ಎರ್ಮಾಳು ಬಳಿ ದ್ವಿಚಕ್ರ ವಾಹನಕ್ಕೆ ಅಡ್ಡಬಂದ ನವಿಲು; ಗಂಭೀರ ಗಾಯಗೊಂಡ ಸವಾರ ಸ್ಥಳದಲ್ಲೇ ಸಾವು

ಉಚ್ಚಿಲ: ನವಿಲೊಂದು ಅಚಾನಕ್ಕಾಗಿ ಅಡ್ಡಬಂದ ಪರಿಣಾಮ ದ್ವಿಚಕ್ರವಾಹನ ಸವಾರ ಕಂಟ್ರೋಲ್ ತಪ್ಪಿ ಡಿವೈಡರ್ ಮೇಲೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಡುಬಿದ್ರೆ ಸಮೀಪದ ಎರ್ಮಾಳಿನಲ್ಲಿ ನಡೆದಿದೆ.

ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬೆಳಪು ಗ್ರಾಮದ ನಿವಾಸಿ ಅಬ್ದುಲ್ಲಾ ಮೃತ ಯುವಕ. ಕಾಪು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದ್ವಿಚಕ್ರ ವಾಹನ ಸವಾರ ಅಬ್ದುಲ್ಲಾ (24) ಬೆಳಪು ಗ್ರಾಮದಿಂದ ಪಡುಬಿದ್ರೆಯ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭ ಹೆದ್ದಾರಿಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನವಿಲೊಂದು ಹಾರಿ ದಾಟಲು ಪ್ರಯತ್ನಿಸಿದೆ. ಈ ಸಂದರ್ಭದಲ್ಲಿ ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿದ್ದ ಅಬ್ದುಲ್ಲಾ ತಲೆಗೆ ಬಡಿದಿದೆ.

ದ್ವಿಚಕ್ರವಾಹನ ಕಂಟ್ರೋಲ್ ತಪ್ಪಿ ಡಿವೈಡರ್ ಮೇಲೆ ಬಡಿದಿದೆ. ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಾಹನದ ರಭಸಕ್ಕೆ ನವಿಲು ಕೂಡ ಸಾವಿಗೀಡಾಗಿದೆ. ಪಡುಬಿದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ಅಬ್ದುಲ್ಲಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *