ದೇವಸ್ಥಾನದ ಕಾಣಿಕೆ ಡಬ್ಬಿ-ಬೈಕ್‌ ಕಳವು; ಬಜರಂಗದಳ-ವಿಎಚ್‌ಪಿ ಸಂಚಾಲಕನ ಬಂಧನ

ಮಂಗಳೂರು: ಸಂಘಪರಿವಾರದ ಸಂಘಟನೆಯೊಂದರಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು, ದ್ವಿಚಕ್ರ ವಾಹನ ಕಳವು ಸೇರಿದಂತೆ‌ ಇನ್ನಿತರ ಕಳ್ಳತನ ಪ್ರಕರಣದಲ್ಲಿ ಮಂಗಳೂರು ಕೊಣಾಜೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೊಂಟೆಪದವಿನ ತಾರಾನಾಥ ಯಾನೆ ಮೋಹನ ಎಂದು ಗುರುತಿಸಲಾಗಿದೆ. ವಿಶ್ವಹಿಂದೂಪರಿಷತ್ ಹಾಗೂ ಬಜರಂಗದಳ ಉಳ್ಳಾಲ ಗ್ರಾಮಾಂತರ ಪ್ರಖಂಡದ ಸಂಚಾಲಕ ಎಂದು ತಿಳಿದು ಬಂದಿದೆ.

ಈತ ಶನಿವಾರ ಮೊಂಟೆಪದವಿನ ಮನೆಯೊಂದರ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರೊಂದನ್ನು ಕಳವು ಮಾಡಿ ಪರಾರಿಯಾಗಿದ್ದು, ಮನೆಮಂದಿ ಸಿಸಿಟಿವಿ ಫೂಟೇಜ್ ಪರಿಶೀಲಿಸಿ ಹಲವು ಮಂದಿಯ ಜೊತೆ ಚರ್ಚಿಸಿದಾಗ ಆರೋಪಿ ತಾರಾನಾಥ ಎಂಬುದನ್ನು ಖಚಿತಪಡಿಸಿಕೊಂಡು‌ ರವಿವಾರ ರಾತ್ರಿ ಆತನ ಮನೆಗೆ ಹೋದಾಗ ಪರಾರಿಯಾಗಲು ಯತ್ನಿಸಿದ್ದು, ಬೆನ್ನಟ್ಟಿದ್ದ ಸಾರ್ವಜನಿಕರು ತಾರಾನಾಥನನ್ನು ಕೊಣಾಜೆಯ ಮೊಂಟೆಪದವು ಬಳಿ ಹಿಡಿದು ಕೊಣಾಜೆ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.

ಬಂಧಿತ ಆರೋಪಿ ತಾರಾನಾಥ ದೇವಸ್ಥಾನದ ಕಾಣಿಕೆ ಡಬ್ಬಿಯ ಹಣ, ಹಲವು ಕಡೆ ಮನೆಗಳಿಂದ ಚಿನ್ನಾಭರಣ, ಅಡಕೆ ಮೂಟೆ, ತನ್ನ ಮಿತ್ರರ ವಾಹನಗಳಿಂದಲೇ ಪೆಟ್ರೋಲ್ ಕಳವು ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *