ಜನರ ಸಂಕಷ್ಟಕ್ಕೆ ಸ್ಪಂದಿಸದ ಸಂಸದ ಅನಂತಕುಮಾರ್ ನಾಪತ್ತೆ; ಹುಡುಕಿಕೊಡುವಂತೆ ಜನರಿಂದ ದೂರು !

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕೊರೋನಾ ಮಹಾಮಾರಿಯಿಂದ ತತ್ತರಿಸಿ ಹೋಗುತ್ತಿದೆ ಜಿಲ್ಲೆಯಲ್ಲಿ ಕೋವಿಡ್ ನಿಂದ ದಿನನಿತ್ಯವೂ ಸಾವಾಗುತ್ತಿದೆ ಈ ಸಂದರ್ಭದಲ್ಲಿ ಜಿಲ್ಲೆಯ ಜನರಿಗೆ ಸೌಜನ್ಯಕ್ಕೂ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ನೆರವಾಗದೆ ಇರೋದು ಜಿಲ್ಲೆಯ ಜನರ ಆಕ್ರೋಷಕ್ಕೆ ಕಾರಣವಾಗಿದೆ…ಕಳೆದ ನಾಲ್ಕು ತಿಂಗಳ ಹಿಂದೆ ಸಂಸದ ಅನಂತಕುಮಾರ ಹೆಗಡೆ ಅನಾರೋಗ್ಯಕ್ಕೆ ಒಳಗಾಗಿ ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಬಂದಿದ್ರು ಬಳಿಕ ಮುಂದಿನ ಒಂದೆರಡು ತಿಂಗಳು ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಾಗಿಯಾಗಲ್ಲ ಎನ್ನೋ ಬಗ್ಗೆ ತಮ್ಮ ಆಪ್ತ ಕಾರ್ಯದರ್ಶಿ ಕಡೆಯಿಂದ ಪ್ರಕಟಣೆ ಕೂಡಾ ನೀಡಿದ್ರು ಈ ಹೊತ್ತಲ್ಲಿ ಸಂಸದರು ಬೇಗ ಗುಣಮುಖರಾಗಿ ಬರಲೆಂದು ಜಿಲ್ಲೆಯ ಜನ ಸಾಮಾಜಿಕ ಜಾಲತಾಣದ ಮೂಲಕ ಹಾರೈಸಿದ್ದರು.

ಆದ್ರೆ ಈಗ ಕ್ಷೇತ್ರದ ಜನ ಸಾಯುತ್ತಿದ್ದಾರೆ ಅದೆಷ್ಟೊ ಸಮಸ್ಯೆಯಿಂದ ಬಳಲುತ್ತಿದ್ದಾರೆ ಆದ್ರೆ ಸಂಸದ ಅನಂತಕುಮಾರ ಹಗಡೆ ಸೌಜನ್ಯಕ್ಕೂ ಕೂಡಾ ಜಿಲ್ಲೆಯ ಜನರಿಗೆ ದೈರ್ಯ ತುಂಬುವ ಕಾರ್ಯ ಮಾಡುತ್ತಿಲ್ಲ..ಕೋವಿಡ್ ನಿರ್ವಹಣೆಯಲ್ಲಿ ದಾರಿ ತಪ್ಪದಂತೆ ಉತ್ತರ ಕನ್ನಡ ಜಿಲ್ಲಾಡಳಿತದ ಅಧಿಕಾರಿಗೆ ಕಿವಿ ಹಿಂಡುವ ಕೆಲಸ ಕೂಡಾ ಸಂಸದರಿಂದ ಆಗುತ್ತಿಲ್ಲ. ಈಗಾಗಲೆ ಸಂಸದರು ಆರೋಗ್ಯವಾಗಿದ್ದಾರೆ ಮನೆಯಿಂದ ಹೊರಬಾರದ ಪಕ್ಷದಲ್ಲಿ ಕನಿಷ್ಟ ಆನ್ ಲೈನ್ ಮೂಲಖವಾದ್ರು ಅಧಿಕಾರಿಗಳ ಸಭೆ ಕರೆದು ಜನರಿಗೆ ಸಮಸ್ಯೆ ವಾಗದಂತೆ ನೋಡಿಕೊಳ್ಳಿ ಎಂದು ಹೇಳ ಬಹುದಿತ್ತು.

ಆ ಕೆಲಸ ಕೂಡಾ ಸಂಸದರಿಂದ ಆಗುತ್ತಿಲ್ಲ. ಹೀಗೆ ಸಂಸದರ ಕ್ಷೇತ್ರದ ಬಗ್ಗೆ ಇರುವ ನಿರ್ಲಕ್ಷದ ಕಾಳಜಿ ಬಗ್ಗೆ ಜಿಲ್ಲೆಯ ಜನ ಬೇಸರದ ಜತೆ ಎಂತ ಸಂಸದರನ್ನು ನಾವು ಆಯ್ಕೆ ಮಾಡಿದೆವು ಎಂದು ಈಗ ಮರಗುತ್ತಿದ್ದಾರೆ. ಆದ್ರೆ ಬಿಜೆಪಿಯ ಪುಢಾರಿಗಳು ಮಾತ್ರ ಸಂಸದರನ್ನ ಹೊಗಳುವುದು ಬಿಟ್ಟಿಲ್ಲ.

ಸಂಸದ ಅನಂತಕುಮಾರ ಹೆಗಡೆ ಹಿಂದೂಹುಲಿ ಎಂದೇ ಖ್ಯಾತರಾಗಿರುವ ರಾಜಕಾರಣಿ. ಉತ್ತರಕನ್ನಡ ಜಿಲ್ಲೆಯಿಂದ ಕಳೆದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತಕುಮಾರ ಹೆಗಡೆಗೆ ಅಪಾರ ಅಭಿಮಾನಿಗಳು ಸಹ ಇದ್ದಾರೆ. ಒಮ್ಮೆ ಕೇಂದ್ರ ಸಚಿವರಾಗಿ ಸಹ ಆಯ್ಕೆಯಾಗಿದ್ದ ಅನಂತಕುಮಾರ ಹೆಗಡೆ ಈಗ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಸದ್ಯ ಕೊರೋನಾ ಎರಡನೇ ಅಲೆಯಲ್ಲಿ ಇಡೀ ದೇಶವೇ ನಲುಗಿದೆ.

ರಾಜ್ಯದಲ್ಲಿಯೇ ಪಾಸಿಟಿವಿಟಿ ರೇಟ್ ನಲ್ಲಿ ಉತ್ತರಕನ್ನಡ ಜಿಲ್ಲೆಯೇ ಮೊದಲಾಗಿದ್ದು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ, ಸಾವನ್ನಪ್ಪುವವರ ಸಂಖ್ಯೆ ಅಧಿಕವಾಗಿರುವುದರಿಂದ ಜನರು ಆತಂಕದಲ್ಲಿಯೇ ಇದ್ದಾರೆ. ಇನ್ನು ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ಸಹ ಸಿಗುತ್ತಿಲ್ಲ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಸಹ ಇದೆ.

ಆದರೆ ಜನರ ನೋವಿನಲ್ಲಿ ನಿಲ್ಲಬೇಕಾಗಿದ್ದ ಸಂಸದ ಅನಂತಕುಮಾರ ಹೆಗಡೆ ಮಾತ್ರ ಈವರೆಗೂ ತುಟಿಕ್ ಪಿಟಿಕ್ ಎಂದಿಲ್ಲ. ಮನೆಯಿಂದಲೇ ಹೊರಬರದೇ ಎಲ್ಲಿದ್ದಾರೆ ಎಂದು ಸಹ ತಿಳಿಸದೇ ಗೌಪ್ಯವಾಗಿದ್ದಾರೆ ಎನ್ನುವ ಆರೋಪ ಜನರಿಂದ ಕೇಳಿ ಬಂದಿದೆ. ಆರು ಬಾರಿ ಸಂಸದರಾಗಿ ಕ್ಷೇತ್ರದಿಂದ ಆಯ್ಕೆಯಾಗಿದ್ದಕ್ಕಾದರೂ ಜನರ ನೋವಿನಲ್ಲಿ, ಜನರ ಸಮಸ್ಯೆ ಬಗೆಹರಿಸುವಲ್ಲಿ ಸಂಸದರು ಮುಂದೆ ಇರಬೇಕಿತ್ತು. ಆದರೆ ಈವರೆಗೂ ಜನರ ಮುಂದೆಯೇ ಬರದೇ ನಿರ್ಲಕ್ಷತನ ತೋರುತ್ತಿದ್ದಾರೆನ್ನುವುದು ಜನರ ಆರೋಪವಾಗಿದೆ.

