ಕೆಲವರು ದೇಶವನ್ನು ವೋಟ್ ಬ್ಯಾಂಕ್ ಗಾಗಿ ವಿಭಜಿಸುತ್ತಿದ್ದು, ಜಾತ್ಯಾತೀತತೆ, ಕೋಮುವಾದದ ಆಟದಲ್ಲಿ ದೇಶ ಹಾಳಾಗುತ್ತಿದೆ: ಪ್ರಧಾನಿ ಮೋದಿ ಬೇಸರ

ತಮಲ್ಪುರ್(ಅಸ್ಸಾಂ): ಯಾವುದೇ ತಾರತಮ್ಯ ತೋರದೆ ನಾವು ಪ್ರತಿಯೊಬ್ಬರ ಏಳಿಗೆಗಾಗಿ ಶ್ರಮಿಸುತ್ತೇವೆ, ಆದರೆ ಕೆಲವರು ದೇಶವನ್ನು ವೋಟ್ ಬ್ಯಾಂಕ್ ಗಾಗಿ ವಿಭಜಿಸುತ್ತಿದ್ದಾರೆ. ಅದನ್ನು ದುರದೃಷ್ಟವಾಗಿ ಜಾತ್ಯತೀತತೆ ಎಂದು ಕರೆಯುತ್ತಾರೆ. ಆದರೆ ನಾವು ಪ್ರತಿಯೊಬ್ಬರ ಏಳಿಗೆಗಾಗಿ ಶ್ರಮಿಸುವವರನ್ನು ಕೋಮುವಾದಿಗಳೆಂದು ಕರೆಯುತ್ತಾರೆ. ಈ ಜಾತ್ಯತೀತತೆ, ಕೋಮುವಾದದ ಆಟದಲ್ಲಿ ದೇಶ ಹಾಳಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಅಸ್ಸಾಂನ ತಮುಲ್ಪುರದಲ್ಲಿ ಇಂದು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಮಹಜೊತ್ ನ ಮಹಜೂತ್ ಬಹಿರಂಗವಾಗಿದೆ. ನನ್ನ ರಾಜಕೀಯ ಅನುಭವ ಪ್ರಕಾರ ಮತ್ತು ಜನರಿಂದ ಸಿಕ್ಕಿರುವ ಪ್ರೀತಿ, ವಿಶ್ವಾಸಗಳನ್ನು ನೋಡಿದಾಗ ಈ ಬಾರಿ ಕೂಡ ಅಸ್ಸಾಂನಲ್ಲಿ ಎನ್ ಡಿಎ ಸರ್ಕಾರ ರಚಿಸುತ್ತದೆ ಎಂದು ನನಗೆ ಅನಿಸುತ್ತಿದೆ. ಅಸ್ಸಾಂನ ಗುರುತಿಗೆ ಅವಮಾನ ಮಾಡಿದವರನ್ನು ಮತ್ತು ಹಿಂಸಾಚಾರಕ್ಕೆ ಪ್ರೋತ್ಸಾಹ, ಅಪಪ್ರಚಾರ ನೀಡುವವರನ್ನು ಅಸ್ಸಾಂ ಜನತೆ ಸಹಿಸಲು ಸಾಧ್ಯವಿಲ್ಲ ಎಂದರು.

ಇದೇ ಸಂದರ್ಭದಲ್ಲಿ ರ್ಯಾಲಿ ವೇಳೆ ವಿಪರೀತ ಬಿಸಿಲಿನಿಂದ ತಲೆಸುತ್ತಿ ಬಿದ್ದ ಕಾರ್ಯಕರ್ತರೊಬ್ಬರಿಗೆ ಆರೈಕೆ ಮಾಡುವಂತೆ ಪ್ರಧಾನಿ ಅಲ್ಲಿದ್ದವರಿಗೆ ಸೂಚಿಸಿದರು.

Leave a Reply

Your email address will not be published. Required fields are marked *