ಮೀರತ್’ನ ಶಾಹೀ ಜಾಮಾ ಮಸೀದಿಯ ನವೀಕರಣದ ಖುರಾನ್ ಕೆತ್ತನೆಯ ಕಾರ್ಯದಲ್ಲಿ ತೊಡಗಿರುವ ಮೂರು ಮಂದಿ ಹಿಂದೂ ಕುಶಲಕರ್ಮಿಗಳು

ಮೀರತ್ ನಗರದ ಶಾಹೀ ಜಾಮಾ ಮಸೀದಿಯ ನವೀಕರಣಕ್ಕೆ ಮೂವರು ಹಿಂದೂ ಯುವಕರು ಕೈಜೋಡಿಸಿದ್ದು, ಭಾರತದ ಕೋಮು ಸೌಹಾರ್ದತೆಗೆ ಜ್ವಲಂತ ಉದಾಹರಣೆ ನೀಡಿದ್ದಾರೆ. ವಿನೋದ್, ಪಪ್ಪು ಮತ್ತು ಧರ್ಮವೀರ್ ಎಂಬ ಮೂವರು ಹಿಂದೂ ಯುವಕರು, ಶಾಹೀ ಜಾಮಾ ಮಸೀದಿಯ ನವೀಕರಣಕ್ಕೆ ಶ್ರಮಿಸುತ್ತಿದ್ದಾರೆ.

ಮಸೀದಿಯ ದ್ವಾರಗಳ ಮೇಲೆ ಪವಿತ್ರ ಖುರಾನ್ ಕೆತ್ತನೆಯ ಕಾರ್ಯದಲ್ಲಿ ಈ ಮೂವರೂ ಹಿಂದೂ ಯುವಕರು ನಿರತರಾಗಿದ್ದಾರೆ. ಈ ಮಸೀದಿ ಮೀರತ್ ನಗರದ ಅತ್ಯಂತ ಹಳೆಯ ಸ್ಮಾರಕಗಳಲ್ಲಿ ಒಂದಾಗಿದೆ. ಇದನ್ನು ಸುಮಾರು 700 ವರ್ಷಗಳ ಹಿಂದೆ ಸುಲ್ತಾನ್ ನಸಿರುದ್ದೀನ್ ಷಾ ನಿರ್ಮಿಸಿದ್ದರು.

ವಿಭಿನ್ನ ಧಾರ್ಮಿಕ ಸ್ಮಾರಕಗಳಲ್ಲಿ ವಿವಿಧ ಪವಿತ್ರ ಗ್ರಂಥಗಳ ಸಂದೇಶಗಳನ್ನು ಕೆತ್ತಿರುವ ಈ ಯುವಕರ ತಂಡ, ಈ ಕಲ್ಲಿನ ಕೆತ್ತನೆಗಳ ಕೆಲಸವು ಪ್ರತಿಯೊಬ್ಬರಿಗೂ ಧಾರ್ಮಿಕ ರೇಖೆಗಳನ್ನು ಮೀರಿ ಮತ್ತು ಯಾವುದೇ ತಾರತಮ್ಯವಿಲ್ಲದೆ ಸಾಮರಸ್ಯದಿಂದ ಬದುಕಲು ಸ್ಪೂರ್ತಿ ನೀಡುತ್ತವೆ ಎಂದು ವಿನಮ್ರವಾಗಿ ಹೇಳುತ್ತಾರೆ.

Leave a Reply

Your email address will not be published. Required fields are marked *