ಅಶ್ಲೀಲ ಸಿನಿಮಾ ನಿರ್ಮಿಸಿ ಬಂಧನಕ್ಕೊಳಗಾಗಿರುವ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಭಾರೀ ಹಣ ಪಡೆಯುತ್ತಿದ್ದದ್ದು ಹೇಗೆ ಗೊತ್ತಾ…?

ಅಶ್ಲೀಲ ಸಿನಿಮಾ ಮಾಡಿ ಅದನ್ನು ವಿವಿಧ ಆ್ಯಪ್​ಗಳ ಮೂಲಕ ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ಮುಂಬೈ ಪೊಲೀಸರು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಅವರನ್ನು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ. ಈಗ ಜುಲೈ 23ವರೆಗೆ ಪೊಲೀಸ್​ ಬಂಧನದಲ್ಲಿರಿಸಿ ಕೋರ್ಟ್​ ಆದೇಶ ಹೊರಡಿಸಿದೆ. ಈ ಮಧ್ಯೆ, ರಾಜ್​ ಕುಂದ್ರಾ ವಾಟ್ಸಾಪ್​ ಚಾಟ್​ ಲೀಕ್​ ಆಗಿದ್ದು, ಇದನ್ನು ಪೊಲೀಸರು ಮಹತ್ವದ ದಾಖಲೆ ಎಂದು ಪರಿಗಣಿಸಿದ್ದಾರೆ.

ರಾಜ್ ಕುಂದ್ರಾ ಮತ್ತು ಬ್ರಿಟನ್‌ನಲ್ಲಿ ವಾಸಿಸುತ್ತಿರುವ ಅವರ ಸಹೋದರ ಇಬ್ಬರೂ ಸೇರಿ ಕೆನ್ರಿನ್ ಹೆಸರಿನ ಕಂಪನಿಯನ್ನು ಆರಂಭಿಸಿದ್ದರು. ನೀಲಿ ಚಿತ್ರಗಳನ್ನು ಭಾರತದಲ್ಲಿ ಚಿತ್ರೀಕರಿಸಿ ನಂತರ ವಿ ಟ್ರಾನ್ಸ್‌ಫರ್ (ಫೈಲ್ ವರ್ಗಾವಣೆ ಸೇವೆ) ಮೂಲಕ ಅದು ಈ ಕಂಪನಿ ಸೇರುತ್ತಿತ್ತು. ಭಾರತದ ಸೈಬರ್ ಕಾನೂನಿಂದ ತಪ್ಪಿಸಿಕೊಳ್ಳಲು ಈ ಕಂಪನಿಯನ್ನು ವಿದೇಶದಲ್ಲಿ ನೋಂದಾಯಿಸಿಕೊಳ್ಳಲಾಗಿತ್ತು.

ರಾಜ್ ಬಂಧನದ ನಂತರ, ಅಕ್ಟೋಬರ್​ನಲ್ಲಿ ನಡೆದ ಕೆಲವು ವಾಟ್ಸಾಪ್ ಚಾಟ್‌ಗಳು ಹೊರ ಬಂದಿವೆ. ಪಾರ್ನ್​ ಸಿನಿಮಾ ವ್ಯವಹಾರದಿಂದ ರಾಜ್ ಕುಂದ್ರಾ ಸಾಕಷ್ಟು ಹಣ ಸಂಪಾದಿಸಿದ್ದರು ಎಂಬುದು ಬಹಿರಂಗವಾಗಿದೆ. ‘ಎಚ್ ಅಕೌಂಟ್ಸ್’ ಹೆಸರಿನ ಗ್ರೂಪ್​ನ ಚಾಟ್​ಗಳು ಇವಾಗಿದೆ. ಇದರ ಅಡ್ಮಿನ್​ ರಾಜ್ ಕುಂದ್ರಾ. ಈ ಗ್ರೂಪ್​ನಲ್ಲಿ ರಾಜ್ ಅವರು ತಮ್ಮ ಸಂಬಂಧಿ ಮತ್ತು ಕೆನ್ರಿನ್ ಪ್ರೊಡಕ್ಷನ್ ಹೌಸ್ ಅಧ್ಯಕ್ಷ ಪ್ರದೀಪ್ ಭಕ್ಷಿ ಅವರೊಂದಿಗೆ ಹಣದ ವ್ಯವಹಾರದ ಬಗ್ಗೆ ಚರ್ಚಿಸಿರುವುದು ಕಂಡು ಬಂದಿದೆ. ಸಿನಿಮಾದಿಂದ ದಿನಕ್ಕೆ ಲಕ್ಷಾಂತರ ರೂಪಾಯಿ ಹಣ ಬರುತ್ತಿತ್ತು ಎಂಬುದು ಚಾಟ್​ನಿಂದ ಗೊತ್ತಾಗಿದೆ.

ಈ ಗ್ರೂಪ್​ನಲ್ಲಿ ಐದು ಜನರಿದ್ದಾರೆ. ಪ್ರದೀಪ್ ಮತ್ತು ರಾಜ್ ಕುಂದ್ರಾ ನಡುವೆ ವ್ಯವಹಾರದಲ್ಲಿನ ಗಳಿಕೆ, ಮಾರ್ಕೆಟಿಂಗ್ ತಂತ್ರ, ಅಶ್ಲೀಲ ಸಿನಿಮಾದಲ್ಲಿ ನಟಿಸಿದವರಿಗೆ ಸಂಭಾವನೆ ಸಿಕ್ಕಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಮುಕ್ತ ಚರ್ಚೆ ನಡೆದಿದೆ. ಇದು ಪೊಲೀಸರಿಗೆ ಮಹತ್ವದ ದಾಖಲೆಯಾಗಿದೆ.

Leave a Reply

Your email address will not be published. Required fields are marked *