ಬಿಜೆಪಿಯದ್ದು ಡೋಂಗಿತನ ಹಾಗೂ ಹುಸಿ ಹಿಂದುತ್ವ: ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಬಿಜೆಪಿಯದ್ದು ಡೋಂಗಿತನ ಹಾಗೂ ಹುಸಿ ಹಿಂದುತ್ವ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಂಜನಗೂಡು ದೇವಸ್ಥಾನ ನೆಲಸಮ ಸರ್ಕಾರದ ಗಮನದಲ್ಲಿ ಇತ್ತು.‌ ಸಿಎಎಸ್ ಪತ್ರ ಬರೆದಿದ್ದರು 15ರಿಂದ ಎಲ್ಲಾ ನೆಲಸಮ ಮಾಡಬೇಕು ಅಂತ ಈಗ ಸಾರ್ವಜನಿಕರಿಂದ ಒತ್ತಾಯ ಹೆಚ್ಚಾದ ನಂತರ ಸರ್ಕಾರ ಬಣ್ಣ ಬದಲಾಯಿದೆ ಎಂದು ಆರೋಪ ಮಾಡಿದರು. ಅಲ್ಲದೆ ಸರ್ಕಾರದ ಗಮನಕ್ಕೆ ಬರದೆ ದೇವಸ್ಥಾನ ತೆರವು ಸಾಧ್ಯನಾ ಎಂದು ಪ್ರಶ್ನಿಸಿದರು.

ನಂಜನಗೂಡು ದೇವಸ್ಥಾನ ಒಡೆಯಲು ಪ್ರೇರಣೆ, ಸೂಚನೆ ಮುಖ್ಯ ಕಾರ್ಯದರ್ಶಿ ಪತ್ರವಾಗಿದೆ. ಬಿಜೆಪಿಯವರು ಹೇಳೋದು ಹಿಂದುತ್ವ. ಹಿಂದು ದೇವಾಲಯವನ್ನು ಇವರ ಸರ್ಕಾರವೇ ನಾಶ ಮಾಡಿದೆ. ಮಾತು ರಾಮನ ಜಪ ಇಲ್ಲಿ ದೇವಸ್ಥಾನ ಕೆಡವೋದು.‌ ಗಮನಕ್ಕೆ ತರದೆ ಯಾವುದೆ ಚರ್ಚೆ ಮಾಡದೆ ನೆಲಸಮ ಮಾಡಿದ್ದು ಇವರ ಡೋಂಗಿತನ, ಹುಸಿ ಹಿಂದುತ್ವ ತೋರಿಸುತ್ತೆ. ಇವರಿಗೆ ರಾಜಕೀಯ ಹಿಂದುತ್ವ ದೇವರು ಹಾಗೂ ದೇವಸ್ಥಾನದ ಬಗ್ಗೆ ಇವರಿಗೆ ಯಾವುದೇ ಕಾಳಜಿ ಇಲ್ಲ ಎಂದು ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ಜಿಟಿ ದೇವೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ನಾವೇನು ಆಪರೇಷನ್ ಜೆಡಿಎಸ್ ಮಾಡ್ತಿಲ್ಲ. ಜಿ.ಟಿ.ದೇವೇಗೌಡರು ಮಾತಾಡಿದ್ದಾರೆ.‌ ಬೇರೆ ಯಾರು ಮಾತಾಡಿಲ್ಲ.‌ ಶ್ರೀನಿವಾಸ ಗೌಡ ಡಿಕೆಶಿ ಮಾತನಾಡಿದ್ದು ಗೊತ್ತಿಲ್ಲ. ಯಾರು ನಮ್ಮ ಪಕ್ಷದ ತತ್ವ ಸಿದ್ದಾಂತ ನಂಬಿ ಬರ್ತಾರೋ ಅವರಿಗೆ ಸ್ವಾಗತ ಎಂದರು.

Leave a Reply

Your email address will not be published. Required fields are marked *