ನೀವು ಜೈನಧರ್ಮೀಯನಲ್ಲ ಎಂದು ದಾಖಲೆ ಸಮೇತ ಸಾಬೀತು ಮಾಡಿ: ಅಮಿತ್ ಶಾಗೆ ಸಿದ್ದರಾಮಯ್ಯ!

ನ್ಯೂಸ್ ಕನ್ನಡ ವರದಿ-(21.04.18): ಅಮಿತ್ ಶಾ ಕರ್ನಾಟಕಕ್ಕೆ ಚುನಾವಣಾ ಪ್ರಚಾರಕ್ಕೆಂದು ಆಗಮಿಸಿದ್ದ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಮಿತ್ ಶಾ ಹಿಂದೂ ಧರ್ಮೀಯನಲ್ಲ ಜೈನ ಧರ್ಮ ಪಾಲಿಸುವ ವ್ಯಕ್ತಿ ಎಂದು ಹೇಳಿದ್ದರು. ಈ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ಅಮಿತ್ ಶಾ, ನಾನು ವೈಷ್ಣವ ಹಿಂದೂ ಧರ್ಮವನ್ನು ಪಾಲಿಸುವ ವ್ಯಕ್ತಿ ಎಂದು ಹೇಳಿದ್ದರು. ಇದೀಗ ಮತ್ತೆ ಅಮಿತ್ ಶಾ ಗೆ ಸವಾಲು ಹಾಕಿರುವ ಸಿದ್ದರಾಮಯ್ಯ, ನೀವು ಜೈನ ಧರ್ಮೀಯನಲ್ಲ ಎನ್ನುವುದನ್ನು ದಾಖಲೆ ಸಮೇತ ಸಾಬಿತು ಮಾಡಿ ಎಂದು ಸವಾಲು ಹಾಕಿದ್ದಾರೆ.

ಅಮಿತ್ ಶಾ ನನ್ನನ್ನು ಅಹಿಂದು ಎಂದು ಕರೆದಿದ್ದಾರೆ. ಆದರೆ ನಾನು ಅವರಿಗಿಂತ ಉತ್ತಮ ಹಿಂದೂವಾಗಿದ್ದೇನೆ. ಮಾನವೀಯ ಮೌಲ್ಯಗಳಿರುವ, ಕೋಮುವಾದಗಳಿಲ್ಲದ ಹಿಂದೂವಾಗಿದ್ದೇನೆ. ಇವರು ಕೇವಲ ಹೆಣದ ಮೇಲೆ ರಾಜಕೀಯ ಮಾಡುತ್ತಾರೆ. ಮಂಗಳೂರಿನಲ್ಲಿ ಗಲಭೆ ನಡೆದು ಇಬ್ಬರು ಮೃತಪಟ್ಟರೂ, ಇವರು ಒಬ್ಬರ ಮನೆಗೆ ಮಾತ್ರ ಭೇಟಿ ನೀಡುತ್ತಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಹೊರಟಿರುವ ಇವರಿಗೆ ನನ್ನ ಕುರಿತು ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *