ದಿನೇಶ್ ಗುಂಡೂರಾವ್ ಓರ್ವ ಮಾನಸಿಕ ಅಸ್ವಸ್ಥ: ಶೋಭಾ ಕರಂದ್ಲಾಜೆ

ನ್ಯೂಸ್ ಕನ್ನಡ ವರದಿ(15-04-2018): ಯೋಗಿ ಆದಿತ್ಯನಾಥ್ ಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳಿದ ಸಚಿವ ಗುಂಡುರಾವ್ ಓರ್ವ ಮಾನಸಿಕ ಸ್ಥಿಮಿತವಿಲ್ಲದ ಅಸ್ವಸ್ಥ ಎಂದು ಸಂಸದೆ ಶೋಭಾ ಕರಂದ್ಸಾಜೆ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಶೋಭಾ, ಯೋಗಿ ಆದಿತ್ಯನಾಥ್ ಅವರು ರಾಜಕಾರಣಿಯಾಗಿದ್ದರೂ ನಾಥ್ ಪಂತದಿಂದ ಬಂದ ಓರ್ವ ಯೋಗಿಯಾಗಿದ್ದಾರೆ. ಅದರೊಂದಿಗೆ ತನ್ನ ರಾಜ್ಯದ ಅಭಿವೃದ್ಧಿಯನ್ನು ಮಾಡುತ್ತಿರುವ ಯೋಗಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳಿದ ದಿನೇಶ್ ಗುಂಡುರಾವ್ ಓರ್ವ ಮಾನಸಿಕ ಅಸ್ವಸ್ಥ ಎಂದರು.

ಯೋಗಿ ಆದಿತ್ಯನಾಥ್ ಪ್ರತಿನಿಧಿಸುತ್ತಿರುವ ಗೋರಕ್ ಪುರಕ್ಕೂ ನಮ್ಮ ಕರ್ನಾಟಕಕ್ಕೂ ಬಹಳ ಹತ್ತಿರದ ಸಂಬಂಧ ಇದೆ. ನಾಥ ಪಂಥದ ಗೋರಕ್ ಪುರ ಮಠ ಆದಿಚುಂಚನಗಿರಿ ಮಠಗಳ ನಡುವೆ ಬಾಂಧವ್ಯ ಇದೆ. ಇಷ್ಟೆಲ್ಲಾ ಗೊತ್ತಿದ್ದೂ ದಿನೇಶ್ ಗುಂಡೂರಾವ್ ನಿನ್ನೆ ಯೋಗಿ ಆದಿತ್ಯನಾಥ್ ಗೆ ಚೆಪ್ಪಲಿಯಲ್ಲಿ ಹೊಡೆಯಿರಿ ಎಂದಿದ್ದಾರೆ. ಅವರ ವಿರುದ್ಧ ನಾಳೆ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಿದ್ದೇವೆ ಎಂದರು.

Leave a Reply

Your email address will not be published. Required fields are marked *