ಬಾದಾಮಿ ಕ್ಷೇತ್ರದಲ್ಲಿ ಮುಖಾಮುಖಿಯಾಗಲಿದ್ದಾರೆಯೇ ಯಡಿಯೂರಪ್ಪ-ಸಿದ್ದರಾಮಯ್ಯ??

ನ್ಯೂಸ್ ಕನ್ನಡ ವರದಿ(20-04-2018): ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಭೀತಿಯಲ್ಲಿರುವ ಸಿಎಂ ಸಿದ್ಧರಾಮಯ್ಯನವರಿಗೆ ಬಾದಾಮಿಯಲ್ಲೂ ಪ್ರಬಲ ಪೈಪೋಟಿ ನೀಡಲು ಬಿಜೆಪಿ ಪ್ಲಾನ್ ಹಾಕುತ್ತಿದೆ. ಹೇಗಾದರೂ ಮಾಡಿ ಸಿಧ್ದು ಅವರನ್ನು ಸೋಲಿಸಲು ಪಣತೊಟ್ಟಿರುವ ಬಿಜೆಪಿ ಬಾದಾಮಿಯಲ್ಲಿ ಸಿದ್ಧರಾಮಯ್ಯ ಸ್ಪರ್ಧಿಸುವುದಾದರೆ ಅವರ ವಿರುದ್ಧ ಯಡಿಯೂರಪ್ಪ ಅವರನ್ನು ಕಣಕ್ಕಿಳಿಸಲು ಯೋಚಿಸುತ್ತಿದೆ.

ಬಾದಾಮಿ ಕ್ಷೇತ್ರದಲ್ಲಿ ಕುರುಬರನ್ನು ಬಿಟ್ಟರೆ ಎರಡನೇ ದೊಡ್ಡ ಸಮುದಾಯವಾಗಿದೆ ಲಿಂಗಾಯತ ಸಮುದಾಯ. ಲಿಂಗಾಯತ ಅಭ್ಯರ್ಥಿಯನ್ನು ಇಲ್ಲಿ ಕಣಕ್ಕಿಳಿಸಿದರೆ ಲಿಂಗಾಯತ ಮತಗಳು ಕಾಂಗ್ರೆಸ್ ಪರ ವಾಲುವುದನ್ನು ತಡೆಗಟ್ಟುವ ಮೂಲಕ ಪ್ರಬಲ ಸ್ಪರ್ಧೆಯನ್ನೊಡ್ಡಬಹುದು ಎಂಬುವುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವಾಗಿದೆ.

ಯಡಿಯೂರಪ್ಪ ಈಗಾಗಲೇ ಶಿಕಾರಿಪುರದಿಂದ ನಾಮಪತ್ರ ಸಲ್ಲಿಸಿರುವುದರಿಂದ
ಬಾದಾಮಿಯಲ್ಲಿ ಸಿದ್ಧರಾಮಯ್ಯ ವಿರುದ್ಧ ಸ್ಪರ್ಧಿಸಲು ಯಡಿಯೂರಪ್ಪ ಉತ್ಸುಕರಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

Leave a Reply

Your email address will not be published. Required fields are marked *