ಮೈಕೆಲ್ ವಾಘನ್ ಟ್ವೀಟರ್ ನಲ್ಲಿ ಹಂಚಿಕೊಂಡ ತಮಾಷೆಯ ಕ್ರಿಕೆಟ್ ಪಂದ್ಯದ ವಿಡಿಯೋ ನೋಡಿದ್ರೆ ನಗುವುದಂತೂ ಖಂಡಿತ !

ಲಂಡನ್: ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್ ಗಳಿಗೆ ಹೆಸರಾಗಿರುವ ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಮೈಕೆಲ್ ವಾಘನ್ ಟ್ವೀಟರ್ ನಲ್ಲಿ ತಮಾಷೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನೀವು ಈ ವಿಡಿಯೋ ವೀಕ್ಷಿಸಿದ್ದರೆ ಖಂಡಿತ ಬಿದ್ದು ಬಿದ್ದು ನಗ್ರೀರಾ.

ಯುರೋಪಿಯನ್ ಕ್ರಿಕೆಟ್ ಸರಣಿ ಪಂದ್ಯದಲ್ಲಿ ವಿಲಕ್ಷಣ ಫೀಲ್ಡಿಂಗ್ ಪ್ರಯತ್ನವನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇದರಲ್ಲಿ ವರ್ಮ್ಡೋ ಸಿಸಿ ಆಟಗಾರರರು ಗೊಂದಲದಲ್ಲಿ ಪರದಾಡುತ್ತಿದ್ದರೆ, ಸ್ಟಾಕ್ ಹೋಮ್ ಸೂಪರ್ ಕಿಂಗ್ಸ್ ಬ್ಯಾಟ್ಸ್ ಮನ್ ಗಳು ತಮಾಷೆಯಿಂದಲೇ ಸುಲಭವಾಗಿ ನಾಲ್ಕು ರನ್ ಗಳಿಸುತ್ತಾರೆ.

‘ಈಗ ಇದು ಸರಿಯಾದ ಕ್ರಿಕೆಟ್’ ಎನ್ನುವ ಶೀರ್ಷಿಕೆಯಡಿ ಮಾಜಿ ಬಲಗೈ ಆರಂಭಿಕ ಬ್ಯಾಟ್ಸ್ ಮನ್ ವಾಘನ್ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ವಾಘೆಲ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಟ್ವಿಟರ್ ಬಳಕೆದಾರರು ನಾನಾ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *