‘ಸುಳ್ಳು ಸುದ್ದಿ’ ಕಡಿವಾಣಕ್ಕೆ ಕರ್ನಾಟಕದಿಂದಲೇ ಮುಹೂರ್ತ ರೆಡಿಮಾಡಿದ ಫೇಸ್ಬುಕ್! ಹೇಗೆ ಗೊತ್ತೇ?

ಕೇಂಬ್ರಿಡ್ಜ್ ಅನಾಲಿಟಿಕಾ ಘಟನೆಯ ನಂತರ ಇದೀಗ ಎಚ್ಚೆತ್ತುಕೊಂಡಿರುವ ಫೇಸ್‌ಬುಕ್ ಸಂಸ್ಥೆ ಇದೀಗ ಭಾರತದಲ್ಲಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ರಾಜಕೀಯವಾಗಿ ತನ್ನ ಮಾಧ್ಯಮ ಬಳಕೆಯಾಗುತ್ತಿರುವುದನ್ನು ಕಂಡುಕೊಂಡಿರುವ ಫೇಸ್‌ಬುಕ್ ಇದೇ ಮೊದಲ ಬಾರಿ ಭಾರತದಲ್ಲಿ ತನ್ನದೇ ತಂಡದಿಂದ ಸತ್ಯ ಸಂಗತಿ ಪರಿಶೀಲಿಸುವ ಪ್ರಯತ್ನಕ್ಕೆ ಮುಂದಾಗಿದೆ. ವಿಶೇಷವೆಂದರೆ, ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕದಲ್ಲಿಯೇ ಮೊದಲು ಇಂತಹ ಪ್ರಯೋಗಕ್ಕೆ ಫೇಸ್‌ಬುಕ್‌ ಸಂಸ್ಥೆ ಮುಂದಾಗಿದ್ದು, ಕ್ಯಾಲಿಫೋನಿರ್ಯಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಫೇಸ್‌ಬುಕ್ ನೌಕರರು ಕರ್ನಾಟಕದಲ್ಲಿ ಹಂಚಿಕೊಳ್ಳುವ ಸುದ್ದಿಗಳ ನಿಜಾಂಶವನ್ನು ತಜ್ಞರ ತಂಡವು ಪರಿಶೀಲನೆಗೆ ಒಳಪಡಿಸಲಿದೆ ಎಂದು ವರದಿಯಾಗಿದೆ.

ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ಫೆಸ್‌ಬುಕ್‌ನಲ್ಲಿ ಸುಳ್ಳು ಸುದ್ದಿಗಳು ಹರಡುವುದು ಹೆಚ್ಚಾಗುತ್ತಿದೆ. ಹಾಗಾಗಿ ಕರ್ನಾಟಕ ರಾಜ್ಯವನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ. ಸೋಮವಾರ ಸಂಜೆಯಿಂದಲೇ ಇದು ಅನುಷ್ಠಾನಕ್ಕೆ ಬಂದಿದದ್ದು, ಕ್ರಮೇಣ ಈ ಕಾರ್ಯಕ್ರಮವನ್ನು ಇನ್ನಷ್ಟು ಬಲಪಡಿಸುತ್ತೇವೆ ‘ ಎಂದು ಫೇಸ್‌ಬುಕ್ ವಕ್ತಾರರರು ತಿಳಿಸಿದ್ದಾರೆ.

ಫೇಸ್‌ಬುಕ್‌ ಬಳಕೆದಾರರು ತಮ್ಮ ವಯಕ್ತಿಕ ಹಾಗೂ ಫೆಸ್‌ಬುಕ್ ಪೇಜ್‌ಗಳಲ್ಲಿ ಸುಳ್ಳು ಸುದ್ದಿಯನ್ನು ಹಂಚಿಕೊಂಡರೆ ಅಥವಾ ಈ ಹಿಂದೆ ಹಂಚಿಕೊಂಡಿದ್ದರೆ, ಅದನ್ನು ಪತ್ತೆಹಚ್ಚುವ ಕೆಲಸವನ್ನು ಫೆಸ್‌ಬುಕ್ ಮಾಡಲು ಹೊರಟಿದೆ. ತಟಸ್ಥ ಸಂಸ್ಥೆಯಿಂದ ಪರಿಶೀಲನೆಗೆ ಒಳಪಡಿಸುವುದು ಸುಳ್ಳು ಸುದ್ದಿ ಹರಡುವುದನ್ನು ತಡೆಯುವ ಸಮರದ ಒಂದು ಭಾಗ ಎಂದು ಫೇಸ್‌ಬುಕ್ ಹೇಳಿದೆ. ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನವಾಗಲಿರುವ ಫೇಸ್‌ಬುಕ್ ಸಂಸ್ಥೆಯ ಈ ಕಾರ್ಯಕ್ಕೆ ಮುಂಬೈನ ‘ಬೂಮ್’ ಎಂಬ ಸ್ವತಂತ್ರ ಡಿಜಿಟಲ್‌ ಪತ್ರಿಕೋದ್ಯಮ ಸಂಸ್ಥೆ ಜೊತೆಯಲ್ಲಿ ಕೈಜೋಡಿಸಿದೆ. ವಿಶ್ವಾಸಾರ್ಹತೆ ವೃದ್ಧಿಗಾಗಿ ಸಂಸ್ಥೆ ಈ ಕ್ರಮ ಕೈಗೊಂಡಿದೆ ಎಂದು ಬೂಮ್ ಸಂಸ್ಥೆಯ ಸಂಸ್ಥಾಪಕರಾದ ಗೋವಿಂದರಾಜ್ ಯತಿರಾಜ್ ಅವರು ತಿಳಿಸಿದ್ದಾರೆ.

ಮಾಹಿತಿ ಕನ್ನಡ ಗಿಝ್ಬೋಟ್

Leave a Reply

Your email address will not be published. Required fields are marked *