ಆಸಿಫಾಳ ಅತ್ಯಾಚಾರಿಗಳ ತಲೆಕಡಿದವರಿಗೆ ₹50ಲಕ್ಷ ನೀಡುವೆ!: ನಟ ಇಜಾಝ್ ಖಾನ್

ನ್ಯೂಸ್ ಕನ್ನಡ ವರದಿ: ದೇಶದ್ಯಾಂತ ಕೋಲಾಹಲ ಎಬ್ಬಿಸಿರುವ, ಜನರ ಆಕ್ರೋಶಕ್ಕೆ ಕಾರಣವಾಗಿರುವ ಉನ್ನಾವೊ ಮತ್ತು ಕತುವಾ ಅತ್ಯಾಚಾರ ಪ್ರಕರಣಗಳ ವಿರುದ್ಧ ಎಲ್ಲಾ ಕಡೆಗಳಲ್ಲೂ ಪ್ರತಿಭಟನೆ, ಖಂಡನೆ ವ್ಯಕ್ತವಾಗುತ್ತಿದೆ, ಈ ವಿಷಯದಲ್ಲಿ ಮೌನವಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ಕೊನೆಗೂ ಮೌನ ಮುರಿದು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಎಂಟು ವರ್ಷದ ಆಸಿಫಾ ಸಾಮೂಹಿಕ ಅತ್ಯಾಚಾರ ಹಾಗು ಭೀಬತ್ಸ ಕೊಲೆ ಪ್ರಕರಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ, ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕರಣದ ಕುರಿತು ವ್ಯಾಪಕ ಚರ್ಚೆ ಮತ್ತು ಹ್ಯಾಷ್ ಟ್ಯಾಗ್ ಕ್ಯಾಂಪೇನ್ ನಡೆಯುತ್ತಿದೆ.

ಇದೀಗ ಈ ಎರಡು ಅತ್ಯಾಚಾರ ಪ್ರಕರಣದ ಕುರಿತು ನಟ ಇಜಾಝ್ ಖಾನ್ ನೀಡಿರುವ ವಿವಾದಾತ್ಮಕ ಹೇಳಿಕೆ ವೀಡಿಯೋ ವೈರಲ್ ಆಗಿದೆ . ಆಸಿಫಾಳನ್ನು ಅತ್ಯಾಚಾರ ಮಾಡಿದ ಆರೋಪಿಗಳ ತಲೆ ಕತ್ತರಿಸಿ ತಂದವರಿಗೆ ನಾನು 50ಲಕ್ಷ ನೀಡುವೆ, ನನಗೆ ಆಗುತ್ತಿದ್ದರೆ ನಾನೇ ಹೋಗಿ ತಲೆ ಕತ್ತರಿಸುತ್ತಿದ್ದೆ, ಕಾಶ್ಮೀರದ ಭಯೋತ್ಪಾದಕರೇ ನೀವು ಅಮಾಯಕರನ್ನು ಕೊಲ್ಲುವ ಬದಲಾಗಿ ಇಂತಹ ಪಾಪಿಗಳನ್ನು ಕೊಂದು ಹಾಕಿ ಎಂದು ಆಕ್ರೋಶಭರಿತ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಮಹಿಳಾ ಮಂತ್ರಿಗಳ ವಿರುದ್ಧ ಮತ್ತು ಉನ್ನಾವೊ ಪ್ರಕರಣದ ಆರೋಪಿ ಶಾಸಕನ ವಿರುದ್ಧ ಕಿಡಿಕಾರಿದ ಇಜಾಝ್ ಖಾನ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಕಾನೂನು ಕೈಗೆತ್ತಿಕೊಳ್ಳುವ ಹೇಳಿಕೆ ನೀಡಿರುವ ಇಜಾಝ್ ವೀಡಿಯೋ ಕುರಿತು ಈ ವರಗೆ ಯಾವುದೇ ದೂರು ದಾಖಲಾಗಿಲ್ಲ.

ವೀಡಿಯೋ ವೀಕ್ಷಿಸಿ..

Leave a Reply

Your email address will not be published. Required fields are marked *