ಚಳದಿಂದ ವಸ್ತುಗಳ ಸಾಗಾಟಕ್ಕೆ ಅಧಿಕ ವೆಚ್ಚ ತಗಲುತ್ತಿರುವ ಹಿನ್ನಲೆ ನಿಧಾನವಾಗಿ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿದೆ.

Leave a Reply

Your email address will not be published. Required fields are marked *