ಬಹುತೇಕ ಎಲ್ಲಾ ಜಿಲ್ಲೆಯಲ್ಲಿ ಸಂಸದರು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದವರ ಪರ, ಅವರಿಗೆ ವ್ಯವಸ್ಥೆಗಳನ್ನ ಕಲ್ಪಿಸಲು ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ವ್ಯವಸ್ಥೆಗಳನ್ನ ಒದಗಿಸಿಕೊಡಲು ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಆದರೆ ಉತ್ತರಕನ್ನಡ ಸಂಸದರು ಈವರೆಗೂ ಎಲ್ಲಿದ್ದಾರೆ ಎನ್ನುವುದೇ ತಿಳಿಯದಂತಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಹ ಜನರು ಸಾಕಷ್ಟು ಆಕ್ರೋಶವನ್ನ ಹೊರಹಾಕುತ್ತಿದ್ದಾರೆ.

ಇನ್ನು ಈ ಬಗ್ಗೆ ಬಿಜೆಪಿ ಮುಖಂಡರ ಬಳಿ ಕೇಳಿದ್ರೆ ಸಂಸದರ ಆರೋಗ್ಯ ಸರಿಯಿಲ್ಲ ಎನ್ನುವುದು ತಿಳಿದಿದೆ. ಕೊರೋನಾದಲ್ಲಿ ರಸ್ತೆಗೆ ಬಂದು ಕೆಲಸ ಮಾಡೋದು ಅಗತ್ಯವಿಲ್ಲ. ಅವರು ಮನೆಯಲ್ಲಿಯೇ ಕುಳಿತು ಅಧಿಕಾರಿಗಳ ಜೊತೆ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ.

ಅನಂತಕುಮಾರ ನಾಪತ್ತೆಯಾಗಿದ್ದು ಅವರನ್ನ ಹುಡುಕಿಕೊಡುವಂತೆ ಉತ್ತರಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸೇರುವ ಕಿತ್ತೂರು ತಾಲೂಕಿನಲ್ಲಿ ತಹಶೀಲ್ದಾರ್‌ಗೆ ದೂರು ಕೊಟ್ಟಿದ್ದು ಇನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಕಾರವಾರದಲ್ಲಿ ಎಸ್‌ಪಿ ಗೆ ದೂರನ್ನ ಕೊಟ್ಟಿದ್ದಾರೆ. ಜನರಿಂದ ಆಯ್ಕೆಯಾದವರು ಈಗಲಾದರೂ ಜನರ ಮುಂದೆ ಬರಲಿ. ಅನಾರೋಗ್ಯವಿದ್ದರೆ ಸಾಮಾಜಿಕ ಜಾಲತಾಣಗಳ ಮೂಲಕವಾದರೂ ಜನರ ನೋವಿಗೆ ಸ್ಪಂದಿಸಲಿ ಎನ್ನುವುದು ಜನರ ಅಭಿಪ್ರಾಯ.

ಒಟ್ಟಿನಲ್ಲಿ ಆರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತಕುಮಾರ ಹೆಗಡೆ ಕೊರೋನಾದಂತಹ ಸಂದರ್ಭದಲ್ಲಿ ಜನರ ಪರ ಕೆಲಸ ಮಾಡುವುದನ್ನ ಮರೆತಿರುವುದು ನಿಜಕ್ಕೂ ದುರಂತವೇ.

Leave a Reply

Your email address will not be published. Required fields are marked *