ರಾಮಮಂದಿರವನ್ನು ಭಾರತೀಯ ಮುಸ್ಲಿಮರು ಕೆಡವಲಿಲ್ಲ: ಮೋಹನ್ ಭಾಗವತ್!

ನ್ಯೂಸ್ ಕನ್ನಡ ವರದಿ-(16.04.18): ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಮತ್ತೂಮ್ಮೆ ಅಯೋಧ್ಯೆ ವಿವಾದವನ್ನು ಕೆದಕಿದ್ದಾರೆ. “ಭಾರತೀಯ ಮುಸ್ಲಿಮರು ಅಯೋಧ್ಯೆಯಲ್ಲಿನ ಮೂಲ ರಾಮ ಮಂದಿರವನ್ನು ಕೆಡಹಿಲ್ಲ; ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಪುನರ್‌ ನಿರ್ಮಿಸುವ ನಮ್ಮ ಹೋರಾಟ ಮುಂದುವರಿಯತ್ತದೆ‌ ಮತ್ತು ನಾವದನ್ನು ನಿರ್ಮಿಸಿಯೇ ಸಿದ್ಧ ‘ ಎಂದು ಭಾಗವತ್‌ ಹೇಳಿದ್ದಾರೆ.

ಪಲ್ಘಾರ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಹೊರಗಿನಿಂದ ಭಾರತದೊಳಗೆ ಪ್ರವೇಶ ಮಾಡಿದ್ದ ಮುಸ್ಲಿಮರು ರಾಮ ದೇಗಲುವನ್ನು ಧ್ವಂಸಗೊಳಿಸಿದ್ದರು. ಇದೀಗ ಮತ್ತೆ ಆ ಸ್ಥಳದಲ್ಲಿ ದೇವಾಲಯ ನಿರ್ಮಾಣ ಮಾಡುವುದು ಜನರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸದಿದ್ದರೆ ಹಿಂದೂ ಸಂಸ್ಕತಿಯ ಬೇರುಗಳನ್ನು ತುಂಡಾದಂತೆ. ಅಯೋಧ್ಯೆಯಲ್ಲಿ ಎಲ್ಲಿ ಮೂಲ ರಾಮ ಮಂದಿರ ಇತ್ತೋ ಅಲ್ಲೇ ಮತ್ತೆ ರಾಮ ಮಂದಿರವನ್ನು ನಿರ್ಮಿಸಲಾಗುವುದು; ಆ ಬಗ್ಗೆ ಸಂದೇಹವೇ ಬೇಡ’ ಎಂದು ಭಾಗವತ್‌ ಹೇಳಿದರು.

Leave a Reply

Your email address will not be published. Required fields are marked *