ಮತ್ತೆ ಗಾರೆ ಕೆಲಸಕ್ಕಿಳಿದ ಕಾಮಿಡಿ ಸ್ಟಾರ್​ ಚಿಕ್ಕಣ್ಣ! ಅಷ್ಟಕ್ಕೂ ಗಾರೆ ಕೆಲಸಕ್ಕಿಳಿಯಲು ಕಾರಣವೇನು ಗೊತ್ತೇ…?

ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್​ ನಟರ ಜೊತೆ ಹಾಸ್ಯ ನಟನಾಗಿ ತೆರೆ ಹಂಚಿಕೊಳ್ಳುತ್ತಿರುವ ಕಾಮಿಡಿ ಸ್ಟಾರ್​ ಚಿಕ್ಕಣ್ಣ ಇತ್ತೀಚೆಗೆ ಗಾರೆ ಕೆಲೆಸ ಮಾಡುತ್ತಿದ್ದಾರಂತೆ.

ಹೌದು ಮನೆ ನಿರ್ಮಾಣ ಕಾರ್ಯದಲ್ಲಿ ನಿರತರಾಗಿರುವ ಚಿಕ್ಕಣ್ಣ ಗೋಡೆಗಳಿಗೆ ಪ್ಲಾಸ್ಟಿಂಗ್ ಮಾಡುತ್ತಾ ಬೆವರು ಹರಿಸುತ್ತಿದ್ದಾರೆ.

ಲಾಕ್​ಡೌನ್​ನಲ್ಲಿ ಚಿಕ್ಕಣ್ಣ ಗಾರೆ ಕೆಲಸ ಮಾಡಲು ಕಾರಣ ಇದೆ. ಮೈಸೂರಿನ ಬಳಿ ತೋಟದ ಮನೆ ಮಾಡಿಕೊಂಡಿರುವ ಚಿಕ್ಕಣ್ಣ, ಅಲ್ಲಿ ಮನೆ ಕಟ್ಟಿಸುತ್ತಿದ್ದು, ಲಾಕ್​ಡೌನ್​ನಿಂದಾಗಿ ಅವರಿಗೆ ಗಾರೆ ಕೆಲಸದವರು ಸಿಗುತ್ತಿಲ್ಲವಂತೆ.

ಈ ಕಾರಣದಿಂದಾಗಿ ಚಿಕ್ಕಣ್ಣ ತಮ್ಮ ಮನೆಯ ಕೆಲಸವನ್ನು ತಾವೇ ಮಾಡಲು ಮುಂಧಾಗಿದ್ದಾರಂತೆ. ಗಾರೆ ಕೆಲಸ ಮಾಡಿ ಅಭ್ಯಾಸ ಇರುವ ಈ ನಟ ಗೋಡೆಗಳಿಗೆ ಪ್ಲಾಸ್ಟಿಂಗ್ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

ಚಿಕ್ಕಣ್ಣ ಅವರ ಈ ಕೆಲಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿಕ್ಕಣ್ಣ ವೃತ್ತಿ ಬದುಕಿಗೆ ತಿರುವು ನೀಡಿದ್ದು ಯಶ್ ಅಂತ ಚಿಕ್ಕಣ್ಣ ಸದಾ ನೆನಪಿಸಿಕೊಳ್ಳುತ್ತಿರುತ್ತಾರೆ.

Leave a Reply

Your email address will not be published. Required fields are marked *